More

    ಅಕ್ಟೋಬರ್ 19ಕ್ಕೆ ಕನ್ನಡದಲ್ಲಿ ‘ಘೋಸ್ಟ್’​​; ತೆಲುಗು ಆವೃತ್ತಿಯ ರಿಲೀಸ್​ ಮುಂದೂಡಿಕೆ!

    ​ಬೆಂಗಳೂರು: ಸ್ಯಾಂಡಲ್​ವುಡ್​ನ ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್​ ಹೀರೋ ನಟ ಶಿವರಾಜ್​ಕುಮಾರ್​ ಅಭಿನಯದ ಬಹುನಿರೀಕ್ಷಿತ ‘ಘೋಸ್ಟ್’​ ಇದೇ ಅಕ್ಟೋಬರ್​ 19 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಭರ್ಜರಿ ಓಪನಿಂಗ್ ಪಡೆಯಲು ಸಜ್ಜಾಗಿದೆ. ಈ ಮಧ್ಯೆ ತೆಲುಗು ಭಾಷೆಯಲ್ಲಿ ಚಿತ್ರ ಬೇರೆ ದಿನದಂದು ಬಿಡುಗಡೆಯಾಗಲಿದ್ದು, ಇದೀಗ ಹೊಸ ದಿನಾಂಕಕ್ಕೆ ಮುಂದೂಡಲಾಗಿದೆ.

    ಇದನ್ನೂ ಓದಿ: ಮುಖ ಮುಚ್ಚಿಕೊಂಡು ಮಾಸ್ಕ್​​​ ಧರಿಸುತ್ತಿರುವ ರಾಜ್​​ ಕುಂದ್ರಾ, ತಾನೂ ಮಾಸ್ಕ್ ಧರಿಸಿ ಗಂಡನಿಗೆ ​ಶಿಲ್ಪಾ ಶೆಟ್ಟಿ ಸಾಥ್ ..!

    ‘ಓಲ್ಡ್​ ಮಾಂಕ್’​ ಖ್ಯಾತಿಯ ಶ್ರೀನಿ ನಿರ್ದೇಶನದ ಆಕ್ಷನ್, ಡ್ರಾಮಾ ‘ಘೋಸ್ಟ್‌’ ಬಿಡುಗಡೆಗೂ ಮುನ್ನವೇ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಸದ್ಯ ಈ ಚಿತ್ರದ ತೆಲುಗು ಆವೃತ್ತಿಯ ಬಿಡುಗಡೆ ದಿನಾಂಕದಲ್ಲಿ ಇದೀಗ ಮೂಂಡೂಡಿಕೆ ಮಾಡಲಾಗಿದೆ. ಘೋಸ್ಟ್‌ನ ತೆಲುಗು ಆವೃತ್ತಿಯು ಅಕ್ಟೋಬರ್ 27, 2023 ರಂದು ಥಿಯೇಟರ್‌ಗಳಿಗೆ ಬರಲಿದೆ ಎಂದು ಇತ್ತೀಚಿನ ವರದಿ ತಿಳಿಸಿದೆ.

    ಇದನ್ನೂ ಓದಿ:  ಕುಡಿಯುವ ನೀರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗಲ್ಲ: ಸಿದ್ದರಾಮಯ್ಯ

    ‘ಘೋಸ್ಟ್‌’ ಚಿತ್ರದಲ್ಲಿ ಜಯರಾಮ್, ಅನುಪಮ್ ಖೇರ್, ಪ್ರಶಾಂತ್ ನಾರಾಯಣನ್, ಅರ್ಚನಾ ಜೋಯಿಸ್, ಸತ್ಯ ಪ್ರಕಾಶ್ ಮುಂತಾದವರ ತಾರಾಗಣವಿದೆ. ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಈ ಚಿತ್ರಕ್ಕೆ ಮ್ಯಾಜಿಕಲ್ ಕಂಪೋಸರ್​ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ,(ಏಜೆನ್ಸೀಸ್).

    ಭಾರೀ ಮಳೆಯ ಮುನ್ಸೂಚನೆ; ಈ ರಾಜ್ಯದ 4 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದ ಭಾರತೀಯ ಹವಾಮಾನ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts