More

    ಉಮಾಶ್ರೀ, ಎಂಆರ್‌ಸೀ, ಸುಧಾಮ್ ಗುರುವಾರ ಪ್ರಮಾಣ

    ಬೆಂಗಳೂರು: ವಿಧಾನ ಪರಿಷತ್‌ಗೆ ನಾಮನಿರ್ದೇಶನಗೊಂಡ ಮಾಜಿ ಸಚಿವ ಉಮಾಶ್ರೀ, ಜಾರಿ ನಿರ್ದೇಶನಾಲಯದ ಮಾಜಿ ಅಧಿಕಾರಿ ಸುಧಾಮ್ ದಾಸ್, ಮಾಜಿ ಸಚಿವ ಎಂ.ಆರ್.ಸೀತಾರಾಮ್ ಗುರುವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
    ಬೆಳಗ್ಗೆ 11 ಗಂಟೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಭಾಪತಿಯವರು ಪ್ರಮಾಣ ವಚನ ಬೋಧಿಸುವರು.
    2023ರ ಮೇ 17ರಂದು ಮೋಹನ್ ಕೊಂಡಜ್ಜಿ ಹಾಗೂ ಪಿ.ಆರ್ ರಮೇಶ್ ನಾಮನಿರ್ದೇಶನ ಅವಧಿ ಮುಕ್ತಾಯವಾಗಿತ್ತು. ಜೂನ್ 8ರಂದು ಸಿ.ಎಂ.ಲಿಂಗಪ್ಪ ಸದಸ್ಯತ್ವ ಅವಧಿ ಮುಕ್ತಾಯವಾಗಿತ್ತು. ಈ ಮೂರು ಸ್ಥಾನಕ್ಕೆ 20ಕ್ಕಿಂತ ಹೆಚ್ಚು ಮಂದಿ ಆಕಾಂಕ್ಷಿಗಳಿದ್ದರು. ಅಂತಿಮವಾಗಿ ಉಮಾಶ್ರೀ, ಸುಧಾಮ್ ದಾಸ್, ಎಂ.ಆರ್.ಸೀತಾರಾಮ್ ಹೆಸರು ಅಂತಿಮಗೊಂಡಿತ್ತು. 2024ರ ಅಕ್ಟೋಬರ್‌ನಲ್ಲಿ ಮತ್ತೆರೆಡು ನಾಮನಿರ್ದೇಶನ ಸ್ಥಾನ ಖಾಲಿಯಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts