Thursday, 18th January 2018  

Vijayavani

ಹಿರಿಯ ನಟ ನಿರ್ದೇಶಕ ಕಾಶಿನಾಥ್ ಇನ್ನಿಲ್ಲ - ಬೆಂಗಳೂರಿನ ಶಂಕರ ಕ್ಯಾನ್ಸರ್​ ಆಸ್ಪ್ರೆಯಲ್ಲಿ ಕೊನೆಯುಸಿರು- ಕಳಚಿದ ಅನುಭವದ ಕೊಂಡಿ        ಡೈರೆಕ್ಟರ್​ ಎಪಿ ಅರ್ಜುನ್​ ಕಚೇರಿಯಲ್ಲಿ ಕಳ್ಳತನ - ಯಶ್​ ಬರ್ತಡೇ ದಿನ ಕೃತ್ಯ - ಮಾಜಿ ಕಾರು ಡ್ರೈವರ್ ವಿರುದ್ಧ ಅನುಮಾನದ ಹುತ್ತ         ಒಂಟಿ ಮಹಿಳೆಗೆ ಜಡೆ ಹಿಡಿದು ಥಳಿತ - ಕೊಪ್ಪಳ ಬಸ್​ಸ್ಟಾಪ್​ನಲ್ಲಿ ಪುರುಷರ ಅಟ್ಟಹಾಸ - ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್         ನೈಂಟಿ ಕೊಡ್ತೇವೆ ಅಂತ ಹರಕೆ ಹೊರ್ತಾರೆ ಭಕ್ತರು - ದೇವರ ಹೆಸರಲ್ಲಿ ಸಾಮೂಹಿಕ ಮದ್ಯಾರಾಧನೆ - ಕುಣಿಗಲ್‍ನ ಒಡೇಭೈರವನಿಗೆ ಬ್ರಾಂದಿ ವಿಸ್ಕಿಯೇ ನೈವೇದ್ಯ        ಕೃಷ್ಣನಗರಿಯಲ್ಲಿ ಪರ್ಯಾಯ ಸಂಭ್ರಮ - ಕೃಷ್ಣಪೂಜೆ ನೆರವೇರಿಸಿದ ಪಲಿಮಾರು ಶ್ರೀಗಳು - ಅದ್ಧೂರಿಯಿಂದ ಸರ್ವಜ್ಞ ಪೀಠಾರೋಹಣ       
Breaking News :

ಆಧಾರ್‌ ಜೋಡಣೆಗೆ ಮಾರ್ಚ್‌ 31ರ ವರೆಗೆ ಗಡುವು ವಿಸ್ತರಣೆ

Friday, 15.12.2017, 11:11 AM       No Comments

<< ಬ್ಯಾಂಕ್ ಖಾತೆ ತೆರೆಯಲು ಆಧಾರ್​ಗೆ ಅರ್ಜಿ ಸಲ್ಲಿಸಿರುವ ದಾಖಲೆ ತೋರಿಸಿದರೆ ಸಾಕು: ಸುಪ್ರೀಂಕೋರ್ಟ್ >>

ನವದೆಹಲಿ: ನಾನಾ ಸೇವೆಗಳು ಹಾಗೂ ಕಲ್ಯಾಣ ಯೋಜನೆಗಳಿಗೆ ಆಧಾರ್‌ ಕಡ್ಡಾಯ ಜೋಡಣೆಯ ಗಡುವನ್ನು ಮುಂದಿನ ವರ್ಷದ ಮಾರ್ಚ್ 31ರ ವರೆಗೆ ಸುಪ್ರೀಂಕೋರ್ಟ್ ಗುರುವಾರ ವಿಸ್ತರಿಸಿದೆ.

ಮುಖ್ಯ ನ್ಯಾಯಮೂರ್ತಿ ದೀಪಕ್​ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳನ್ನೊಳಗೊಂಡ ಸಾಂವಿಧಾನಿಕ ಪೀಠ, ಈ ಸಂಬಂಧ ಮಧ್ಯಂತರ ತೀರ್ಪು ನೀಡಿದೆ. ಮೊಬೈಲ್​ಗೆ ಆಧಾರ್ ಜೋಡಿಸುವ ಸಂಬಂಧ ಈ ಹಿಂದೆ ನೀಡಿದ್ದ ಆದೇಶವನ್ನು ಪರಿಷ್ಕರಿಸಿ 2018ರ ಫೆಬ್ರವರಿ 6ರ ಗಡುವನ್ನೂ ಮಾರ್ಚ್​ 31ಕ್ಕೆ ವಿಸ್ತರಿಸಿದೆ.

ಬ್ಯಾಂಕ್ ಖಾತೆ ತೆರೆಯಲು ಆಧಾರ್ ನೀಡಬೇಕೆಂದೇನೂ ಇಲ್ಲ. ಆದರೆ, ಆಧಾರ್ ನಂಬರ್​ಗಾಗಿ ಅರ್ಜಿ ಸಲ್ಲಿಸಿರುವ ದಾಖಲೆಯನ್ನು ಖಾತೆ ತೆರೆಯುವ ಸಂದರ್ಭದಲ್ಲಿ ತೋರಿಸಬೇಕು ಎಂದು ಪೀಠ ತಿಳಿಸಿದೆ.  (ಏಜೆನ್ಸೀಸ್‌)

 

 

Leave a Reply

Your email address will not be published. Required fields are marked *

Back To Top