Monday, 22nd October 2018  

Vijayavani

ರಾಮನಗರ ಅಖಾಡ ಜಯಿಸಲು ರಣತಂತ್ರ - ದೋಸ್ತಿಗಳ ಮಿಡ್​​​ನೈಟ್​​​ ಮೀಟಿಂಗ್​ - ಸಿಎಂ ಎಚ್​ಡಿಕೆ, ಡಿಕೆಶಿ ನೇತೃತ್ವದಲ್ಲಿ ರಣತಂತ್ರ        ಮಲೆನಾಡ ರಣಕಣದಲ್ಲಿ ಬಿಜೆಪಿ ಅಬ್ಬರ-ಮಧು ಬಂಗಾರಪ್ಪ ಪರ ದಿಗ್ಗಜರ ಪ್ರಚಾರ - ಮಂಡ್ಯದಲ್ಲಿ ಕೈಗೆ ತಲ್ಲಣ ತಂದಿಟ್ಟ ಪರಾಜಿತರು        ಗಣಿನಾಡಿನಲ್ಲಿಂದು ‘ಕೈ’ ದಿಗ್ಗಜರ ದಂಡು - ಸಿದ್ದು, ಡಿಕೆಶಿ, ಜಾರಕಿಹೊಳಿ ಬ್ರದರ್ಸ್​​​​​​ ಕ್ಯಾಂಪೇನ್​ - ಮಾತನಾಡ್ತಾರಾ ನಾಯಕರು..?        ಆದೇಶವಿದ್ರೂ ಮುಚ್ಚಲಿಲ್ಲ ಘಟಕಗಳು - ಹೈಕೋರ್ಟ್​​​​ ಆದೇಶ ಮೀರಿ ನಡೆಯುತ್ತಿವೆ  ಶುದ್ಧ ನೀರಿನ ಘಟಕದ ಹೆಸರಲ್ಲಿ ದಂಧೆ        ವಾಣಿವಿಲಾಸ್​ ಆಸ್ಪತ್ರೆಯಲ್ಲಿ ಲೇಡಿ ಡಾನ್ಸ್​ - ಹಣ ಕೊಟ್ರೆ ಮಾತ್ರ ಒಳಗೆ ಪರ್ಮಿಷನ್​ - ಲಂಚ ಕೊಡದಿದ್ರೆ ಇಲ್ಲಿ ಏನೂ ನಡಿಯಲ್ಲ..!        20 ಜನರ ಉಳಿಸಿ, ಜೀವ ತೊರೆದ ಯೋಧ - ಹುತಾತ್ಮ ಉಮೇಶ್​ ದೇಹ ಇಂದು ರಾಜ್ಯಕ್ಕೆ - ಗೋಕಾಕ್​ ಪಟ್ಟಣದಲ್ಲಿ ಅಂತ್ಯಕ್ರಿಯೆ       
Breaking News

ಹೆತ್ತವರು ಕೂಲಿ ಕೆಲಸ ಮಾಡಿದ ಠಾಣೆಯಲ್ಲೇ ಪಿಎಸ್‌ಐ ಆದ ಪುತ್ರ!

Thursday, 07.12.2017, 8:53 AM       No Comments

ಬಾಗಲಕೋಟೆ: ಮಕ್ಕಳು ಜೀವನದಲ್ಲಿ ಸಾಧನೆ ಮಾಡಬೇಕೆಂದು ತಾಯಂದಿರೆಲ್ಲಾ ಯಾವುದೇ ತ್ಯಾಗಕ್ಕೂ ಸಿದ್ಧರಿರುತ್ತಾರೆ. ಅದೇ ರೀತಿ ಇಲ್ಲೊಬ್ರು ಮಹಾತಾಯಿ ಕೂಲಿ ನಾಲಿ ಮಾಡಿ ಮಕ್ಕಳನ್ನು ವಿದ್ಯಾವಂತರನ್ನಾಗಿಸಿದ್ದಾರೆ. ಅಚ್ಚರಿ ಅಂದ್ರೆ, ಪೋಷಕರು ಹೊಟ್ಟೆಪಾಡಿಗಾಗಿ ಪೊಲೀಸ್ ಠಾಣೆ ಕಟ್ಟಡಕ್ಕೆ ಅಡಿಪಾಯ ಹಾಕಿದ ಠಾಣೆಯಲ್ಲೇ ಮಗ ಇಂದು ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಆಗಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಸುನಗ ಗ್ರಾಮದ ನಿವಾಸಿ ಸುಮಿತ್ರಾ ಪವಾರ್ ಎಂಬುವವರು ಊರಲ್ಲಿ ಕೆಲಸವಿಲ್ಲದೆ 13 ವರ್ಷಗಳ ಹಿಂದೆ ಬಾಗಲಕೋಟೆಯಿಂದ ಮಂಗಳೂರಿಗೆ ಪತಿಯೊಂದಿಗೆ ವಲಸೆ ಬಂದಿದ್ದರು.

ಬಂದ ಮೊದಲಿಗೆ ಇಲ್ಲಿ ಮಾಡಿದ್ದು ಪೊಲೀಸ್‌ ಠಾಣೆಯ ನೂತನ ಕಟ್ಟಡದ ಪಾಯ ಅಗೆಯುವ ಕೆಲಸ. ಮಗ ಇದೀಗ ಅದೇ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಭಿಕ್ಷೆ ಬೇಡಿಯಾದ್ರೂ ಮಕ್ಕಳನ್ನ ವಿದ್ಯಾವಂತರನ್ನಾಗಿಸುತ್ತೇನೆ ಎಂದಿದ್ದ ತಾಯಿಯ ಆಸೆಗೆ ಪ್ರತಿಫಲ ಸಿಕ್ಕಿದೆ.

ಮಂಗಳೂರಿನಲ್ಲಿ ಉತ್ತಮ ಶಿಕ್ಷಣ ಸಿಗುತ್ತೆ ಅನ್ನೋ ಕಾರಣಕ್ಕಾಗಿ ಇಬ್ಬರು ಮಕ್ಕಳು ಪೋಷಕರೊಂದಿಗೆ ವಲಸೆ ಬಂದು ಬೈಕಂಪಾಡಿ ಕೈಗಾರಿಕಾ ಪ್ರದೇಶದ ಪಾಳುಬಿದ್ದ ಕಾರ್ಖಾನೆಯೊಂದರ ಕಟ್ಟಡದಲ್ಲಿ ವಾಸ ಮಾಡ್ತಿದ್ರು.

ಚಿಮಣಿ ದೀಪದಲ್ಲೇ ಓದುತ್ತಿದ್ದ ರವಿ ಸಿಇಟಿಯಲ್ಲಿ ಉತ್ತಮ ಅಂಕ ಪಡೆದು ಎಂಜಿನಿಯರಿಂಗ್ ಮಾಡಿದ್ದರು. ಇದೀಗ ತಂದೆ-ತಾಯಿ ಕೂಲಿ ಮಾಡಿದ ಠಾಣೆಯಲ್ಲೇ ಪಿಎಸ್‌ಐ ಆಗಿರೋದು ಸ್ವತಃ ರವಿ ಪವಾರ್‌ಗೂ ಅಚ್ಚರಿ ಮೂಡಿಸಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top