Tuesday, 20th March 2018  

Vijayavani

ಮುಂಬಡ್ತಿ ಕೇಸ್​​ನಲ್ಲಿ ರಾಜ್ಯ ಸರ್ಕಾರಕ್ಕೆ ಹಿನ್ನಡೆ- ಕಾಲಾವಕಾಶ ನೀಡೋಕೆ ಸುಪ್ರೀಂ ನಕಾರ- ತೀರ್ಪು ಪಾಲಿಸೋಕೆ ಒಂದು ತಿಂಗಳು ಡೆಡ್​​ಲೈನ್​        ಐಸಿಸ್​ನಿಂದ 39 ಭಾರತೀಯರ ಹತ್ಯೆ- ಮಾಹಿತಿ ಬಿಚ್ಚಿಟ್ಟ ಸುಷ್ಮಾ ಸ್ವರಾಜ್​- ಸಾವಿನಲ್ಲೂ ರಾಜಕೀಯ ಅಂತಾ ವಿಪಕ್ಷಗಳಿಗೆ ಚಾಟಿ        ಜೆಡಿಎಸ್​ ರೆಬೆಲ್ಸ್​ ಅಡ್ಡಮತದಾನ ಪ್ರಕರಣ- ನಾಳೆಯೇ ತೀರ್ಪಿಗೆ ಹೈಕೋರ್ಟ್ ಸೂಚನೆ- ಎಜಿ ಕರೆಸಿ ವಿಚಾರಿಸಿದ ಸ್ಪೀಕರ್​        ಮೆಟ್ರೋ ನೌಕರರ ಮುಷ್ಕರ ಇಲ್ಲ- ಬೇಡಿಕೆ ಈಡೇರಿಕೆಗೆ ತಿಂಗಳ ಗಡುವು- ಸಂಧಾನ ಸೂತ್ರಕ್ಕೆ BMRCLಗೆ ಹೈಕೋರ್ಟ್ ಸಲಹೆ        ವೀರಶೈವ ಲಿಂಗಾಯತ ಎರಡೂ ಒಂದೇ- ಸರ್ಕಾರದ ಕ್ರಮ ಅನ್ಯಾಯದ ಪರಮಾವಧಿ- ಸಿಎಂ ವಿರುದ್ಧ ಶಾಮನೂರು ಶಿವಶಂಕರಪ್ಪ ಗರಂ       
Breaking News

ಆರುಷಿ ಅಪ್ಪ-ಅಮ್ಮ ಮುಗ್ಧರಾ! ಅಂದಿನ ಸಿಬಿಐ ನಿರ್ದೇಶಕರ ಮಾತನ್ನೊಮ್ಮೆ ಕೇಳಿ

Friday, 13.10.2017, 1:05 PM       No Comments

ನವದೆಹಲಿ: ಅಲಹಾಬಾದ್ ಹೈಕೋರ್ಟ್​ ಗುರುವಾರ ಆರುಷಿ ಕೊಲೆ ಆರೋಪದಿಂದ ಆಕೆಯ ಪಾಲಕರಾದ ಡಾ. ನೂಪುರ್ ತಲ್ವಾರ್ ಮತ್ತು ಡಾ. ರಾಜೇಶ್ ತಲ್ವಾರ್​ ಅವರನ್ನ ಮುಕ್ತಗೊಳಿಸಿದೆ. ಆದರೆ ಪ್ರಕರಣದ ಕುರಿತು ಸಿಬಿಐ ಮಾಜಿ ನಿರ್ದೇಶಕ ಎ.ಪಿ. ಸಿಂಗ್ ಅವರು ಮಾತನಾಡಿದ್ದು, ಕೊಲೆಯಾದ ಮೊದಲ ದಿನ ಸಾಕ್ಷ್ಯ ನಾಶವು ಇಡೀ ಪ್ರಕರಣದ ದಿಕ್ಕುತಪ್ಪಿಸಿರುವುದು ಪ್ರಕರಣಕ್ಕೆ ಹಿನ್ನಡೆ ಆಯಿತು ಎಂದಿದ್ದಾರೆ.

ಮೊದಲ ದಿನವೇ ಹಾಳು ಮಾಡಿದ ನೋಯ್ಡಾ ಪೊಲೀಸರು:

2010ರಿಂದ ಎರಡು ವರ್ಷ ಕಾಲ ಸಿಂಗ್ ಸಿಬಿಐ ನಿರ್ದೇಶಕರಾಗಿದ್ದರು. ಮತ್ತು ಆರುಷಿ ಹತ್ಯೆ ಪ್ರಕರಣದ ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನೋಯ್ಡಾ ಪೊಲೀಸರಿಂದ ಸರಿಯಾದ ರೀತಿಯಲ್ಲಿ ತನಿಖೆಯಾಗಲಿಲ್ಲ. ಕೊಲೆಯಾದ ಮೊದಲ ದಿನ ನಡೆದ ಸಾಕ್ಷ್ಯ ನಾಶ ಹೊರತು ಪಡಿಸಿ ಬೇರೆ ಯಾವುದೇ ಋಣಾತ್ಮಕ ಅಂಶಗಳು ತನಿಖೆಯಲ್ಲಿ ನನಗೆ ಕಾಣುತ್ತಿಲ್ಲ. ಆದರೆ ಮೊದಲ ದಿನದ ನಂತರ ಯಾವುದೇ ಮಹತ್ವದ ಸಾಕ್ಷ್ಯ ನಮಗೆ ದೊರಯಲೇ ಇಲ್ಲ! ಎಂದು ಹೇಳಿದ್ದಾರೆ.

ನಾನು ಈ ಪ್ರಕರಣದ ಕುರಿತು ಮೊದಲ ದಿನ ಏನು ಹೇಳಿದ್ದೆನೋ … ಅದನ್ನೇ ಹೈಕೋರ್ಟ್ ನಿನ್ನೆ ಹೇಳಿದೆ. ಅಪರಾಧ ಸಾಬೀತು ಮಾಡಲು ಸಾಕ್ಷ್ಯಗಳ ಕೊರತೆ ಇದೆ ಎಂದು ನಾನು ಹೇಳಿದ್ದೆ. ಅದನ್ನೇ ಕೋರ್ಟ್ ಬೆನೆಫಿಟ್​ ಆಫ್​ ಡೌಟ್​ ಎಂದಿದೆ. ಕೋರ್ಟ್​ ಅಪರಾಧಿಗಳನ್ನ ಮುಗ್ಧರು ಎಂದಿಲ್ಲ. ಆದ್ದರಿಂದ ಇದಕ್ಕೆ ಕ್ಲೀನ್​ ಚಿಟ್​ ಎನ್ನಲು ಸಾಧ್ಯವಿಲ್ಲ ಎಂದೂ ಅವರು ಷರಾ ಬರೆದಿದ್ದಾರೆ.

ಸಿಂಗ್​ ಸಿಬಿಐ ನಿರ್ದೇಶಕರಾಗುವ ವೇಳೆಗಾಗಲೇ ತನಿಖೆ ಮುಕ್ತಾಯಗೊಂಡಿತ್ತು. ಆರೋಪಿಗಳ ಮೇಲೆ ಚಾರ್ಜ್​ ಶಿಟ್ ದಾಖಲಿಸುವುದಾ ಅಥವಾ ತನಿಖೆಯನ್ನ ಮುಕ್ತಾಯ ಗೊಳಿಸಬೇಕಾ? ಎಂಬ ನಿರ್ಧಾರವನ್ನು ಸಿಂಗ್​ ತೆಗೆದುಕೊಳ್ಳಬೇಕಾಗಿತ್ತು.

ತನಿಖೆಯ ಈ ಘಟ್ಟದ ಕುರಿತು ಮಾತನಾಡಿದ ಅವರು ಚಾರ್ಜ್ ಶೀಟ್ ದಾಖಲಿಸುವಷ್ಟು ಪ್ರಬಲವಾದ ಸಾಕ್ಷಿಗಳು ನಮ್ಮ ಬಳಿ ಇರಲಿಲ್ಲ. ಆದರೆ ತಲ್ವಾರ್ ದಂಪತಿಗಳ ಕೈವಾಡ ಈ ಕೊಲೆಯಲ್ಲಿರುವುದು ತನಿಖಾ ತಂಡಕ್ಕೆ ಮನವರಿಕೆಯಾಗಿತ್ತು. ​ ಆದ್ದರಿಂದ ಎಲ್ಲ ಸಂದರ್ಭ ಸಾಕ್ಷ್ಯಗಳನ್ನ ನ್ಯಾಯಾಲಯದ ಎದುರು ಇಟ್ಟೆವು ಎಂದರು.

ಈ ಮಧ್ಯೆ, ಗುರುವಾರ ಅಲಹಾಬಾದ್ ಹೈ ಕೋರ್ಟ್​ ನೀಡಿರುವ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ ಮೆಟ್ಟಿಲೇರಲು ಸಿಬಿಐ ಮುಂದಾಗಿದೆ. ಹಾಗೆಯೇ, ಉತ್ತರ ಪ್ರದೇಶದ ಘಾಜಿಯಾಬಾದ್​ದ ದಾಸ್ನಾ ಜೈಲಿನಲ್ಲಿ ನಾಲ್ಕು ವರ್ಷ ಕಳೆದಿರುವ ರಾಜೇಶ್​ ಮತ್ತು ನೂಪುರ್​​ ತಲ್ವಾರ್ ಇಂದೇ ಬಿಡುಗಡೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಅಲಹಾಬಾದ್​ ಹೈಕೋರ್ಟ್​ ತೀರ್ಪಿಗೆ ಸಂತಸ ವ್ಯಕ್ತಪಡಿಸಿರುವ ತಲ್ವಾರ್​ ದಂಪತಿ ಬಿಡುಗಡೆ ಭಾಗ್ಯಕ್ಕಾಗಿ ಕಾಯುತ್ತಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *

Back To Top