More

    ಮೋದಿ ಸರ್ಕಾರದ 9 ವರ್ಷದ ಆಡಳಿತದಲ್ಲಿ ಮಾವೋವಾದಿಗಳ ಹಿಂಸಾಚಾರ ಶೇ.52ಕ್ಕೆ ಕುಸಿತ: ಅಮಿತ್​ ಷಾ

    ರಾಯ್ಪುರ್​: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 9 ವರ್ಷದ ಆಡಳಿತದಲ್ಲಿ ದೇಶಾದ್ಯಂತ ಮಾವೋವಾದಿಗಳ ಹಿಂಸಾತ್ಮಕ ಘಟನೆಗಳು ಶೇ. 52ಕ್ಕೆ ಕುಸಿದಿದೆ ಎಂದು ಕೇಂದ್ರ ಗೃಹಸಚಿವ ಅಮಿತ್​ ಷಾ ಹೇಳಿದರು.

    ಛತ್ತೀಸ್​ಗಢದ ಬಸ್ತಾರ್‌ ಜಿಲ್ಲೆಯ ಜಗದಲ್‌ಪುರ ಮತ್ತು ಕೊಂಡಗಾಂವ್‌ನಲ್ಲಿ ಚುನಾವಣಾ ಸಮಾವೇಶಗಳನ್ನು ಉದ್ದೇಶಿಸಿ ಅಮಿತ್​ ಷಾ ಗುರುವಾರ ಮಾತನಾಡಿದರು. ಕಾಂಗ್ರೆಸ್​ ನಕ್ಸಲಿಸಂ ಅನ್ನು ಪ್ರೋತ್ಸಾಹಿಸುತ್ತದೆ ಎಂದು ಆರೋಪ ಮಾಡಿದ ಷಾ, ಮುಂದಿನ ನವೆಂಬರ್​ ತಿಂಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ ಮತ್ತೆ ಅಧಿಕಾರ ನೀಡಿದರೆ ಮಾವೋವಾದಿಗಳ ಹಾವಳಿಯಿಂದ ರಾಜ್ಯ ಮುಕ್ತವಾಗಲಿದೆ ಎಂದು ಭರವಸೆ ನೀಡಿದರು. ಅಂದಹಾಗೆ ಮಾವೋವಾದಿ ಪೀಡಿತ ಬಸ್ತಾರ್​ನಲ್ಲಿ ನವೆಂಬರ್​ 7ರ ಮೊದಲ ಹಂತದಲ್ಲಿ ಮತದಾನ ನಡೆಯಲಿದೆ.

    ನಿಮಗೆ ಎರಡು ಆಯ್ಕೆಗಳಿವೆ ಒಂದು ನಕ್ಸಲ್​ ಹಿಂಸೆಯನ್ನು ಪ್ರೋತ್ಸಾಹಿಸುವ ಕಾಂಗ್ರೆಸ್​ ಅನ್ನು ಆಯ್ಕೆ ಮಾಡಬೇಕು ಅಥವಾ ಛತ್ತೀಸ್​ಗಢದಲ್ಲಿ ನಕ್ಸಲಿಸಂ ಅನ್ನು ಬೇರು ಸಮೇತ ಕಿತ್ತುಹಾಕುವ ಬಿಜೆಪಿಯನ್ನು ಆಯ್ಕೆ ಮಾಡಬೇಕು ಎಂದು ಹೇಳಿದ ಷಾ, ಒಂದು ಕಡೆ ದೆಹಲಿಯಲ್ಲಿ ತಮ್ಮ ನಾಯಕರಿಗೆ ಎಟಿಎಂ ಆಗಿ ಕಾರ್ಯನಿರ್ವಹಿಸುತ್ತಿರುವ ಭ್ರಷ್ಟ ಸರ್ಕಾರವಿದೆ ಮತ್ತು ಇನ್ನೊಂದು ಕಡೆ ಅಭಿವೃದ್ಧಿಯನ್ನು ನೀಡುವವರಿದ್ದಾರೆ ಯಾವುದು ಬೇಕು ಆಯ್ಕೆ ಮಾಡಿಕೊಳ್ಳಿ ಎಂದರು.

    ಮೋದಿ ಸರ್ಕಾರದ ಒಂಬತ್ತು ವರ್ಷಗಳಲ್ಲಿ ಮಾವೋವಾದಿ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 70% ರಷ್ಟು ಕಡಿಮೆಯಾಗಿದೆ. ನಾಗರಿಕ ಸಾವುಗಳು ಕೂಡ ಶೇ. 68 ರಷ್ಟು ಕಡಿಮೆಯಾಗಿದೆ ಮತ್ತು ಮಾವೋವಾದಿ ಪೀಡಿತ ಜಿಲ್ಲೆಗಳ ಸಂಖ್ಯೆ ಶೇ. 62 ರಷ್ಟು ಕಡಿಮೆಯಾಗಿದೆ ಎಂದು ಷಾ ಹೇಳಿದರು.

    ರಾಷ್ಟ್ರವು ಈ ಬಾರಿ ಮೂರು ದೀಪಾವಳಿಗಳನ್ನು ಆಚರಿಸಲಿದೆ ಎಂದು ಷಾ ಹೇಳಿದರು. ಅದಕ್ಕೆ ವಿವರಣೆ ನೀಡಿದ ಷಾ, ಮೊದಲನೆಯದು ದೀಪಾವಳಿ ಹಬ್ಬ, ಆನಂತರದ್ದು ಡಿಸೆಂಬರ್ 3ರಂದು ಛತ್ತೀಸ್‌ಗಢದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಆಚರಣೆ ಮತ್ತು ಮೂರನೆಯದು 2024ರ ಜನವರಿಯಲ್ಲಿ ಬರುತ್ತದೆ. ಏಕೆಂದರೆ, ಅಂದು ಛತ್ತೀಸ್‌ಗಢವು ಭಗವಾನ್ ರಾಮನ ಮಾತೃಭೂಮಿಯಾಗಿದ್ದು, ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ವಿಚಾರವಾಗಿ ಸಂತೋಷಪಡಲಿದೆ ಎಂದು ಅಮಿತ್​ ಷಾ ಗುರುವಾರ ಬಸ್ತಾರ್‌ನ ಜಗದಲ್‌ಪುರದಲ್ಲಿ ಹೇಳಿದರು. ಛತ್ತೀಸ್‌ಗಢದ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್‌ಎಂಡಿಸಿ) ಒಡೆತನದ ನಗರನಾರ್ ಉಕ್ಕು ಕಾರ್ಖಾನೆ ಖಾಸಗಿಯವರ ಕೈಗೆ ಹೋಗುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

    ಛತ್ತೀಸ್​ಗಢದಲ್ಲಿ ಕಲ್ಲಿದ್ದಲು ಸಾಗಣೆಯಲ್ಲಿ 540 ಕೋಟಿ ರೂಪಾಯಿ, ಬಡವರ ಪಡಿತರದಲ್ಲಿ 5,000 ಕೋಟಿ ರೂಪಾಯಿ, ಗೋಥಾನ್ ಯೋಜನೆಯಲ್ಲಿ 1,300 ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿದೆ ಎಂದು ಷಾ ಗಂಭೀರ ಆರೋಪ ಮಾಡಿದರು. ನಾನು ಹಲವಾರು ಹಗರಣಗಳನ್ನು ನೋಡಿದ್ದೇನೆ ಆದರೆ, ಗೋವಿನ ಸಗಣಿಯಲ್ಲಿ ಎಂದಿಗೂ ಹಗರಣ ಮಾಡಿಲ್ಲ ಎಂದು ಕಾಂಗ್ರೆಸ್​ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದರು. (ಏಜೆನ್ಸೀಸ್​)

    ಕೇದಾರನಾಥ ಧಾಮ: ಆಮ್ಲಜನಕ ಚಿಕಿತ್ಸೆ ಪಡೆದ 10,627 ಯಾತ್ರಾರ್ಥಿಗಳು, ಇಲ್ಲಿದೆ ಸಂಪೂರ್ಣ ವಿವರ

    ಹಮಾಸ್​ ಕೃತ್ಯ ಖಂಡಿಸಿ ಪೋಸ್ಟ್​ ಮಾಡಿದ ಮಂಗಳೂರು ಮೂಲದ ವೈದ್ಯ ಬಹರೇನ್​ನಲ್ಲಿ ಬಂಧನ: ಕೆಲಸದಿಂದಲೂ ವಜಾ

    ಸತೀಶ್, ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಕಾಂಪ್ರಮೈಸ್ ಗುದ್ದಾಟ: ಸಚಿವರಿಬ್ಬರ ಪರೋಕ್ಷ ವಾಕ್ಸಮರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts