Saturday, 24th March 2018  

Vijayavani

Breaking News

ಹಾವಿಗೆ ಹೆದರಿ ಬ್ರೇಕ್ ಹಾಕಿ ಪ್ರಾಣಾನೇ ಕಳ್ಕೊಂಡ!

Monday, 08.01.2018, 3:36 PM       No Comments

ಗದಗ: ನಾಗರ ಹಾವಿಗೆ ಹೆದರಿ ಬ್ರೇಕ್ ಹಾಕಿದ ಬೈಕ್ ಸವಾರ ಬೈಕ್​ನಿಂದ ಬಿದ್ದು ಮೃತಪಟ್ಟಿರುವ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕೊಪ್ಪಳ ಜಿಲ್ಲೆಯ ಹಟ್ಟಿ ಗ್ರಾಮದ ಮರೇಗೌಡ ಹೂವಿನ ಹಡಗಲಿಗೆ ಎತ್ತುಗಳನ್ನು ತರಲು ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

ಬೈಕ್​ನಲ್ಲಿ ಹೋಗುತ್ತಿದ್ದಾಗ ದಾರಿಗೆ ಅಡ್ಡ ಬಂದ ಹಾವಿಗೆ ಹೆದರಿ ಬ್ರೇಕ್ ಹಾಕಿದ ಪರಿಣಾಮ ಬೈಕ್ ಸ್ಕಿಡ್ ಆಗಿ ಅಪಘಾತ ಸಂಭವಿಸಿದೆ. ಈ ಬಗ್ಗೆ ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

Back To Top