Sunday, 23rd September 2018  

Vijayavani

ಜಿಮ್​ ತರಬೇತುದಾರನ ಅಪಹರಣ ಮತ್ತು ಹಲ್ಲೆ ಪ್ರಕರಣದಲ್ಲಿ ನಟ ದುನಿಯಾ ವಿಜಯ್​ ಬಂಧನ.        ವಿಧಾನ ಪರಿಷತ್​​ 3 ಸ್ಥಾನಗಳಿಗೆ ಚುನಾವಣೆ: ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆ ದಿನ, ಬಿಜೆಪಿ ಪಟ್ಟಿ ಇಂದು ಅಂತಿಮ        ಮೋದಿ ಕಳ್ಳ ಎಂದಿದ್ದ ರಾಹುಲ್​ ವಿರುದ್ಧ ನಿರ್ಮಲಾ ಗುಡುಗು: ರಾಹುಲ್​ ಅವರದ್ದು ಕಳ್ಳರ ಕುಟುಂಬ ಎಂದ ಸಚಿವೆ        ಹಾಸನದಲ್ಲಿ ಇಂದು ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಮುಖ್ಯಮಂತ್ರಿ ಎಚ್​ಡಿಕೆ       
Breaking News

ಸಿದ್ದರಾಮಯ್ಯರನ್ನು ಮಾತೃ ಪಕ್ಷಕ್ಕೆ ಆಹ್ವಾನಿಸಿದ ಜೆಡಿಎಸ್​ ರಾಜ್ಯಾಧ್ಯಕ್ಷ ವಿಶ್ವನಾಥ್​

Tuesday, 07.08.2018, 12:34 PM       No Comments

ಬೆಂಗಳೂರು: ಜೆಡಿಎಸ್​ನ ರಾಜ್ಯಾಧ್ಯಕ್ಷರಾದ ಮರು ಗಳಿಗೆಯಲ್ಲೇ ಜನತಾ ಪರಿವಾರವನ್ನು ಒಗ್ಗೂಡಿಸುವ ಆಶಾಭಾವ ವ್ಯಕ್ತಪಡಿಸಿದ್ದ ಎ.ಎಚ್​. ವಿಶ್ವನಾಥ್​ ಅವರು ಜೆಡಿಎಸ್​ ಸೇರುವಂತೆ ದೊಡ್ಡ ನಾಯಕನಿಗೇ ಆಹ್ವಾನ ನೀಡಿದ್ದಾರೆ.

ಜೆಡಿಎಸ್​ ಕಚೇರಿಯಲ್ಲಿ ಇಂದು ಮಾತನಾಡಿರುವ ವಿಶ್ವನಾಥ್​,”ಜನತಾ ಪರಿವಾರವನ್ನು ಒಗ್ಗೂಡಿಸಬೇಕಿದೆ. ಪಕ್ಷ ಮತ್ತು ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ನಾವೆಲ್ಲ ಒಗ್ಗೂಡಬೇಕಾಗಿದೆ. ಹಾಗಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೆಡಿಎಸ್​ಗೆ ಪುನಃ ಸೇರಬೇಕು,” ಎಂದು ಅವರು ಹೇಳಿದ್ದಾರೆ.
“ಸಿದ್ದರಾಮಯ್ಯ ಬೆಳೆದಿದ್ದು ಜನತಾ ಪರಿವಾರದಲ್ಲೇ. ಅವರನ್ನು ಬೆಳೆಸಿದ್ದು ದೇವೇಗೌಡರೆ. ಅವರನ್ನು ಮುಖ್ಯಮಂತ್ರಿ ಮಾಡಿದ್ದೂ ಇದೇ ಜೆಡಿಎಸ್​. ಹೀಗಾಗಿ ಸಿದ್ದರಾಮಯ್ಯನವರು ಮಾತೃಪಕ್ಷಕ್ಕೆ ಬರಬೇಕು,” ಎಂದು ಹೇಳಿದ್ದಾರೆ.

ಮಾಜಿ ಸಚಿವ ವಿಶ್ವನಾಥ್​ ಅವರು ಇತ್ತೀಚೆಗಷ್ಟೇ ಜೆಡಿಎಸ್​ನ ರಾಜ್ಯಾಧ್ಯಕ್ಷರಾಗಿ ನೇಮಕವಾಗಿದ್ದು, ಜನತಾ ಪರಿವಾರವನ್ನು ಒಗ್ಗೂಡಿಸುವ ಕಾರ್ಯದಲ್ಲಿ ಗಂಭೀರ ಚಿಂತನೆ ನಡೆಸಿದ್ದು, ಇದರ ಅಂಗವಾಗಿ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿದ್ದಾರೆ.

Leave a Reply

Your email address will not be published. Required fields are marked *

Back To Top