More

    ಆಧಾರ್ ಥರವೇ ಬರಲಿದೆ ಅಪಾರ್: ಒಂದು ದೇಶ ಒಂದು ಐಡಿ; ಇದು ಯಾರಿಗೆ?

    ನವದೆಹಲಿ: ಒಂದು ದೇಶ ಒಂದು ಚುನಾವಣೆ, ಒಂದು ದೇಶ ಒಂದು ಕಾನೂನು… ಹೀಗೆ ದೇಶಾದ್ಯಂತ ಕೆಲವು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿರುವ ಕೇಂದ್ರ ಸರ್ಕಾರ ಇದೀಗ ಆಧಾರ್ ಥರವೇ ಅಪಾರ್ ಎನ್ನುವ ಹೊಸದೊಂದು ಗುರುತಿನ ಚೀಟಿಯನ್ನು ಜಾರಿಗೆ ತರಲು ಮುಂದಾಗಿದೆ.

    ಆಟೋಮೇಟೆಡ್ ಪರ್ಮನೆಂಟ್ ಅಕಾಡೆಮಿಕ್ ಅಕೌಂಟ್ ರಿಜಿಸ್ಟ್ರಿ (APAAR) ಎಂದು ಕರೆಯಲಾಗುವ ಈ ಗುರುತಿನ ಚೀಟಿಯನ್ನು ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಮೂಲಕ ದೇಶದ ಎಲ್ಲ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ವಿಶಿಷ್ಟ ಗುರುತಿನ ಚೀಟಿ ನೀಡಲು ಉದ್ದೇಶಿಸಲಾಗಿದೆ. 2020ರ ರಾಷ್ಟ್ರೀಯ ಶಿಕ್ಷಣ ನೀತಿಯಡಿ ದೇಶದ ಎಲ್ಲ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ವಿದ್ಯಾರ್ಥಿವೃಂದವನ್ನು ಒಳಗೊಂಡಂತೆ ಈ ಅಪಾರ್ ಐಡಿ ತರಲು ಮಾತುಕತೆ ನಡೆಯುತ್ತಿದೆ.

    ಇದನ್ನೂ ಓದಿ: ನಾಳೆ ವಿಶ್ವ ಆಹಾರ ದಿನ: ನಾವು ಆಹಾರವನ್ನು ಹೇಗೆ ನೋಡಬೇಕು, ಹೇಗೆ ಸೇವಿಸಬೇಕು?

    ಏನಿದು ಅಪಾರ್​?

    ಆಟೋಮೇಟೆಡ್ ಪರ್ಮನೆಂಟ್ ಅಕಾಡೆಮಿಕ್ ಅಕೌಂಟ್ ರಿಜಿಸ್ಟ್ರಿ (APAAR-ಅಪಾರ್) ಆಧಾರ್​ ಗುರುತಿನ ಚೀಟಿಯಂತೆ ವಿಶಿಷ್ಟ ಗುರುತಾದರೂ ಆಧಾರ್​​ಗೆ ಪರ್ಯಾಯವಲ್ಲ. ಆಧಾರ್​ಗೆ ಹೆಚ್ಚುವರಿಯಾಗಿ ಇದನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಇದು ಜೀವಿತಾವಧಿ ಐಡಿ ಆಗಿರಲಿದ್ದು, ಅವರ ಶೈಕ್ಷಣಿಕ ಜೀವನ ಹಾಗೂ ಸಾಧನೆಯ ವಿವರವನ್ನು ಒಳಗೊಂಡಿರುತ್ತದೆ.

    ಇದನ್ನೂ ಓದಿ: ಖಿನ್ನತೆ ತಲೆಯ ಸಮಸ್ಯೆ, ಅದಾಗ್ಯೂ ಪರಿಹಾರ ಕಾಲುಗಳಲ್ಲಿದೆ!; ಅಧ್ಯಯನದಲ್ಲಿ ಬಹಿರಂಗ

    ಅಪಾರ್ ಐಡಿ ಕುರಿತಂತೆ ವಿದ್ಯಾರ್ಥಿಗಳ ಪಾಲಕರ ಜತೆ ಮಾತನಾಡುವಂತೆ ಶಿಕ್ಷಕರಿಗೆ ಸರ್ಕಾರ ಸೂಚನೆ ನೀಡಿದೆ. ಈ ಸಂಬಂಧ ಶಿಕ್ಷಣ ಸಂಸ್ಥೆಗಳು ಅ.16ರಿಂದ 18ರ ಅವಧಿಯಲ್ಲಿ ಶಿಕ್ಷಕರು ಮತ್ತು ಪಾಲಕರ ಸಭೆ ನಡೆಸಿದ ಅಭಿಪ್ರಾಯ ಕಲೆಹಾಕುವಂತೆಯೂ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಲಾಗಿದೆ ಎಂಬ ಮಾಹಿತಿ ಬಹಿರಂಗಗೊಂಡಿದೆ.

    ಇದನ್ನೂ ಓದಿ: ನಿಮ್ಮ ದಾಖಲೆಗಳನ್ನು ನೀಡಿ ಬೇರೆ ಯಾರೋ ಸಿಮ್​ ಪಡೆದಿರಬಹುದು!; ಚೆಕ್ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ..

    ಸದ್ಯದ ಮಾಹಿತಿ ಪ್ರಕಾರ ಈ ಐಡಿಯಲ್ಲಿನ ಡೇಟಾ ಸುರಕ್ಷಿತವಾಗಿರಲಿದ್ದು, ಅಗತ್ಯಬಿದ್ದಾಗ ಸಂಬಂಧಪಟ್ಟ ಸರ್ಕಾರಿ ಏಜೆನ್ಸಿಗಳ ಜತೆ ಅಗತ್ಯ ಬಿದ್ದಾಗ ಮಾತ್ರ ಹಂಚಿಕೊಳ್ಳಲಾಗುವುದು ಎನ್ನಲಾಗಿದೆ. ಅಲ್ಲದೆ ವಿದ್ಯಾರ್ಥಿಗಳ ಈ ಐಡಿ ಕ್ರಿಯೇಟ್ ಮಾಡಲು ಅನುಮತಿ ನೀಡಿದ ಪಾಲಕರು ಯಾವುದೇ ಸಂದರ್ಭದಲ್ಲೂ ಅನುಮತಿ ಹಿಂದಕ್ಕೆ ಪಡೆದುಕೊಳ್ಳಲೂಬಹುದು ಎಂದೂ ಹೇಳಲಾಗಿದೆ.

    ಭಿಕ್ಷೆ ಬೇಡುತ್ತಿದ್ದ ವಿದೇಶಿ ಮಹಿಳೆಯ ಬದುಕು ಬದಲಿಸಿದ ಭಾರತೀಯ; ಯಾರೀಕೆ, ಈಗೇನು ಮಾಡುತ್ತಿದ್ದಾರೆ?

    ‘ದೇಶದ ಕುರಿತ ಮೈಂಡ್​ಸೆಟ್ ಬದಲಿಸುತ್ತೇನೆ’ ಅಂತ ಹೊರಟ ಮಿಸ್​ ಯೂನಿವರ್ಸ್ ಸ್ಪರ್ಧಿಗೆ ಆರಂಭದಲ್ಲೇ ಹಿನ್ನಡೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts