More

    ಅಮೆರಿಕಾದಾದ್ಯಂತ ಭೂಮಿ ಮೇಲೆ ದೈತ್ಯ ಬಿರುಕು, ವಿಜ್ಞಾನಿಗಳ ಎಚ್ಚರಿಕೆ!

    ಅಮೆರಿಕ: ಅತಿಯಾದ ಅಂತರ್ಜಲ ಪಂಪಿಂಗ್‌ನಿಂದಾಗಿ ಅಮೆರಿಕಾ ಪರಿಸರ ಬಿಕ್ಕಟ್ಟನ್ನು ಎದುರಿಸುತ್ತಿದೆ. ಫಿಶರ್ಸ್ ಎಂದು ಕರೆಯಲ್ಪಡುವ ಈ ದೈತ್ಯ ಬಿರುಕುಗಳು ಅರಿಜೋನಾ, ಉತಾಹ್ ಮತ್ತು ಕ್ಯಾಲಿಫೋರ್ನಿಯಾ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಗುರುತಿಸಲ್ಪಟ್ಟಿವೆ.


    ದೇಶದ ನೈಋತ್ಯ ಭಾಗಗಳಲ್ಲಿ ನೆಲದಲ್ಲಿ ಬೃಹತ್ ಗಾತ್ರದ ಬಿರುಕು ಕಾಣಿಸಲು ಪ್ರಾರಂಭಿಸಿರುವುದರಿಂದ ಯುನೈಟೆಡ್ ಸ್ಟೇಟ್ಸ್ ತೀವ್ರ ಪರಿಸರ ಬಿಕ್ಕಟ್ಟನ್ನು ಎದುರಿಸುತ್ತಿದೆ.


    ಜಾಗತಿಕ ನೀರಾವರಿಯ ಸುಮಾರು 40% ಅನ್ನು ಒದಗಿಸುವ ಅಂತರ್ಜಲ ಭೂಮಿಯಲ್ಲಿ ನೈಸರ್ಗಿಕವಾಗಿ ಮರುಪೂರಣಗೊಳಿಸುವುದಕ್ಕಿಂತ ವೇಗವಾಗಿ ಪಂಪ್ ಮಾಡಲಾಗುತ್ತಿದೆ. ಇದರಿಂದ ಭೂಮಿ ಬಾಯಿ ತೆರೆದುಕೊಳ್ಳುತ್ತಿದೆ ಎಂದು ಬಿಸಿನೆಸ್ ಇನ್ಸೈಡರ್ ವರದಿ ಮಾಡಿದೆ.


    ಪ್ರಸ್ತುತ ಅರಿಝೋನಾ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ 169 ಮೈಲುಗಳಷ್ಟು ಬಿರುಕುಗಳಿವೆ. ಈ ಬಗ್ಗೆ ಅರಿಝೋನಾ ಭೂವೈಜ್ಞಾನಿಕ ಸಮೀಕ್ಷೆ ಮಾಡುತ್ತಿದೆ. ಅರಿಝೋನಾವು ಈ ಸಮಸ್ಯೆಯ ಬಗ್ಗೆ ಬಹಳ ಸಮಯದಿಂದ ಅರಿತಿದೆ. 2002 ರಿಂದ ಅದನ್ನು ಮೇಲ್ವಿಚಾರಣೆ ಮಾಡುತ್ತಿದೆ.


    ನೈಋತ್ಯದಾದ್ಯಂತ ರೈತರಿಗೆ ಪ್ರಮುಖ ಸಿಹಿನೀರಿನ ಮೂಲವಾದ ಕೊಲೊರಾಡೋ ನದಿಯು ಈಗಾಗಲೇ 2000 ರಿಂದ ಸುಮಾರು 20% ರಷ್ಟು ಬತ್ತಿದೆ. ಹವಾಮಾನ ಬದಲಾವಣೆಯಿಂದ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡಿದೆ. ಜಾಗತಿಕ ತಾಪಮಾನವು ಹೆಚ್ಚಾದಂತೆ ನದಿಗಳು ಬತ್ತುತ್ತಿವೆ.

    ಸಿಹಿನೀರಿಗಾಗಿ ರೈತರು ಅಂತರ್ಜಲವನ್ನು ಅವಲಂಬಿಸಿದ್ದಾರೆ. ಆದರೆ ಸಿಹಿನೀರಿನ ಮೂಲವಾದ ಕೊಲೊರಾಡೋ ನದಿ ಬತ್ತಿ ಹೋಗುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts