Wednesday, 18th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ಕನ್ನಡ ಪರ ಹೋರಾಟಗಾರನೆಂಬ ಹಗಲು ವೇಷ ತೊಡುತ್ತಿದ್ದ ಈತ ರಾತ್ರಿ ಏನು ಮಾಡುತ್ತಿದ್ದ ಗೊತ್ತಾ?

Monday, 20.11.2017, 1:29 PM       No Comments

ಬೆಂಗಳೂರು: ಇಲ್ಲೊಬ್ಬ ಭೂಪನಿದ್ದಾನೆ. ಹಗಲು ಹೊತ್ತಿನಲ್ಲಿ ತಾನು ಕನ್ನಡ ಪರ ಸಂಘಟನೆಯ ಹೋರಾಟಗಾರನೆಂದು ಹೇಳಿಕೊಂಡು ತಿರುಗುವ ಈತ ಕತ್ತಲಾದ ಮೇಲೆ ಮಾಡುವ ಕೆಲಸದ ಬಗ್ಗೆ ನೀವು ಕೇಳಿದರೆ ಚಕಿತರಾಗುವುದು ನಿಶ್ಚಿತ.

ಈ ಮಹಾಶಯನ ಹೆಸರು ವರುಣ್ ಅಲಿಯಾಸ್​ ಚಿನ್ನಿ​. ತನ್ನನ್ನು ಕರ್ನಾಟಕ ರಕ್ಷಣಾ ವೇದಿಕೆಯ ಹಲಸೂರಿನ ಜೋಗುಪಾಳ್ಯ ವಾರ್ಡ್​ನ ಅಧ್ಯಕ್ಷನೆಂದು ಹೇಳಿಕೊಳ್ಳುತ್ತಾನೆ. ಕನ್ನಡ ಪರ ಹೋರಾಟಗಾರನೆಂದು ಫ್ಲೆಕ್ಸ್​​ಗಳ ಮೇಲೆ ತನ್ನ ಫೋಟೋ ಹಾಕಿಸಿಕೊಳ್ಳತ್ತಾನೆ, ಆದರೆ ರಾತ್ರಿ ಆಗುತ್ತಿದ್ದತೆಯೇ ತನ್ನ ಸಹಚರರೊಂದಿಗೆ ದರೋಡೆಗೆ ನಿಲ್ಲುತ್ತಾನೆ.

ಕೆಲಸ ಮುಗಿಸಿ ಮನೆಗೆ ಮರುಳುತ್ತಿರುವವರನ್ನ ಗುರಿ ಮಾಡಿಕೊಂಡು ಇವರು ದೋಚುತ್ತಾರೆ. ವಿಚಿತ್ರವೆಂದರೆ ಕನ್ನಡಪರ ಸಂಘಟನೆ ಕಾರ್ಯಕರ್ತರು ಎಂದು ಹೇಳಿಯೇ ಕೃತ್ಯ ವೆಸಗುತ್ತಾರೆ.

ಇತ್ತೀಚಿಗೆ ಕೂಡ ಅದೇ ರೀತಿ ಮಾಡಿದ್ದಾರೆ, ಹಲಸೂರಿನ ಮೆಟ್ರೋ ನಿಲ್ದಾಣದ ಬಳಿ ಟೈಸನ್​ ಎಂಬುವವರ ಬಳಿ ಇದ್ದ ಮೊಬೈಲ್​, ಹಣ ಹಾಗೂ ವಾಚ್​ನ್ನು ಕಿತ್ತುಕೊಂಡಿದ್ದಾರೆ. ನಂತರ ಚಾಕು ತೋರಿಸಿ 4 ಸಾವಿರ ರೂಪಾಯಿ ಹಣ ಕೂಡ ಡ್ರಾ ಮಾಡಿಸಿಕೊಂಡಿದ್ದಾರೆ.
ಆದರೆ ಈ ಬಾರಿ ಅವರ ಅದೃಷ್ಟ ಕೆಟ್ಟಿತ್ತು. ಹಲಸೂರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾದ ಕಾರಣ ಪೊಲೀಸರು ವರುಣ್​ ಹಾಗೂ ತಂಡವನ್ನು ಬಂಧಿಸಿದೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *

Back To Top