Sunday, 15th July 2018  

Vijayavani

ಬಾಲಕನ ವಿಡಿಯೋ ಹಿಂದೆ ಬಿಜೆಪಿ ಕೈವಾಡ ಆರೋಪ - ವಿಡಿಯೋ ತನಿಖೆಗೆ ಸದಾನಂದಗೌಡ ಆಗ್ರಹ - ರಾಜಕಾರಣಿಗಳ ಆಟಕ್ಕೆ ಕೊಡವರ ಆಕ್ರೋಶ        26 ವರ್ಷ ಲಿಂಗಾಯತರೇ ರಾಜ್ಯ ಆಳಿದ್ದಾರೆ - ಕುಮಾರಸ್ವಾಮಿ ಸಿಎಂ ಆಗಿ 2 ತಿಂಗಳಾಗಿದೆ - ಉತ್ತರ ಕರ್ನಾಟಕ ನಿರ್ಲಕ್ಷ್ಯ ಆರೋಪಕ್ಕೆ ದೇವೇಗೌಡ ತಿರುಗೇಟು        ಕೊನೆಗೂ ಶಿರಾಡಿ ಘಾಟ್‌ ಲೋಕಾರ್ಪಣೆ - ವಾಸ್ತು ಪ್ರಕಾರ ರೇವಣ್ಣ ಉದ್ಘಾಟನೆ - ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತ        ಮಟನ್ ಬಿರಿಯಾನಿ, ಚಿಕನ್ ಚಾಪ್ಸ್, ಬೋಟಿ ಗೊಜ್ಜು, ಮೊಟ್ಟೆ - 25 ಸಾವಿರ ಮಂದಿಗೆ ಭರ್ಜರಿ ಬಾಡೂಟ - ಚಾಮುಂಡೇಶ್ವರಿ ಕ್ಷೇತ್ರದ ಜನರಿಗೆ ಜಿಟಿಡಿ ಕೃತಜ್ಞತೆ        ಒಂದು ದೇಶ ಒಂದೇ ಚುನಾವಣೆ - ಮೋದಿ ಪರಿಕಲ್ಪನೆಗೆ ಸೂಪರ್‌ಸ್ಟಾರ್‌ ಬೆಂಬಲ - ಹಣ, ಸಮಯ ಉಳಿತಾಯ ಎಂದ ರಜನಿ        ಉಕ್ಕಿಹರಿಯುತ್ತಿರೋ ಕೃಷ್ಣೆ - ಬೆಳಗಾವಿ, ಚಿಕ್ಕೋಡಿ ಭಾಗದಲ್ಲಿ ಪ್ರವಾಹ ಪರಿಸ್ಥಿತಿ - ಇತ್ತ ತಮಿಳುನಾಡಿನಲ್ಲಿ ಕಾವೇರಿ ಭೋರ್ಗರೆತ       
Breaking News

ಮಲಬದ್ಧತೆಯಾಗದಂತೆ ನೋಡಿಕೊಳ್ಳಿ

Tuesday, 19.06.2018, 3:02 AM       No Comments

| ಡಾ. ವಸುಂಧರಾ ಭೂಪತಿ

ನನಗೆ 23 ವರ್ಷ. ನನಗೆ ಚಿಕ್ಕಂದಿನಿಂದಲೂ ಬೆನ್ನು ನೋವು ಇದೆ. ನೆಗಡಿ ಯಾವಾಗಲೂ ಇರುತ್ತೆ. ಮೂಗಿನಲ್ಲಿ ರಕ್ತ ಬರುತ್ತದೆ. ನನಗೆ ಧೂಳಿನ ಅಲರ್ಜಿ ಇದೆ. ಹೀಗಾಗಿ, ಡೆರಿಫಿಲಿನ್ ರಿಟಾರ್ಡ್ 150 ಮಾತ್ರೆಯನ್ನು ತೆಗೆದುಕೊಳ್ಳುತ್ತೇನೆ. ಯಾವಾಗಲಾದರೂ ಕಫದಲ್ಲೂ ರಕ್ತ ಹೋಗುತ್ತದೆ. ಇತ್ತೀಚೆಗೆ ಮೂಲವ್ಯಾಧಿ ಶುರುವಾಗಿದೆ. 2-3 ತಿಂಗಳ ಹಿಂದೆ ಮಲದಲ್ಲಿ ತುಂಬ ರಕ್ತ ಬೀಳುತ್ತಿತ್ತು. ಉರಿಯುತ್ತದೆ. ನನಗೆ ದವಾಖಾನೆಗೆ ಹೋಗಲು ಭಯ, ಏನು ಮಾಡಲಿ?

-ಹೆಸರು ಊರು ಬೇಡ

ನಿಮಗೆ ಮೂಗಿನಲ್ಲಿ, ಗಂಟಲಿನಲ್ಲಿ ಮಾತ್ರವಲ್ಲದೆ, ಮಲದಲ್ಲಿಯೂ ರಕ್ತ ಹೋಗುವ ಸಮಸ್ಯೆ ಇದೆ ಎಂದಿರುವಿರಿ. ಇದರಿಂದ ರಕ್ತಹೀನತೆಯುಂಟಾಗುತ್ತದೆ. ನೀವು ನಿರ್ಲಕ್ಷ್ಯ ಮಾಡಬೇಡಿ. ಅಲರ್ಜಿಯ ಸಮಸ್ಯೆಗೆ ಪ್ರತಿದಿನ ಬೆಳಗ್ಗೆ ಹಾಗೂ ರಾತ್ರಿ ಊಟಕ್ಕೆ ಮುಂಚೆ ಒಂದು ಚಮಚ ನೆಲ್ಲಿಕಾಯಿ ಪುಡಿ ಮತ್ತು ಅರಿಶಿಣ ಪುಡಿಯನ್ನು ಜೇನುತುಪ್ಪ ಇಲ್ಲವೇ ಬಿಸಿನೀಡಿನಲ್ಲಿ ಬೆರೆಸಿ ಸೇವಿಸಿ. ಒಣದ್ರಾಕ್ಷಿಯನ್ನು ಸ್ವಲ್ಪ ಹೊತ್ತು ಹಾಲಿನಲ್ಲಿ ನೆನೆಸಿಟ್ಟು ತಿನ್ನಿ. ಉಶೀರಾಸವವನ್ನು ದಿನಕ್ಕೊಂದು ಬಾರಿ ಮೂರು ಚಮಚೆಯಷ್ಟನ್ನು ನೀರು ಬೆರೆಸಿ ಊಟದ ನಂತರ ಸೇವಿಸಿ. ಆರೋಗ್ಯದ ವಿಷಯಕ್ಕೆ ಭಯಪಟ್ಟು ಆಸ್ಪತ್ರೆಗೆ ಹೋಗದಿದ್ದರೆ ಹೇಗೆ? ಸರಿಯಾದ ಚಿಕಿತ್ಸೆ ಮಾಡಿದಲ್ಲಿ ಆರೋಗ್ಯವಂತರಾಗುವಿರಿ. ಮಲಬದ್ಧತೆಯಾಗದಂತೆ ನೋಡಿಕೊಂಡಲ್ಲಿ ಮೂಲವ್ಯಾಧಿಯ ಸಮಸ್ಯೆ ಹೆಚ್ಚು ಬಾಧಿಸುವುದಿಲ್ಲ. ಆಹಾರದಲ್ಲಿ ಹಸಿ ತರಕಾರಿ, ಹಣ್ಣುಗಳ ಸೇವನೆ ಇರಲಿ. ಹೆಚ್ಚು ಹುಳಿ, ಖಾರ, ಮಸಾಲೆ, ಕರಿದ ಪದಾರ್ಥಗಳ ಸೇವನೆ ಬೇಡ. ಗುಲ್ಕಂದವನ್ನು ಹಣ್ಣಿನೊಂದಿಗೆ ಬೆರೆಸಿ ಸೇವಿಸಿ. ಬಿಸಿಲಿನಲ್ಲಿ ಹೆಚ್ಚು ತಿರುಗಾಟ ಬೇಗ.

# ವಯಸ್ಸು 50. ಆರು ತಿಂಗಳ ಹಿಂದೆ ಮುಟ್ಟು ಆಗುವುದು ನಿಂತಿತು. ಈಗ ಹಿಮೋಗ್ಲೋಬಿನ್ ಕಡಿಮೆಯಾಗಿ ಸುಸ್ತಾಗುತ್ತಿದೆ. ನಿದ್ದೆಯೂ ಕಡಿಮೆಯಾಗಿದೆ. ಮಾತ್ರೆ ತೆಗೆದುಕೊಂಡರೆ ಮಾತ್ರ ನಿದ್ದೆ ಬರುತ್ತದೆ. ಅದು ರಾತ್ರಿ 11ರಿಂದ 5ರವರೆಗೆ ಮಾತ್ರ. ಮಾನಸಿಕವಾಗಿ ಹಿಂಸೆ ಆಗುತ್ತಿದೆ. ಪರಿಹಾರ ತಿಳಿಸಿ.

