Saturday, 22nd September 2018  

Vijayavani

ಸಿಎಂ ಜನತಾ ದರ್ಶನದಲ್ಲಿ ಸಿಗಲಿಲ್ಲ ನ್ಯಾಯ - ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ - ಸಿಎಂಗೆ ಪತ್ರ ಬರೆದು ನಾಲ್ವರು ಸುಸೈಡ್‌        ಬಿಎಸ್‌ವೈ ನಿವಾಸದಲ್ಲಿ ಬಿಗ್‌ ಮೀಟಿಂಗ್‌ - ಮೈತ್ರಿ ಸರ್ಕಾರದ ವಿರುದ್ಧ ಹೋರಾಟಕ್ಕೆ ರಣತಂತ್ರ        ಶೃಂಗೇರಿಯಲ್ಲಿ ಸಿಎಂ ಶತ್ರುಸಂಹಾರ ಯಾಗ - ಕಾರವಾರದಲ್ಲಿ ಡಿಸಿಎಂ ದೇವಿ ದರ್ಶನ - ಸಂಕಷ್ಟ ನಿವಾರಣೆಗೆ ದೇವರ ಮೊರೆ        ಜೆಡಿಎಸ್‌ಗೂ ಕಾಡ್ತಿದೆ ಅಪರೇಷನ್‌ ಭಯ - ಹಾಸನದಲ್ಲಿ ಜೆಡಿಎಲ್‌ಪಿ ಮೀಟಿಂಗ್‌ - ಶಾಸಕರನ್ನ ಹಿಡದಿಟ್ಟುಕೊಳ್ಳ ಗೌಡರ ತಂತ್ರ        ಒಡಿಸ್ಸಾದಲ್ಲಿ ಪ್ರಧಾನಿ ರೌಂಡ್ಸ್‌ - ವಿವಿದ ಅಭಿವೃದ್ಧಿಕಾರ್ಯಗಳಿಗೆ ಮೋದಿ ಚಾಲನೆ - ಹೊಸ ಒಡಿಸ್ಸಾ ಕಟ್ಟೋಣ ಎಂದ ಪ್ರಧಾನಿ        ರಫೇಲ್‌ ಯುದ್ಧ ವಿಮಾನಕ್ಕೆ ಓಕೆ ಎಂದ ಐಎಎಫ್‌- ಮೊದಲ ಪರೀಕ್ಷೆಯಲ್ಲಿ ಯಶಸ್ವಿ ಹಾರಾಟ - ಮೋದಿ ಸರ್ಕಾರಕ್ಕೆ ಬಿಗ್‌ ಬೂಸ್ಟ್‌       
Breaking News

ಅನಂತಕುಮಾರ ಹೆಗಡೆ ವಿವಾದಾತ್ಮಕ ಹೇಳಿಕೆ: ಸ್ವಪಕ್ಷೀಯರಿಂದಲೇ ವಿರೋಧ, ನಟ ಜಗ್ಗೇಶ್‌ ಹೇಳಿದ್ದೇನು?

Sunday, 18.02.2018, 5:06 PM       No Comments

ಬೆಂಗಳೂರು: ವಿವಾದಾತ್ಮಕ ಹೇಳಿಕೆ ಕೊಡುತ್ತಲೇ ಸುದ್ದಿಯಾಗುತ್ತಿರುವ ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ ವಿರುದ್ಧ ಇದೀಗ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿದೆ.

ರಾಜ್ಯದ ಮೂರು ಜಿಲ್ಲೆಯಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗದ ಜನರಿಗಷ್ಟೇ ಶುದ್ಧ ಕನ್ನಡ ಮಾತನಾಡಲು ಬರುತ್ತದೆ. ಉಳಿದವರಿಗೆ ಕನ್ನಡ ಮಾತನಾಡಲು ಯೋಗ್ಯತೆ ಇಲ್ಲ ಎಂದು ನೆನ್ನೆಯಷ್ಟೇ ಹೇಳಿಕೆ ನೀಡಿದ್ದ ಹೆಗಡೆ ವಿರುದ್ಧ ಇದೀಗ ಶಾಸಕ ಸುರೇಶ್ ಕುಮಾರ್ ತಿರುಗಿ ಬಿದ್ದಿದ್ದಾರೆ.

ಕೇಂದ್ರದ ಸಚಿವರಾಗಿ ಆ ಕನ್ನಡ, ಈ ಕನ್ನಡ, ಯೋಗ್ಯ ಕನ್ನಡ ಎನ್ನಬಾರದು. ಚಾಮರಾಜನಗರದಿಂದ ಬೀದರ್‌ ತನಕವೂ ಯೋಗ್ಯ ಕನ್ನಡ ಇದೆ. ಬೆಂಗಳೂರಿಗನಾಗಿ ನಾನು ಯೋಗ್ಯ ಕನ್ನಡವನ್ನು ಮಾತನಾಡುತ್ತೀನಿ. ಜವಾಬ್ದಾರಿಯುತ ಸ್ಥಾನದಲ್ಲಿದ್ದು ಈ ರೀತಿ ಮಾತನಾಡಬಾರದು. ಈ ಕೂಡಲೇ ಹೇಳಿಕೆ ವಾಪಸ್‌ ಪಡೆಯುವಂತೆ ಸುರೇಶ್‌ ಕುಮಾರ್‌ ಆಗ್ರಹಿಸಿದ್ದಾರೆ.

ಈ ಕುರಿತು ಬಿಜೆಪಿ ನಾಯಕ ಮತ್ತು ನಟ ಜಗ್ಗೇಶ್‌ ಪ್ರತಿಕ್ರಿಯಿಸಿದ್ದು, ಅನಂತಕುಮಾರ್ ಹೆಗ್ಡೆರವರೆ ನಾನು ತುಮಕೂರಿನ ಗ್ರಾಮೀಣ ಭಾಗದವನು. ನಮ್ಮದು ಗ್ರಾಮೀಣ ಕನ್ನಡ. ಅನಂತಕುಮಾರ್ ಹೆಗ್ಡೆ ವ್ಯಾಕರಣಬದ್ಧ ಕನ್ನಡ ಮಾತಾಡುತ್ತಾರೆ ಎಂಬ ಕಾರಣಕ್ಕೆ ನನಗಿಷ್ಟವಾದರು ಅಂದ ಮಾತ್ರಕ್ಕೆ ಬೇರೆ ಭಾಗದವರಿಗೆ ಕನ್ನಡ ಬರೋದಿಲ್ಲ ಎಂದು ಭಾವಿಸದಿರಿ. ಒಂದೊಂದು ಪ್ರಾಂತ್ಯಕ್ಕೂ ಒಂದು ಸೊಗಡಿದೆ. ಹಂಗಿಸಬೇಡಿ. ನೀವು ಮಂತ್ರಿ ಸಾಮಾನ್ಯನಲ್ಲ ಎಂದು ಟ್ವೀಟ್‌ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *

Back To Top