Thursday, 19th July 2018  

Vijayavani

ಶಬರಿಮಲೆ ಪ್ರವೇಶಕ್ಕೆ ಮಹಿಳೆಯರಿಗೆ ಅನುಮತಿ - ಕೇರಳ ಸರ್ಕಾರದಿಂದ ಗ್ರೀನ್​ಸಿಗ್ನಲ್        ಕೇಂದ್ರದಿಂದ ನೆರವಿನ ಮಹಾಪೂರ - ಕೃಷಿ ಯೋಜನೆ, ಮೆಗಾ ಡೈರಿ ಆರಂಭಕ್ಕೆ 900 ಕೋಟಿ ನೆರವು        ಸ್ಮಶಾನ ಜಾಗದ ವಿಚಾರವಾಗಿ ಜಟಾಪಟಿ - ಎರಡು ಗುಂಪುಗಳ ಮಧ್ಯೆ ಮಾರಾಮಾರಿ - ಘರ್ಷಣೆಯಲ್ಲಿ 50 ಮಂದಿಗೆ ಗಾಯ        ಕೃಷ್ಣಾ ನದಿಯಲ್ಲಿ ಪ್ರವಾಹದ ನರ್ತನ - ಯಾದಗಿರಿಯ ನೀಲಕಂಠನದೊಡ್ಡಿ ಗ್ರಾಮಕ್ಕೆ ಜಲದಿಗ್ಬಂಧನ - ಗ್ರಾಮಸ್ಥರು ತಲ್ಲಣ        ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಜಿಟಿಡಿ - ಬಳ್ಳಾರಿಗೆ ಕಳಿಸೋದಾಗಿ ಅಧಿಕಾರಿಗಳಿಗೆ ವಾರ್ನಿಂಗ್- ಚಪ್ಪಾಳೆ ಹೊಡೆದ ಸ್ಟೂಡೆಂಟ್ಸ್        ಎಲ್ಲೆಡೆ ಕೇಳಿಬರ್ತಿದೆ ಧೋನಿ ನಿವೃತ್ತಿ ವಿಷಯ - ಲೀಡ್ಸ್​​ನಲ್ಲಿ ಅಂಪೈರ್ ಬಳಿ ಬಾಲ್ ಪಡೆದಿದ್ದೇಕೆ - ಕ್ರಿಕೆಟಿಗೆ ಗುಡ್​​ಬೈ ಹೇಳ್ತಾರಾ ಮಾಹಿ       
Breaking News

ಮಿಸ್ ದಿವಾ ಅಂತಿಮ ಕಣದಲ್ಲಿ ರಾಜಧಾನಿಯ 9 ಬೆಡಗಿಯರು

Friday, 13.07.2018, 3:03 AM       No Comments

ಬೆಂಗಳೂರು: ವೈಟ್​ಫೀಲ್ಡ್​ನ ಷೆರಟನ್ ಗ್ರ್ಯಾಂಡ್ ಹೋಟೆಲ್​ನಲ್ಲಿ ಇತ್ತೀಚೆಗೆ ನಡೆದ ವರ್ಣರಂಜಿತ ಯಮಹಾ ಫ್ಯಾಸಿನೋ ಮಿಸ್ ದಿವಾ 2018 ಗ್ರ್ಯಾಂಡ್ ಆಡಿಷನ್​ನಲ್ಲಿ ಉದ್ಯಾನನಗರಿಯ 9 ಸುಂದರಿಯರು ಫೈನಲ್​ಗೆ ಆಯ್ಕೆಯಾಗಿದ್ದಾರೆ.

ಮುಂಬೈನಲ್ಲಿ ನಡೆಯುವ ಅಂತಿಮ ಸ್ಪರ್ಧೆಯಲ್ಲಿ ವಿಜೇತೆಯಾಗುವ ಬೆಡಗಿಗೆ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆಯಲಿದ್ದು, 10 ಲಕ್ಷ ರೂ. ಬಹುಮಾನವನ್ನು ತನ್ನದಾಗಿಸಿಕೊಳ್ಳಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.

ಲಾರಾ ದತ್ತ ರಂಗು: ರಾಜಧಾನಿಯಲ್ಲಿ ನಡೆದ ಆಡಿಷನ್​ನಲ್ಲಿ ಮೆಂಟರ್ ಆಗಿ ಮಾಜಿ ಭುವನ ಸುಂದರಿ ಲಾರಾ ದತ್ತ ಪಾಲ್ಗೊಂಡಿದ್ದರು. ಯಮಹಾ ಫ್ಯಾಸಿನೋ ಮಿಸ್ ದೀವಾ ಸ್ಪರ್ಧೆ ಮೂಲಕ ಭುವನ ಸುಂದರಿಯಾಗುವ ಅವಕಾಶ ಪಡೆಯಲಿರುವ ಸ್ಪರ್ಧಿಗಳಿಗೆ ಶುಭ ಹಾರೈಸಿದರು. ಫೈನಲ್ ಸ್ಪರ್ಧೆ ವೀಕ್ಷಣೆಗೆ ಕಾತುರಳಾಗಿದ್ದೇನೆ ಎಂದರು.

76 ಮಂದಿ ಭಾಗಿ: ಈ ಆಡಿಷನ್​ನಲ್ಲಿ ವಿವಿಧೆಡೆಯ76 ಸ್ಪರ್ಧಿಗಳು ಪಾಲ್ಗೊಂಡಿದ್ದರು. ಮಾರ್ಜಾಲ ನಡಿಗೆ, ಫರ್ಫೆಕ್ಟ್ ಬಾಡಿ, ಸಂವಹನ ಕೌಶಲ  ಮತ್ತಿತರ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದ ಸ್ಪರ್ಧಿಗಳಲ್ಲಿ 9 ಮಂದಿಗೆ ಫೈನಲ್ ತಲುಪುವ ಅವಕಾಶ ದೊರಕಿದೆ. ಶ್ರೀನಿಧಿ ಶೆಟ್ಟಿ, ವಾಸಿಂ ಖಾನ್ ಸೇರಿ ಫ್ಯಾಷನ್ ಲೋಕದ ದಿಗ್ಗಜರು ತೀರ್ಪಗಾರರಾಗಿದ್ದರು.

ಫೈನಲಿಸ್ಟ್​ಗಳು

ನಿಧಿ ಶರ್ವ, ಶಬನಂ ಆಲಿ ಅಸ್ಘರ್, ರುಬಿಯಾ ಸೌಕಾರ್, ಸುಗಂಧಿ ಗುಪ್ತಾ, ಪ್ರೀತಿ ಪ್ರಭಾಕರನ್, ಪ್ರಿಯಾ ರಾವ್​ನಿಯರ್, ರಮ್ಯಾ ನಾಯ್್ಕ ರೆಹಾ ಬಸಪ್ಪ, ನಿಶ್ಚಿತಾ ಪುಟ್ಟಮಾದಪ್ಪ.

Leave a Reply

Your email address will not be published. Required fields are marked *

Back To Top