-ಕಾವೇರಿ ಮಲ್ಲಪ್ಪ ಬಿರಾದಾರ, ಗೋಕಾಕ

ಋತುಬಂಧದ ಸಮಯವಾಗಿರುವುದರಿಂದ ಕೆಲವು ತಿಂಗಳುಗಳ ಕಾಲ ಈ ಸಮಸ್ಯೆ ಇರುತ್ತದೆ. ಶತಾವರಿ ರಸಾಯನವನ್ನು ದಿನಕ್ಕೆರಡು ಬಾರಿ ಒಂದು ಚಮಚೆಯಷ್ಟನ್ನು ಸೇವಿಸಿ ಸ್ವಲ್ಪ ಹಾಲು ಕುಡಿಯಿರಿ. ಆಹಾರದಲ್ಲಿ ಸೊಪ್ಪು, ತರಕಾರಿ, ಹಣ್ಣುಗಳನ್ನು ತಿನ್ನಿ. ಖರ್ಜೂರವನ್ನು ನೀರಿನಲ್ಲಿ ನೆನೆಸಿ, ದಾಳಿಂಬೆಯೊಡನೆ ರುಬ್ಬಿ ದಿನಕ್ಕೊಮ್ಮೆ ಕಾಲು ಲೋಟದಷ್ಟು ಕುಡಿಯಿರಿ. ನುಗ್ಗೆಸೊಪ್ಪು, ಮೆಂತ್ಯಸೊಪ್ಪುಗಳನ್ನು ಹೆಚ್ಚು ಬಳಸಿ. ಕುಡಿಯುವ ನೀರಿಗೆ ಜೇನುತುಪ್ಪ ಬೆರೆಸಿ ಆಗಾಗ ಕುಡಿಯುತ್ತಿರಿ. ಇದರಿಂದ ಸುಸ್ತು ಕಡಿಮೆಯಾಗುತ್ತದೆ. ನಿದ್ರೆಗೆ ಮಾತ್ರೆ ತೆಗೆದುಕೊಳ್ಳಬೇಡಿ. ಅದೇ ಅಭ್ಯಾಸವಾಗಿಬಿಡುತ್ತದೆ. ರಾತ್ರಿ ಎಂಟು ಗಂಟೆಗೆ ಒಂದು ಚಮಚ ಗುಲ್ಕಂದಕ್ಕೆ ಕಾಲು ಚಮಚ ಗಸಗಸೆ ಬೆರೆಸಿ ತಿನ್ನಬೇಕು. ರಾತ್ರಿ ಊಟಕ್ಕೆ ಮೊಸರು, ಮಜ್ಜಿಗೆ ಇರಲಿ. ನಿದ್ರೆ ಚೆನ್ನಾಗಿ ಬರುತ್ತದೆ. 6 ಗಂಟೆಯ ನಿದ್ರೆ ಬಂದರೂ ಸಾಕು, ಹೆಚ್ಚು ನಿದ್ರೆಯ ಅವಶ್ಯಕತೆ ಇರುವುದಿಲ್ಲ. ಹೀಗಾಗಿ, ನಿದ್ರೆ ಕಡಿಮೆ ಬಂತೆಂದು ಬೇಸರ ಮಾಡಿಕೊಳ್ಳುವ ಅಗತ್ಯವಿಲ್ಲ. ಉತ್ತಮ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ದಿನವೂ ಧ್ಯಾನ, ಯೋಗ, ಪ್ರಾಣಾಯಾಮಗಳನ್ನು ಮಾಡಿ. ಮನಸ್ಸು ಶಾಂತವಾಗಲು ಇವು ಉತ್ತಮ ಪರಿಹಾರ. ನಿದ್ರೆ ಚೆನ್ನಾಗಿ ಬರಲು ಅದಕ್ಕಾಗಿಯೇ ಇರುವ ಪ್ರಾಣಾಯಾಮ, ಮುದ್ರೆಗಳನ್ನು ಅಭ್ಯಾಸ ಮಾಡಿಕೊಳ್ಳಬಹುದು.

Leave a Reply

Your email address will not be published. Required fields are marked *

Back To Top