Wednesday, 18th October 2017  

Vijayavani

1. ರಾತ್ರಿ ಹಾಕಿದ ಟಾರು ಬೆಳಗ್ಗೆ ಕಿತ್ತುಬಂತು- ಸರ್ಕಾರದಿಂದ ಕಾಟಾಚಾರದ ಗುಂಡಿ ಮುಚ್ಚೋಕಾರ್ಯ- ಕೋಟ್ಯಾಂತರ ರೂಪಾಯಿ ನೀರಲ್ಲಿ ಹೋಮ 2. ಬರಿಗೈಯಲ್ಲಿ ಕಾರ್ಮಿಕನಿಂದ ಮಾನ್​ಹೋಲ್​ ಸ್ವಚ್ಛತೆ- ಸುರಕ್ಷಾ ಸಾಧನ ನೀಡಿದ ಮಹಾನಗರ ಪಾಲಿಕೆ- ಮಂಗಳೂರಿನಲ್ಲಿ ಅಮಾನವೀಯ ಘಟನೆ 3. ಪರಿಸರ ಉಳಿಸಿ, ಪಟಾಕಿ ತ್ಯಜಿಸಿ ಅಭಿಯಾನಕ್ಕೆ ಆಕ್ಷೇಪ- ವರ್ತಕರೊಂದಿಗೆ ಪರಿಸರ ಪ್ರೇಮಿಗಳ ವಾಗ್ವಾದ- ಮೈಸೂರಿನಲ್ಲಿ ಪಟಾಕಿ ಜಟಾಪಟಿ 4. ಅನೈತಿಕ ಸಂಬಂಧ ತಿಳಿದು ಗಂಡ ಬಿಟ್ಟ- ಪ್ರಿಯಕರನಿಗಾಗಿ ಮಗಳಿಗೆ ಕೊಟ್ಲು ಕಾಟ- ಗಂಗಾವತಿಯ ಹಿರೇಜಂತಕಲ್​ನಲ್ಲಿ ಕ್ರೂರಿ ತಾಯಿ 5. ನೋಟ್​ಬ್ಯಾನ್​ ವಿಚಾರದಲ್ಲಿ ಕಮಲ್​ ಉಲ್ಟಾ- ಬೆಂಬಲ ವ್ಯಕ್ತಪಡಿಸಿದ್ದಕ್ಕೆ ಕ್ಷಮೆಯಾಚನೆ- ಇದು ಕಮಲ್​ ಹೊಸ ರಾಜಕೀಯ ಆಟ
Breaking News :

91ನೇ ವಯಸ್ಸಿನಲ್ಲಿ ಪದವಿ!

Saturday, 12.08.2017, 3:02 AM       No Comments

ವಿದ್ಯೆಗೆ ವಯಸ್ಸಿನ ಹಂಗಿಲ್ಲ. ಯಾವುದೇ ವಯಸ್ಸಿನಲ್ಲಿ ಬೇಕಾದರೂ ಕಲಿಕೆಯಲ್ಲಿ ತೊಡಗಬಹುದು. ವಯಸ್ಕರು ದಶಕಗಳ ಹಿಂದೆ ಅರ್ಧಕ್ಕೆ ಬಿಟ್ಟಿದ್ದ ಶಿಕ್ಷಣವನ್ನು ಪೂರ್ಣಗೊಳಿಸಿದ ಉದಾಹರಣೆಗಳು ಆಗಾಗ್ಗೆ ಕಂಡು ಬರುತ್ತವೆ. ಇಂತಹದೇ ಒಂದು ಸಾಧನೆ ಮಾಡಿದ್ದಾರೆ ಥಾಯ್ಲೆಂಡ್​ನ 91ರ ಮಹಿಳೆ ಕಿಮ್ಲನ್ ಜಿನಕುಲ್. ಕಳೆದ 10 ವರ್ಷಗಳಿಂದ ನಿರಂತರವಾಗಿ ಪ್ರಯತ್ನಿಸಿ ಕೊನೆಗೂ ಡಿಪ್ಲೊಮಾ ಪದವಿ ಪಡೆದಿ ದ್ದಾರೆ. ಇತ್ತೀಚೆಗೆ ಥಾಯ್ಲೆಂಡ್​ನ ಮಾನವ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರಿಗೆ ಪದವಿ ನೀಡಿದೆ. ಈ ಪ್ರಮಾಣಪತ್ರವನ್ನು ಕಳೆದ ವರ್ಷವಷ್ಟೇ ಸಿಂಹಾಸವನ್ನೇರಿರುವ ಅಲ್ಲಿನ ರಾಜ ಮಹಾ ವಜ್ರಲೋಂಗ್​ಕರ್ನ್ ಬೋಡಿಂಡ್ರೇಡ್ ವಯಾವರಂಗ ಕುನ್ ವಿತರಿಸಿದ್ದಾರೆ. ಅಲ್ಲಿನ ಸಂಪ್ರದಾಯ ಪ್ರಕಾರ ಪದವಿ ಪ್ರಮಾಣಪತ್ರಗಳನ್ನು ರಾಜ ಪರಿವಾರದವರೇ ವಿತರಿಸುತ್ತಾರೆ. ತಮ್ಮ ಸಾಧನೆ ಕುರಿತು ಹೆಮ್ಮೆ ವ್ಯಕ್ತಪಡಿಸಿರುವ ಕಿಮ್ಲನ್, ನಾನು ವಿದ್ಯಾಭ್ಯಾಸ ಪಡೆಯದಿದ್ದಲ್ಲಿ, ನಾವು ಏನನ್ನೂ ಓದಲಾಗದು. ಓದದಿದ್ದಲ್ಲಿ ವಿಷಯಗಳ ಕುರಿತು ಮಾಹಿತಿ ಇರುವುದಿಲ್ಲ. ಆದ್ದರಿಂದ ನಾವು ಮಾತನಾಡುವಾಗ ಅದಕ್ಕೊಂದು ತರ್ಕಬದ್ಧ ವಿಚಾರ ಇರುವುದಿಲ್ಲ ಎಂದಿದ್ದಾರೆ. –ಏಜೆನ್ಸೀಸ್

Leave a Reply

Your email address will not be published. Required fields are marked *

Back To Top