More

    ಜನತಾ ದರ್ಶನ ಕಾರ್ಯಕ್ರಮ! ಅಹವಾಲುಗಳ ಸ್ವೀಕಾರ! ಸ್ಥಳದಲ್ಲೇ ಪರಿಹಾರ ಒದಗಿಸಲು ಪ್ರಯತ್ನ

    ವಿಜಯವಾಣಿ ಸುದ್ದಿಜಾಲ ಗದಗ
    ಜಿಲ್ಲಾಡಳಿತ ಭವನ ಆವರಣದಲ್ಲಿ ಶನಿವಾರ ರಾಜ್ಯ ಸರ್ಕಾರದಿಂದ ಏರ್ಪಡಿಸಿದ್ದ ಜನತಾ ದರ್ಶನ ಕಾರ್ಯಕ್ರಮ ಜರುಗಿತು.

    ತಾಲೂಕು, ಜಿಲ್ಲಾ ಮತ್ತು ಸಿಎಂ ನೇತೃತ್ವ ಮೂರು ಹಂತಗಳಲ್ಲಿ ಸಾರ್ವಜನಿಕರ ಅಹವಾಲುಗಳು ಸ್ವಿಕೃತ ಕಾರ್ಯಕ್ರಮದ ಭಾಗವಾದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಚಿವ ಎಚ್​.ಕೆ. ಪಾಟೀಲ ನೂರಾರು ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಿ, ಕೆಲವರಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದರು. ಮಾಸಾಶನ, ಮನೆ ಮಂಜೂರಾತಿ, ವಿಧವಾ ವೇತನ, ಭೂ ದಾಖಲಾತಿ. ಬೆಳೆ ಪರಿಹಾರ, ಸಾಲ ಸೌಲಭ್ಯ, ಗುತ್ತಿಗೆ ನೌಕರ ಸಮಸ್ಯೆ ಸೇರಿದಂತೆ ವಿವಿಧ ಇಲಾಖೆಯ ಅಜಿರ್ಗಳು ಸ್ವೀಕೃತವಾದವು. ಸಮಸ್ಯೆಗಳನ್ನು ಹೊತ್ತು ಬಂದ ಕೆಲ ಸಾರ್ವಜನಿಕರಿಗೆ ಸ್ಥಳದಲ್ಲೇ ಪರಿಹಾರ ನೀಡಿದರೆ, ಕೆಲವರಿಗೆ ಸಮಯಾವಕಾಶ ನೀಡಿ ಸಮಸ್ಯೆಗಳನ್ನು ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
    ಕಾರ್ಯಕ್ರಮದಲ್ಲಿ ಪ್ರತಿ ತಾಲೂಕಿಗೆ 15 ಕೌಂಟರ್​ಗಳನ್ನು ಪ್ರತ್ಯೇಖವಾಗಿ ತೆರೆಯಲಾಗಿತ್ತು. ಆನ್​ಲೈನ್​ ಮೂಲಕ ಅಜಿರ್ ಸ್ವೀಕರಿಸಿದ ನಂತರ ಸಚಿವರು, ಜಿಲ್ಲಾಧಿಕಾರಿಗಳು ಅಜಿರ್ಗಳನ್ನು ಕೈಗೆತ್ತಿಕೊಳ್ಳುತ್ತಿದ್ದರು. ಜನತಾ ದರ್ಶನಕ್ಕೆ ಆಗಮಿಸಿದ್ದ ಜನರಿಗೆ ಸರ್ಕಾರದ ವತಿಯಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು.
    ಇದಕ್ಕೂ ಮೊದಲು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವ ಎಚ್​.ಕೆ. ಪಾಟೀಲ, ಆಡಳಿತದಲ್ಲಿ ಶೋಷಣೆ ಮುಕ್ತ ಸಾರ್ವಜನಿಕ ಸೇವೆ ಜಾರಿಗೆ ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರಭುಗಳು ಪ್ರಜೆಗಳಕಡೆ ಧಾವಿಸಿ, ಅವರ ಸಮಸ್ಯೆ ಆಲಿಸಿ ಬಗೆಹರಿಸುವ ಪ್ರಯತ್ನ ಮಾಡಲಾಗುತ್ತಿದೆ. ಈ ಕಾರ್ಯಕ್ರಮ ಆದರ್ಶ ಕಾರ್ಯಕ್ರಮ ಆಗಬೇಕು. ಸಾಮಾನ್ಯ ವರ್ಗದ ಜನರು ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಲು ಸರ್ಕಾರಿ ಕಚೇರಿಗೆ ಬಂದಾಗ ದಲ್ಲಾಳಿಗಳ ಹಾವಳಿಗೆ ಬೇಸತ್ತಿದ್ದರು. ಈ ವ್ಯವಸ್ಥೆ ತೊಲಗಿಸಿ, ಸರ್ಕಾರವೇ ನೇರವಾಗಿ ಜನರ ಸಮಸ್ಯೆಗೆ ಪರಿಹಾರ ನೀಡುವ ವ್ಯವಸ್ಥೆ ಇದಾಗಿದೆ ಎಂದು ಸಚಿವರು ಹೇಳಿದರು.

    ಅಹವಾಲುಗಳು:
    ಕಳಸಾಪುರ ಗ್ರಾಪಂ ವ್ಯಾಪ್ತಿಯ ಆದಿತ್ಯ ನಗದಲ್ಲಿ ಜೆಜೆಎಂ ಯೋಜನೆ ರ್ಪೂಣಗೊಳ್ಳದ ಕುರಿತು ಗ್ರಾಮಸ್ಥರು ಅಹವಾಲು ತೋಡಿಕೊಂಡರು. ಆದಿತ್ಯ ನಗರದಲ್ಲಿ 40 ಕುಟುಂಬಳಿಗೆ ನೀರಿನ ಸಮಸ್ಯೆ ಎದುರಾಗಿದೆ ಎಂದು ಮನವಿ ಮಾಡಿಕೊಳ್ಳಲಾಯಿತು. ಮನವಿ ಸ್ವೀಕರಿಸಿ ಸಚಿವರು 7 ದಿನಗಳ ಒಳಗಾಗಿ ಈ ಸಮಸ್ಯೆ ಬಗೆಹರಿಯಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. 7 ದಿನಗಳ ನಂತರ ಸಮಸ್ಯೆಗೆ ಪರಿಹಾರ ದೊರೆಯದೇ ಇದ್ದರೆ ನೇರವಾಗಿ ಬಂದು ಮಾಹಿತಿ ತಿಳಿಸುವಂತೆ ಅಜಿರ್ದಾರರಿಗೆ ಸೂಚಿಸಿದರು.
    ನರಸಾಪುರ ಗ್ರಾಮದಲ್ಲಿ 90 ಮನೆಗಳಿಗೆ ಇಸ್ವತ್ತು ಖಾತೆ ಮಾಡಿಕೊಡಲಿ ಸ್ಥಳಿಯ ಪಿಡಿಓ ಸತಾಯಿಸುತ್ತಿರುವ ಕುರಿತು ಇಲ್ಲಿನ ಜನರು ಅಳಲು ತೋಡಿಕೊಂಡರು. ವಾರದೊಳಗೆ ಪ್ರಕರಣ ಪರಿಶೀಲಿಸಿ ಇಸ್ವತ್ತು ಮಾಡಿಕೊಡಲು ಪಿಡಿಒಗೆ ನಿರ್ದೇಶನ ನೀಡಲಾಯಿತು.
    ಗಂಗಮ್ಮ ವಾಲ್ಮೀಕಿ ಎಂಬುವರು ರಾಷ್ಟ್ರೀಯ ಕುಟುಂಬ ಯೋಜನೆಯಲ್ಲಿ ಸಹಾಯಧನ ಕೋರಿ ಅಜಿರ್ ಸಲ್ಲಿಸಿ, ಎರಡು ವರ್ಷಗಳಿಂದ ಕಚೇರಿಗೆ ಅಲೆದಾಡುತ್ತಿದ್ದೇನೆ, ಇನ್ನೂ ಸಹಾಯಧನ ಸಿಕ್ಕಿಲ್ಲ ಎಂದು ಕಾರ್ಯಕ್ರಮದಲ್ಲಿ ಮನವಿ ಮಾಡಿಕೊಂಡರು. ನಾಲ್ಕು ಗಂಟೆ ಒಳಗಾಗಿ ಆದೇಶ ಪ್ರತಿ ನೀಡುವುದಾಗಿ ಸೂಚಿಸಿದ ಸಚಿವರು, ಮಧ್ಯಾಹ್ನವೇಳೆ ಸಹಾಯಧನ ಮಂಜೂರು ಆದೇಶವನ್ನು ಲಾನುಭವಿಗೆ ಕೊಡಮಾಡಿದರು.
    ಗದಗ ನಗರದ ಎಸ್​.ಎಂ. ಕೃಷ್ಣ ನಗರದ ಶಬನಾ ಹೊಸಪೇಟೆ ಎಂಬುವರು ವಿಧವಾ ವೇತನಕ್ಕಾಗಿ ಅಜಿರ್ ಸಲ್ಲಿಸಿದ್ದು, ಸ್ಥಳದಲ್ಲೇ ಆದೇಶ ಪ್ರತಿ ನೀಡಲಾಯಿತು.
    ಮಹಾಂತೇಶ ದೊಡ್ಡಮನಿ ಎಂಬುವರು “ಕೊಳುವೆ ಬಾವಿ ಮಂಜೂರು ಮಾಡುವಂತೆ ಅಂಬೇಡ್ಕರ್​ ಅಭಿವೃದ್ಧಿ ನಿಗಮಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದೇನೆ, ಕಳೆದ ಮೂರ್ನಾಲ್ಕು ವರ್ಷದಿಂದ ಕಚೇರಿಗೆ ಅಲೆದಾಡುತ್ತಿದ್ದೇನೆ ಎಂದು ನೋವು ತೋಡಿಕೊಂಡರು. ಕಚೇರಿ ಅಧಿಕಾರಿಗಳನ್ನು ಕರೆಸಿ ಸ್ಥಳದಲ್ಲಿ ಚಚಿಸಲಾಯಿತು. ಮುಂಬರುವ ಲಾನುಭವಿಗಳ ಪಟ್ಟಿಯಲ್ಲಿ ಇವರ ಹೆಸರನ್ನು ಪರಿಗಣಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
    ರೋಣ ತಾಲೂಕಿನ ವೀರಪ್ಪ ಜಕ್ಕಲಿ ಎಂಬುವರು ಮಳೆಗೆ ಮನೆಬಿದ್ದ ಪರಿಹಾರ ವಿತರಿಸುವಂತೆ ಮನವಿ ಮಾಡಿದರು. ತಾಪಂ ಕಾರ್ಯನಿರ್ವಹಣಾ ಅಧಿಕಾರಿಗೆ ಸ್ಥಳ ವೀಕ್ಷಣೆ ಮಾಡಿ ಸಮಸ್ಯೆ ಪರಿಹರಿಸುವಂತೆ ಸೂಚಿಸಲಾಯಿತು.

    ಜಿಲ್ಲಾ ಉಸ್ತುವಾರಿ ಕಾರ್ಯದಶಿರ್ ಸಿ. ಶಿಖಾ, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಬಿ. ಎಸ್​. ನೇಮಗೌಡ, ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಬಾಜಪೇಯಿ, ಅಪರ ಜಿಲ್ಲಾಧಿಕಾರಿ ಅನ್ನರ್ಪೂಣ ಎಂ, ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ತಾಲೂಕು ಅಧಿಕಾರಿಗಳು ಇದ್ದರು.

    ಪಠ್ಯಪುಸ್ತಕ ವಿತರಣೆ:
    ವಿಕಲಚೇತನ ಶಾಲಾ ಶಿಕ್ಷಕ ಓರ್ವ ವಿಕಲಚೇತನ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ ನೀಡುವ ಕುರಿತು ಕಾರ್ಯಕ್ರಮದಲ್ಲಿ ಮಾಡಿಕೊಂಡು ಮನವಿ ಅಧಿಕಾರಿಗಳನ್ನು ಮಮ್ಮಲ ಮರಗುಂತೆ ಮಾಡಿತು. ಮಕ್ಕಳ ಕಲ್ಯಾಣ ಇಲಾಖೆ, ವಿಕಲಚೇತನ ಅಭಿವೃದ್ಧಿ ಇಲಾಖೆ ಮತ್ತು ಶಿಕ್ಷಣ ಅಧಿಕಾರಿಗಳನ್ನು ಕರೆಸಿದ ಅಧಿಕಾರಿಗಳು ವಿಕಲಚೇತನ ಮಕ್ಕಳಿಗೆ ಪಠ್ಯಪುಸ್ತಕ ನೀಡುವ ಪ್ರಾವಧಾನ ಕುರಿತು ಚಚಿರ್ಸಿದರು. ವಾರದೊಳಗೆ ಮಕ್ಕಳಿಗೆ ಪಠ್ಯಪುಸ್ತಕ ವಿತರಣೆ ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.

    ರಸ್ತೆ ಸುಧಾರಿಸಿ:
    ಯಳವತ್ತಿ ಮತ್ತು ಯತ್ನಳ್ಳಿ ಗ್ರಾಮದ ನಡುವಿನ ರಸ್ತೆ ಹಾಳಾದ ಕಾರಣ ಸಂಚಾರ ಅಸ್ತವ್ಯಸ್ತ ಕುರಿತು ಗ್ರಾಮಸ್ಥರು ಅಜಿರ್ ಸಲ್ಲಿಸಿದರು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಕರೆಸಿ ಎರಡು ತಿಂಗಳೊಳಗಾಗಿ ರಸ್ತೆ ದುರಸ್ಥಿ ಕೈಗೊಳ್ಳುವಂತೆ ಮತ್ತು ತಕ್ಷಣವೇ ತಗ್ಗು ಗುಂಡಿಗಳನ್ನು ಮುಚ್ಚುವ ವ್ಯವಸ್ಥೆ ಮಾಡಲು ಸೂಚಿಸಲಾಯಿತು.

    ರೈತರಿಗೆ ಜಿಪಿಎಸ್​ ತರಬೇತಿ
    ಬೆಳ ಸಮೀಕ್ಷೆ ವಿಳಂಬ ಕುರಿತು ರೈತರೊಬ್ಬರು ಮನವಿ ಸಲ್ಲಿಸಿದರು. ಜಿಪಿಎಸ್​ ಮಾಡುವ ಒಂದು ಪ್ರಕರಣಕ್ಕೆ ಸರ್ಕಾರದಿಂದ 10 ರೂ. ರ್ಖಚಾಗುತ್ತದೆ. ರೈತರಿಂದಲೂ ಕೃಷಿ ಅಧಿಕಾರಿಗಳು ವಸೂಲಿ ಮಾಡುತ್ತಾರೆ. ಜಿಪಿಎಸ್​ ಮಾಡಿಕೊಳ್ಳುವ ತರಬೇತಿಯನ್ನು ರೈತರಿಗೆ ನೀಡುತ್ತಿಲ್ಲ. ಕೃಷಿ ಇಲಾಖೆಯಿಂದ ತರಬೇತಿ ನೀಡಬೇಕು ಎಂದು ಮನವಿ ಸಲ್ಲಿಸಲಾಯಿತು. ಅಕ್ಟೋಬರ್​ ಮೊದಲ ವಾರದಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಆರಂಭಿಸಲು ಕೃಷಿ ಇಲಾಖಾ ಅಧಿಕಾರಿಗಳಿಗೆ ಸೂಚಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts