Wednesday, 21st March 2018  

Vijayavani

ಸದ್ಯಕ್ಕಿಲ್ಲ ರೋಹಿಣಿ ಸಿಂಧೂರಿ ವರ್ಗಾವಣೆ - ಸರ್ಕಾರದ ಆದೇಶಕ್ಕೆ ತಡೆ - ಹೊಸ ಆದೇಶಕ್ಕೆ ಸಿಎಟಿ ಸೂಚನೆ        ಇರಾಕ್‌ನಲ್ಲಿ ಭಾರತೀಯರ ಹತ್ಯೆಗೆ ವಿಪಕ್ಷ ಖಂಡನೆ - ಕಲಾಪದ ಆರಂಭದಲ್ಲೇ ಗದ್ದಲ ಕೋಲಾಹಲ - ರಾಜ್ಯಸಭಾ ಕಲಾಪ ನಾಳೆಗೆ ಮುಂದೂಡಿಕೆ        ಕೈ ಕೊಟ್ಟು ತೆನೆ ಇಳಿಸಿ ಕಮಲ ಮುಡಿದ ನಡಹಳ್ಳಿ - ಬಿಜೆಪಿ ಸೇರಿದ ಎ.ಎಸ್‌ ಪಾಟೀಲ್ - ಬಿಎಸ್‌ವೈ ಸಮ್ಮುಖದಲ್ಲಿ ಸೇರ್ಪಡೆ        ಬೆಂಗಳೂರಲ್ಲಿ ಮಿತಿ ಮೀರಿದ ಸರಗಳ್ಳರ ಹಾವಳಿ - ವಿದ್ಯಾರಣ್ಯಪುರದಲ್ಲಿ ಚೈನ್ ಸ್ನ್ಯಾಚಿಂಗ್ - ವೃದ್ಧೆಯ 16 ಗ್ರಾಂ ಸರ ಕಸಿದ ಖದೀಮರು        ಕಾಫಿನಾಡಲ್ಲಿ ರಾಹುಲ್‌ ಯಾತ್ರೆ - ಶೃಂಗೇರಿಗೆ ಎಐಸಿಸಿ ಅಧ್ಯಕ್ಷರ ಭೇಟಿ - ಸಂಜೆ ಹಾಸನದಲ್ಲಿ ಕಾಂಗ್ರೆಸ್ ರಣಕಹಳೆ       
Breaking News

ತಾತ ಹೆಲ್ಮೆಟ್​ ಧರಿಸದಿದ್ದು, ಮೊಮ್ಮಗನ ಜೀವಕ್ಕೆ ಕುತ್ತು ತಂದಿತೇ?

Saturday, 25.11.2017, 4:47 PM       No Comments

ಬೆಂಗಳೂರು: ಶಾಲೆಯಿಂದ ಮೊಮ್ಮಕ್ಕಳನ್ನು ಬೈಕ್​ನಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ಬಸ್ ಹರಿದು ಮೊಮ್ಮಗನೊಬ್ಬ ಸ್ಥಳದಲ್ಲೇ ಶನಿವಾರ ಮೃತಪಟ್ಟಿದ್ದಾನೆ. ಹೆಲ್ಮೆಟ್​ ಧರಿಸದ್ದರಿಂದ ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ದುರಂತ ಸಂಭವಿಸಿದೆ ಎನ್ನಲಾಗಿದೆ.

ವಿದ್ಯಾ ವರ್ಧಕ ಶಾಲೆಯಲ್ಲಿ 5ನೇ ತರಗತಿ ವ್ಯಾಸಂಗ ಮಾಡುತ್ತಿದ್ದ 9 ವರ್ಷದ ದರ್ಶನ್ ಮೃತ ಬಾಲಕ.

ಘಟನೆ ಸಂಭವಿಸಿದ್ದು ಹೇಗೆ?

ಮಧ್ನಾಹ್ನ ರಾಜಣ್ಣ ಎಂಬವರು ತಮ್ಮ ಮೊಮ್ಮಕ್ಕಳಾದ ದರ್ಶನ್ ಹಾಗೂ ನಿಹಾರಿಕಾಳನ್ನು ದ್ವಿಚಕ್ರವಾಹನದಲ್ಲಿ ಶಾಲೆಯಿಂದ ಮನೆಗೆ ಕರೆದೊಯ್ಯುತ್ತಿದ್ದರು. ಈ ವೇಳೆ ಖೋಡೇಸ್​ ವೃತ್ತದ ಬಳಿ ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿದ್ದ ಸವಾರರನ್ನು ಹಿಡಿಯುತ್ತಿದ್ದ ಟ್ರಾಫಿಕ್‌ ಪೊಲೀಸರನ್ನು ಕಂಡ ರಾಜಣ್ಣ ಕೂಡಲೇ ಬೈಕ್‌ನ್ನು ತಿರುಗಿಸಿಕೊಂಡಿದ್ದಾರೆ. ಅವಸರದಲ್ಲಿ ಬೈಕ್‌ ತಿರುಗಿಸಿದ ವೇಳೆ ಮೊಮ್ಮಗ ದರ್ಶನ್‌ ಬೈಕ್‌ನಿಂದ ಕೆಳಗೆ ಬಿದ್ದಿದ್ದಾನೆ.

ಹಿಂಬದಿಯಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಬಾಲಕನ ತಲೆ ಮೇಲೆ ಹರಿದ ಪರಿಣಾಮ ರುಂಡ ಬೇರ್ಪಟ್ಟು ಬಾಲಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.

ಈ ಕುರಿತು ಪಶ್ಚಿಮ ವಿಭಾಗದ ಸಂಚಾರ ಡಿಸಿಪಿ ಶಿವಕುಮಾರ್‌ ಪ್ರತಿಕ್ರಿಯಿಸಿ, ಟ್ರಾಫಿಕ್‌ ಪೊಲೀಸರು ಘಟನೆಗೆ ಕಾರಣವಾಗಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಚಿಕ್ಕಪೇಟೆ ಪೊಲೀಸರು ಬಸ್‌ ಚಾಲಕನನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ಕೈಗೊಂಡಿದ್ದಾರೆ. (ದಿಗ್ವಿಜಯ ನ್ಯೂಸ್‌)

Leave a Reply

Your email address will not be published. Required fields are marked *

Back To Top