Wednesday, 19th September 2018  

Vijayavani

ಭಿನ್ನಮತ ಶಮನಕ್ಕೆ ಕೈ ಪಡೆ ಕಸರತ್ತು - ಸಂಪುಟದಲ್ಲಿ ಖಾಲಿ ಇರೋದು ಆರು, ಆಕಾಂಕ್ಷಿಗಳು ಹತ್ತಾರು        ರಾಜ್ಯ ಕೈ ಪಡೆಯಲ್ಲಿ ಬಂಡಾಯ ಶಮನಕ್ಕೆ ಸರ್ಕಸ್ - ಇತ್ತ ದಿಲ್ಲಿಯಲ್ಲಿ ಸಿದ್ದು ವಾಕಿಂಗ್ ಮೂಲಕ ರಿಲ್ಯಾಕ್ಸ್ - ರಾಹುಲ್ ಜತೆ ಮೀಟಿಂಗ್        ಸಂಪುಟಕ್ಕೆ ಸತೀಶ್​​​​​.. ಲೋಕಸಭೆಗೆ ರಮೇಶ್​​ - ಬೆಳಗಾವಿ ಕದನಕ್ಕೆ ತೆರೆ ಎಳೆಯಲು ಸಿದ್ದು ಪ್ಲಾನ್​​        ರಣೋತ್ಸಾಹದಲ್ಲಿ ರಾಜ್ಯ ಕಮಲ ಪಾಳಯ - ಅರಮನೆ ಮೈದಾನದಲ್ಲಿ ಬಿಜೆಪಿ ವಿಶೇಷ ಸಭೆ - ಗಾಯತ್ರಿ ವಿಹಾರಕ್ಕೆ ಆಗಮನ        ಇಡಿ ಕೇಸ್ ಬಳಿಕ ಡಿಕೆ ಸಹೋದರರಲ್ಲಿ ತಳಮಳ - ಸುಪ್ರೀಂ ವಕೀಲರ ಜತೆ ಸುರೇಶ್ ನಿರಂತರ ಸಂಪರ್ಕ        ಅಗಸ್ತಾ ವೆಸ್ಟ್​ಲ್ಯಾಂಡ್ ಕಾಪ್ಟರ್ ಖರೀದಿ ಹಗರಣ - ಮಧ್ಯವರ್ತಿ ಮೈಕಲ್ ಹಸ್ತಾಂತರಕ್ಕೆ ದುಬೈಕೋರ್ಟ್ ಗ್ರೀನ್ ಸಿಗ್ನಲ್       
Breaking News

‘ಅಬ್‌ ತಕ್‌ ಚಪ್ಪನ್‌’ ಚಿತ್ರಕಥೆಗಾರ ರವಿಶಂಕರ್‌ ಅಲೋಕ್‌ ಆತ್ಮಹತ್ಯೆ

Thursday, 12.07.2018, 8:14 PM       No Comments

ಮುಂಬೈ: 32 ವರ್ಷದ ಚಿತ್ರಕಥೆ ಬರಹಗಾರ ಬುಧವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಅಂಧೇರಿ ಪಶ್ಚಿಮದ ಸೆವೆನ್‌ ಬಂಗ್ಲೋಗಳ ಪ್ರದೇಶದಲ್ಲಿ ವಾಸವಿದ್ದ ರವಿಶಂಕರ್‌ ಅಲೋಕ್‌ ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಕಟ್ಟಡದ ಮೇಲ್ಭಾಗದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರವಿಶಂಕರ್‌ ಅಲೋಕ್‌ ಅವರು ನಾನಾ ಪಾಟೇಕರ್ ಅಭಿನಯದ ‘ಅಬ್‌ ತಕ್‌ ಚಪ್ಪನ್‌’ ಸಿನಿಮಾದ ಚಿತ್ರಕತೆ ಬರಹಗಾರರಾಗಿ ಕೆಲಸ ಮಾಡಿದ್ದರು.

ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಳದಲ್ಲಿ ಯಾವುದೇ ಡೆತ್‌ ನೋಟ್‌ ಪತ್ತೆಯಾಗಿಲ್ಲ. ಆದರೆ, ಪ್ರಾಥಮಿಕ ಮಾಹಿತಿ ಪ್ರಕಾರ ಖಿನ್ನತೆಯಿಂದ ಬಳಲುತ್ತಿದ್ದ ಅವರು ಮನಶಾಸ್ತ್ರಜ್ಞರಿಂದ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *

Back To Top