Sunday, 22nd July 2018  

Vijayavani

ಶೀರೂರು ಶ್ರೀ ಸಾವಿನ ಹಿಂದೆ ರಮ್ಯಾ ಶೆಟ್ಟಿ ಕೈವಾಡ - ಗೋಡಂಬಿ ಜ್ಯೂಸ್ ಕುಡಿಸಿರೋ ಶಂಕೆ - ತನಿಖೆ ಚುರುಕುಗೊಳಿಸಿದ ಉಡುಪಿ ಪೊಲೀಸರು        ದೋಸ್ತಿ ಸರ್ಕಾರಕ್ಕೆ ಆಯುಷ್ಯ ಕಡಿಮೆ - ಜೆಡಿಎಸ್ ಜತೆ ಲೋಕ ಎಲೆಕ್ಷನ್​​ ಮೈತ್ರಿ ಬೇಡ - ತುಮಕೂರಿನಲ್ಲಿ ಮಾಜಿ ಶಾಸಕ ರಾಜಣ್ಣ ಅಪಸ್ವರ        ಡಿಸಿಎಂ ಪರಮೇಶ್ವರ್​ಗೆ ದೋಸ್ತಿ ಇಷ್ಟ - ದೊಡ್ಡಗೌಡರಿಗೆ ಆಗ್ತಿದೆಯಂತೆ ಕಷ್ಟ - ಲೋಕಸಭಾ ಮೈತ್ರಿಯಲ್ಲೇ ದೋಸ್ತಿ ಬಗ್ಗೆ ಎದ್ದಿದೆ ಗೊಂದಲ        ರಸ್ತೆಯಲ್ಲಿ ಬರ್ತಿದ್ದ ಬಾಲಕಿ ಮೇಲೆ ಹರಿದ ಕಾರು - ಪವಾಡ ಸದೃಶ್ಯ ರೀತಿಯಲ್ಲಿ ಪುಟಾಣಿ ಪಾರು - ಉತ್ತರ ಪ್ರದೇಶದಲ್ಲೊಂದು ಪವಾಡ        ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೂ ಸಂಚಕಾರ- ಹನುಮಂತ ಹುಟ್ಟಿದ ಸ್ಥಳ ಮುಜರಾಯಿ ಇಲಾಖೆ ವಶಕ್ಕೆ - ದೋಸ್ತಿ ಸರ್ಕಾರದ ಮತ್ತೊಂದು ವಿವಾದ        ಜಲಾಶಯದಿಂದ ತುಂಗಭದ್ರಾ ನದಿಗೆ ನೀರು - ಡ್ರೋಣ್ ಕಣ್ಣಲ್ಲಿ ಮನಮೋಹಕ ನೋಟ - ಎಲ್ಲೆಲ್ಲೂ ಹಸಿರ ಸಿರಿಯ ವೈಭವ       
Breaking News

ಆರುಷಿ ಕೊಲೆ ಪ್ರಕರಣ: ಆಶ್ಚರ್ಯಕರ​ ತೀರ್ಪು ಹೊರಬಿತ್ತು

Thursday, 12.10.2017, 3:03 PM       No Comments

ಅಲಹಾಬಾದ್: ವಿದ್ಯಾರ್ಥಿನಿ ಆರುಷಿ ಕೊಲೆ ಪ್ರಕರಣ ಸಂಬಂಧ ಆರುಷಿ ಅಪ್ಪ-ಅಮ್ಮ ಸಲ್ಲಿಸಿದ್ದ ಮೇಲ್ಮನವಿ ಕುರಿತು ಅಲಹಾಬಾದ್ ಹೈಕೋರ್ಟ್​ ಇದೀಗತಾನೆ ತೀರ್ಪು ನೀಡಿದೆ.

ಕೊಲೆ ಮಾಡಿದ ಆರೋಪದಡಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಆರುಷಿ ತಂದೆ ರಾಜೇಶ್ ತಲ್ವಾರ್​ ಹಾಗೂ ತಾಯಿ ನೂಪುರ್ ತಲ್ವಾರ್ ಭವಿಷ್ಯವನ್ನು ನಿರ್ಧರಿಸಿರುವ ಹೈಕೋರ್ಟ್ ಅವರನ್ನು ದೋಷಮುಕ್ತಗೊಳಿಸಿದೆ.

ಹೈಕೋರ್ಟ್​ ಸಿಬಿಐ ಕೋರ್ಟ್​ ನೀಡಿದ್ದ ತೀರ್ಪನ್ನು ರದ್ದುಗೊಳಿಸಿ ರಾಜೇಶ್​ ಮತ್ತು ನೂಪುರ್​ ದಂಪತಿಯನ್ನು ಬಿಡುಗಡೆಗೊಳಿಸಿದೆ. ಕೋರ್ಟ್​ ಆರುಷಿ ಅಪ್ಪ-ಅಮ್ಮನ ವಿರುದ್ಧದ ಸಾಕ್ಷ್ಯಾಧಾರಗಳು ಕೇವಲ ಸಾಂದರ್ಭಿಕವಷ್ಟೇ. ಸಿಬಿಐ ರಾಜೇಶ್​ ಮತ್ತು ನೂಪುರ್​ ದಂಪತಿಯೇ ತಮ್ಮ ಮಗಳನ್ನು ಕೊಲೆ ಮಾಡಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಸಿಬಿಐ ವಿಫಲವಾಗಿದೆ ಎಂದು ಕೋರ್ಟ್​ ತಿಳಿಸಿದೆ.

ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಕೆ. ನಾರಾಯಣ್ ಹಾಗೂ ಎ.ಕೆ. ಮಿಶ್ರಾ ನೇತೃತ್ವದ ಪೀಠ ದಂಪತಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿ ತೀರ್ಪು ನೀಡಿದೆ. ಮೇ 16, 2008ರಂದು ಆರುಷಿ ಜಲವಾಯು ವಿಹಾರದಲ್ಲಿರೋ ತನ್ನ ನಿವಾಸದಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು.
ಆರಂಭದಲ್ಲಿ ಮನೆಗೆಲಸದಾಳು ಹೇಮರಾಜ್ ಮೇಲೆ ಸಂಶಯ ಪಡಲಾಗಿತ್ತು. ಆರುಷಿ ಕೊಲೆಯಾದ ಮರುದಿನವೇ ಆತನ ಶವವೂ ಮನೆಯ ತಾರಸಿಯಲ್ಲಿ ಪತ್ತೆಯಾಗಿತ್ತು. 2013ರಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ರಾಜೇಶ್ ತಲ್ವಾರ್ ದಂಪತಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಇದನ್ನ ಪ್ರಶ್ನಿಸಿ ದಂಪತಿ ಹೈಕೋರ್ಟ್​ ಮೆಟ್ಟಿಲೇರಿದ್ರು. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top