Friday, 18th August 2017  

Vijayavani

1. ಕಾಂಗ್ರೆಸ್‌ನಲ್ಲಿ ಎಡಪಂಥಿಯರಿಗೆ ಮಾತ್ರ ಮಣೆ- ಚುನಾವಣಾ ತಂತ್ರಗಾರ ಕೈ ಗುಡ್‌ಬೈ- ಅಲ್ಪ ಸಂಖ್ಯಾತರರನ್ನ ಅತಿಯಾಗಿ ಓಲೈಸ್ತಿದ್ಯಾ ಕಾಂಗ್ರೆಸ್‌.? 2. ಜೆಡಿಎಸ್​ ಭಿನ್ನರಿಗೆಲ್ಲಾ ಇಲ್ಲಾ ಟಿಕೆಟ್​ – 3 ಕ್ಷೇತ್ರಗಳ ಟಿಕೆಟ್​​​​​​​​ಗೆ ಖಾತ್ರಿ ನೀಡದ ಖರ್ಗೆ- ತ್ರಿಶಂಕು ಸ್ಥಿತಿಯಲ್ಲಿ ಜೆಡಿಎಸ್​​​​​​ ಭಿನ್ನರ ಸ್ಥಿತಿ 3. ಸಿಲಿಕಾನ್ ಸಿಟಿಗೆ ಖತರ್ನಾಕ್​ ಗ್ಯಾಂಗ್​ ಎಂಟ್ರಿ- ಸೆಕ್ಯೂರಿಟಿ ಡ್ರೆಸ್​​​ನಲ್ಲಿ ಮಾಡ್ತಿದ್ದಾರೆ ಕಳ್ಳತನ- ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಕೃತ್ಯ 4. ರಾಜೀನಾಮೆ ಬಳಿಕ ವಿಶಾಲ್‌ ಸಿಕ್ಕಾ ಮೊದಲ ಮಾತು- ನನ್ನ ಜೀವನದ ದುಃಖದ ವಿಚಾರ ಅಂತಾ ಬೇಸರ- ಅತ್ತ ನಾನು ಕಾರಣನಲ್ಲ ಎಂದ ನಾರಾಯಣ ಮೂರ್ತಿ 5. ಯುಪಿ ಆಸ್ಪತ್ರೆಯಲ್ಲಿ ಮಕ್ಕಳ ಸಾವು ಪ್ರಕರಣ- ಹೈಕೋರ್ಟ್‌ನಿಂದ ಯೋಗಿ ಸರ್ಕಾರಕ್ಕೆ ತರಾಟೆಗೆ- ಕೂಡಲೇ ವರದಿ ನೀಡಲು ಸೂಚನೆ
Breaking News :

82 ವರ್ಷದ ಅಜ್ಜಿ ಆಪ್ ಡೆವಲಪರ್!

Sunday, 13.08.2017, 3:00 AM       No Comments

ಆಪ್ ಡೆವಲಪರ್ ಎಂದಾಕ್ಷಣ ನಮಗೆ ನೆನಪಿಗೆ ಬರುವುದು ಯುವ ಸಮುದಾಯ. ಆದರೆ ಜಪಾನ್​ನ ಮಸಾಕೊ ವಕಾಮಿಯಾ ಎಂಬ 82 ವರ್ಷದ ವೃದ್ಧೆ ಪ್ರತಿಷ್ಠಿತ ಆಪಲ್ ಸಂಸ್ಥೆಯ ಆಪ್ ಡೆವಲಪರ್ ಆಗಿದ್ದಾರೆ. ಈ ಸಂಸ್ಥೆಯ ಅತ್ಯಂತ ಹಿರಿಯ ಆಪ್ ಡೆವಲಪರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಬ್ಯಾಂಕ್​ನಲ್ಲಿ ಕ್ಲರ್ಕ್ ಕೆಲಸ ಮಾಡಿಕೊಂಡಿದ್ದ ಇವರು 1990ರಲ್ಲಿ ನಿವೃತ್ತಿ ಹೊಂದಿದರು. ಈ ವೇಳೆ ಇವರಿಗೆ ಕಂಪ್ಯೂಟರ್ ಬಗ್ಗೆ ಆಸಕ್ತಿ ಬೆಳೆಯಿತು. ಇದಾದ ನಂತರದಲ್ಲಿ ಮಸಾಕೊ ನಿಧಾನವಾಗಿ ಕಂಪ್ಯೂಟರ್ ಕಲಿಕೆ ಆರಂಭಿಸಿದರು. ಇದರ ಜತೆ ಆಪ್ ಡೆವಲಪ್ ಮಾಡಬೇಕೆಂಬ ಹಂಬಲ ಹುಟ್ಟಿತು. ಆದರೆ ಈ ಬಗ್ಗೆ ಅವರಿಗೆ ಕಲಿಸಲು ಯಾವುದೇ ಆಪ್ ಡೆವಲಪರ್​ಗಳು ಆಸಕ್ತಿ ತೋರಿಸಲಿಲ್ಲ. ಹೀಗಾಗಿ ಇವರು ತಾವಾಗಿಯೇ ಕೋಡಿಂಗ್ ಕಲಿಕೆ ಆರಂಭಿಸಿದರು. ಈ ಪರಿಶ್ರಮದಿಂದ ಇವರು ಹಿನಾಡನ್ ಎಂಬ ಗೇಮಿಂಗ್ ಆಪ್ ಅಭಿವೃದ್ಧಿಪಡಿಸಿದರು. ಈ ಆಪ್ ಹೆಚ್ಚು ಖ್ಯಾತಿ ಪಡೆದುಕೊಂಡಿತು.

ಇದರಿಂದಾಗಿ ಇವರಿಗೆ ಬೇಡಿಕೆ ಹೆಚ್ಚಿ, ಖ್ಯಾತಿ ಎಷ್ಟು ಎತ್ತರಕ್ಕೆ ಬೆಳೆಯಿತೆಂದರೆ ಈ ವರ್ಷ ಆಪಲ್ ಸಂಸ್ಥೆ ವರ್ಲ್ಡ್​ವೈಡ್ ಡೆವಲಪರ್ಸ್ ಸಮಾವೇಶಕ್ಕೆ ಆಹ್ವಾನಿಸಿತು. ಈ ಸಮಾವೇಶದಲ್ಲಿ ಭಾಗವಹಿಸಿದ ಅತ್ಯಂತ ಹಿರಿಯ ಆಪ್ ಡೆವಲಪರ್ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾದರು.

Leave a Reply

Your email address will not be published. Required fields are marked *

Back To Top