More

    ಚಿತ್ತಾಪುರ: ಬಸವ ಭಾವಚಿತ್ರಕ್ಕೆ ಅಪಮಾನ, ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ

    ಚಿತ್ತಾಪುರ: ಹಲಕರ್ಟಿ ಗ್ರಾಮದಲ್ಲಿ ಶ್ರೀ ಬಸವೇಶ್ವರ ಭಾವಚಿತ್ರಕ್ಕೆ ಅವಮಾನ ಮಾಡಿದವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಲಾಡ್ಜಿಂಗ್ ಕ್ರಾಸ್ ಬಳಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

    ವೇದಿಕೆ ತಾಲೂಕು ಅಧ್ಯಕ್ಷ ಅಣ್ಣಾರಾಯ ಇವಣಿ ಮಾತಾನಾಡಿ, ಹಲಕರ್ಟಿಯಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಅವಮಾನ ಮಾಡಿರುವುದು ಖಂಡನೀಯ. ಅಸಂಖ್ಯಾತ ಬಸವ ಭಕ್ತರ ಭಾವನೆಗೆ ಧಕ್ಕೆ ಉಂಟಾಗಿದೆ. ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಬೇಕು. ಕೂಡಲೇ ಆರೋಪಿಗಳನ್ನು ಪತ್ತೆ ಹಚ್ಚಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.

    ರಾಷ್ಟç ನಾಯಕರು, ಶರಣರು, ಸತ್ಪುರುಷರ ಭಾವಚಿತ್ರ ಮತ್ತು ಮೂರ್ತಿಗಳಿಗೆ ನಿರಂತರ ಅವಮಾನ ಆಗುತ್ತಿವೆ. ಪ್ರಜ್ಞಾವಂತ ಸಮಾಜದಲ್ಲಿ ಇಂತಹ ಘಟನೆಗಳು ನಡೆಯದಂತೆ ಸರ್ಕಾರ ಹಾಗೂ ಪೊಲೀಸ್ ಇಲಾಖೆ ನಿಗಾವಹಿಸಬೇಕು. ಇಂತಹ ಘಟನೆ ಮರುಕಳಿಸದಂತೆ ಕಠಿಣ ಕಾನೂನು ರೂಪಿಸಬೇಕು ಎಂದು ಒತ್ತಾಯಿಸಿದರು.

    ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು, ಹಲಕರ್ಟಿಯ ಶ್ರೀ ಅಭಿನವ ಮುನೀಂದ್ರ ಶಿವಾಚಾರ್ಯರು, ಮುಖಂಡ ಅಂಬರೀಷ ಸುಲೇಗಾಂವ್ ಮಾತನಾಡಿದರು. ತಹಸೀಲ್ದಾರ್ ಸೈಯ್ಯದ್ ಷಾಷವಲಿ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.

    ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನರೆಡ್ಡಿ ಅಮ್ಮಾಪುರ, ಕಲ್ಯಾಣ ಕರ್ನಾಟಕ ಅಧ್ಯಕ್ಷ ದೊಡ್ಡಗೌಡ ಪೊಲೀಸ್ ಪಾಟೀಲ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಭಾಗ್ಯಶ್ರೀ ಪಾಟೀಲ್, ಪ್ರಮುಖರಾದ ಶರಣು ಬಳಿ, ಬಸವರಾಜ ಪಾಟೀಲ್, ನಾಗರಾಜ ಹೂಗಾರ, ಆನಂದ ಪಾಟೀಲ್ ನರಬೋಳ, ಬಸವರಾಜ ಸಂಕನೂರ, ಸಿದ್ರಾಮಯ್ಯ ಗೊಂಬಿಮಠ, ಮಹೇಶ ಬಾಳಿ, ಮಹೇಶ ಸಿಂಪಿ, ಪ್ರೇಮಿಳಾ ಜೇವರ್ಗಿ, ಬಸವರಾಜ ಮಾಲಿಪಾಟೀಲ್, ಅಭಿಷೇಕ ಪಾಟೀಲ್, ಶಿವುಕುಮಾರ ಹೊಸ್ಮನಿ, ಶಂಕರ ಜಾಪುರ, ಸಾಯಿ ನಿಪ್ಪಾಣಿ, ಮಲ್ಲಿಕಾರ್ಜುನ ಬಮ್ಮನಳ್ಳಿ, ಸಿದ್ದಲಿಂಗ ಮದ್ರಿ, ಮಹೇಶರೆಡ್ಡಿ, ಮಲ್ಲಣ್ಣ ಸಾಹು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts