Friday, 20th July 2018  

Vijayavani

ಶೀರೂರು ಶ್ರೀಗಳ ಸಾವು ಕೊಲೆಯಲ್ಲ - ಅವರಿಗೆ ಮೊದಲಿಂದಲೂ ಅನಾರೋಗ್ಯ ಇತ್ತು - ಉಡುಪಿಯಲ್ಲಿ ಪೇಜಾವರ ಶ್ರೀ ಸ್ಪಷ್ಟನೆ        ರಾಹುಲ್‌ ಅಪ್ಪುಗೆಗೆ ಬಿಜೆಪಿ ಸಿಡಿಮಿಡಿ - ಸದನದಲ್ಲಿನ ವರ್ತನೆ ಬಗ್ಗೆ ಕೋಪ - ರಾಹುಲ್‌ಗೆ ಸ್ಪೀಕರ್‌ ನೀತಿಪಾಠ        ಭಾಷಣಕ್ಕಿಂತ ರಾಹುಲ್‌ ಕಣ್ಣೇಟು ಫೇಮಸ್‌ - ಪ್ರಿಯಾ ವಾರಿಯರ್‌ ವಿಡಿಯೋಗೆ ಲಿಂಕ್‌ - ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ವೈರಲ್‌        ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ - ಕಾವೇರಿಗೆ ಮುಖ್ಯಮಂತ್ರಿ ದಂಪತಿಯಿಂದ ಪೂಜೆ - ಸಚಿವ ಡಿಕೆಶಿ, ಮಹೇಶ್‌ ಸಾಥ್‌        ಸಿಬ್ಬಂದಿ ಒತ್ತಾಯದಿಂದ ಅಲ್ಲಿಗೆ ಹೋಗಿದ್ದೆ - ಮೊಗಸಾಲೆಯಲ್ಲಿ ಬರ್ತಡೇ ಪಾರ್ಟಿ ತಪ್ಪು - ಕ್ಷಮೆ ಕೋರಿದ ವಿಧಾನಸಭೆ ಕಾರ್ಯದರ್ಶಿ        ನಿನ್ನೆ ಬೌಬೌ ಬಿರಿಯಾನಿ - ಇಂದು ಮಿಯಾಂವ್‌ ಮಿಯಾಂವ್‌ ಮಸಾಲ - ಬೆಂಗಳೂರಿನ ವಿಜಯನಗರದಲ್ಲಿ ಬೆಕ್ಕು ನಾಯಿ ಭಕ್ಷ       
Breaking News

ಡಿವಿಲಿಯರ್ಸ್​ ದಿಢೀರ್​ ನಿರ್ಧಾರದಿಂದ ಅಚ್ಚರಿಗೊಳಗಾದ ಕ್ರಿಕೆಟ್​ ದಿಗ್ಗಜರು!

Thursday, 24.05.2018, 10:40 AM       No Comments

ನವದೆಹಲಿ: ವೃತ್ತಿ ಜೀವನದ ಯಶಸ್ವಿ ಪ್ರಯಾಣದಲ್ಲಿದ್ದಾಗಲೇ ದಿಢೀರ್​ ನಿವೃತ್ತಿ ಘೋಷಿಸುವುದು ಎಂದರೆ ಅದೊಂದು ಕಠಿಣ ನಿರ್ಧಾರವೇ ಸರಿ. ಇದಕ್ಕೆ ಸಾಕ್ಷಿಯಾದ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್​ಮನ್ ಅಬ್ರಾಹಂ ಡಿವಿಲಿಯರ್ಸ್​ ಅಸಂಖ್ಯಾತ ಅಭಿಮಾನಿಗಳಲ್ಲಿ ನಿರಾಸೆಯುಂಟು ಮಾಡಿ ತೆರೆಮರೆಗೆ ಸರಿದಿದ್ದರೂ, ಅಭಿಮಾನಿಗಳಲ್ಲಿ ಹಾಗೂ ಸಹ ಆಟಗಾರರಲ್ಲಿ ಡಿವಿಲಿಯರ್ಸ್​ ಮೇಲಿನ ನಿರೀಕ್ಷೆ ಮಾತ್ರ ಹಾಗೇ ಉಳಿದಿದೆ.

ಹೌದು, ಬುಧವಾರ ಅಂತಾರಾಷ್ಟ್ರೀಯ ಕ್ರಿಕೆಟ್​ ವೃತ್ತಿ ಜೀವನಕ್ಕೆ ದಿಢೀರ್​ ನಿವೃತ್ತಿ ಘೋಷಣೆ ಮಾಡಿದ ಡಿವಿಲಿಯರ್ಸ್​ ನಿರ್ಧಾರವನ್ನು ಯಾರೂ ಉಹಿಸಿರಲಿಲ್ಲ. 50 ರ ಸರಾಸರಿಯಲ್ಲಿ ಟೆಸ್ಟ್​ ಹಾಗೂ ಏಕದಿನ ಪಂದ್ಯಗಳಲ್ಲಿ ರನ್​ ಗಳಿಸಿರುವ ಡಿವಿಲಿಯರ್ಸ್​ ಹಲವು ಅದ್ವಿತೀಯ ಸಾಧನೆ ಗೈದಿದ್ದಾರೆ. ಕ್ರೀಡಾಂಗಣದ ಯಾವುದೇ ಮೂಲೆಗಾದರೂ ತನ್ನ ವಿಶಿಷ್ಠ ಆಟದಿಂದ ಚೆಂಡನ್ನು ಬಾರಿಸಬಲ್ಲ ಸಾಮರ್ಥ್ಯ ಹೊಂದಿರುವ ಡಿವಿಲಿಯರ್ಸ್​ ಅವರನ್ನು 360 ಡಿಗ್ರಿ ಅಂತಲೇ ಕರೆಯುತ್ತಾರೆ.

ಇಂತಹ ಆಟಗಾರನ ನಿರ್ಧಾರದಿಂದ ಆಘಾತಕ್ಕೆ ಒಳಾಗಿರುವ ಕ್ರೀಡಾಲೋಕದ ದಿಗ್ಗಜರು ಡಿವಿಲಿಯರ್ಸ್​ ಕುರಿತು ತಮ್ಮದೇ ಶೈಲಿಯಲ್ಲಿ ಟ್ವಿಟರ್​ನಲ್ಲಿ ಅಭಿಪ್ರಾಯವನ್ನು ಹೊರಹಾಕಿದ್ದಾರೆ.

Leave a Reply

Your email address will not be published. Required fields are marked *

Back To Top