Sunday, 22nd October 2017  

Vijayavani

1. ಜಮ್ಮು ಕಾಶ್ಮೀರದಲ್ಲಿ ಗುಂಡಿನ ಕಾಳಗ – ಸೇನೆ ಎನ್​ಕೌಂಟರ್​ಗೆ ಉಗ್ರ ಫಿನಿಶ್ – ಹತನಿಂದ ಪಾಕ್​ ಕರೆನ್ಸಿ, ಶಸ್ತ್ರಾಸ್ತ್ರ ವಶಕ್ಕೆ 2. ಬಿಎಸ್​ವೈ-ಬಿ.ಎಲ್.ಸಂತೋಷ ನಡುವೆ ಕಿತ್ತಾಟ – ಸಂಘಟನಾತ್ಮಕ ವರದಿ ಪಡೆಯಲು ಮುಂದಾದ ಹೈಕಮಾಂಡ್​ – ರಿಪೋರ್ಟ್​ಗಾಗಿ ಶಿವಪ್ರಕಾಶ್​ ಯಾದವ್​ ನೇಮಕ 3. ಬಹುಮನಿ ಕಾಲದ ಕೋಟೆಗಿಲ್ಲ ಭದ್ರತೆ – ಅವ್ಯವಸ್ಥೆಗಳ ಆಗರ ಜಾಮೀಮಾ ಮಸೀದಿ – ಪ್ರವಾಸೋದ್ಯಮ ಸಚಿವರ ತವರಲ್ಲೇ ಇದೆಂಥ ಅದ್ವಾನ 4. ಗುಜರಾತ್​​​ ಚುನಾವಣೆ ಗೆಲ್ಲಲು ಸರ್ಕಸ್​ – ಹಲವು ಯೋಜನೆಗಳಿಗೆ ಇಂದು ನಮೋ ಚಾಲನೆ – ಹಾರ್ದಿಕ್​​​​​​​, ಜಿಗ್ನೇಶ್ ಸೆಳೆಯಲು ಕೈ ಪ್ಲಾನ್​​ 5. ಚಿರಂಜೀವಿ ಸರ್ಜಾ-ಮೇಘನಾ ರಾಜ್ ನಿಶ್ಚಿತಾರ್ಥ – ಮನೆಯಲ್ಲಿ ತಾಂಬುಲ ಶಾಸ್ತ್ರ – ಸಂಜೆ ಲೀಲಾ ಪ್ಯಾಲೇಸ್​ನಲ್ಲಿ ರಿಂಗ್​ ಎಕ್ಸ್​ಚೇಂಜ್​
Breaking News :

ಮುಗುಳುನಗುತ್ತಲೇ ಕಲಿತ ಗಿಟಾರ್​

Monday, 19.06.2017, 3:05 AM       No Comments

ಬೆಂಗಳೂರು: ನಟಿ ನಿಖಿತಾ ನಾರಾಯಣ್ ಅಪ್ಪಟ ಕನ್ನಡತಿಯಾದರೂ ಬಣ್ಣದ ಬದುಕಿನ ಜರ್ನಿ ಶುರುಮಾಡಿದ್ದು ತೆಲುಗಿನಿಂದ. ಅಲ್ಲಿ ಜನಪ್ರಿಯತೆ ಗಿಟ್ಟಿಸಿದ ನಂತರ ‘ಮಡಮಕ್ಕಿ’ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೂ ಕಾಲಿಟ್ಟರು. ಆ ಚಿತ್ರ ಹೇಳಿಕೊಳ್ಳುವಷ್ಟು ಯಶಸ್ಸು ಗಳಿಸಲಿಲ್ಲವಾದರೂ ನಿಖಿತಾ ಕೆರಿಯರ್​ಗೆ ಹೊಸ ವೇಗ ಸಿಗಲು ಕಾರಣವಾಗಿದ್ದಂತೂ ನಿಜ. ಆ ಬಳಿಕ ‘ಗೋಲ್​ವಾಲ್ ಬ್ರದರ್ಸ್’, ‘ಜೋಗಿ ಗುಡ್ಡ’ ಚಿತ್ರಗಳಲ್ಲೂ ಅವರು ನಟಿಸಿದ್ದಾರೆ. ಕಾರಣಾಂತರಗಳಿಂದ ಅವುಗಳ ರಿಲೀಸ್ ತಡವಾಗುತ್ತಿದೆ. ಆ ಬೇಸರವನ್ನು ಬದಿಗೊತ್ತಲು ‘ಮುಗುಳು ನಗೆ’ ಸಿದ್ಧವಾಗಿದೆ. ಯೋಗರಾಜ್ ಭಟ್ ಮತ್ತು ಗಣೇಶ್ ಕಾಂಬಿನೇಷನ್​ನ ಈ ಚಿತ್ರದಲ್ಲಿ ಭಿನ್ನವಾದೊಂದು ಪಾತ್ರಕ್ಕೆ ಬಣ್ಣ ಹಚ್ಚಿರುವ ಖುಷಿ ನಿಖಿತಾರದ್ದು.

ವಿಶೇಷವೆಂದರೆ, ‘ಮುಗುಳು ನಗೆ’ ಚಿತ್ರದ ಪಾತ್ರಕ್ಕಾಗಿ ನಿಖಿತಾ ಗಿಟಾರ್ ನುಡಿಸುವುದು ಕಲಿತಿದ್ದಾರೆ. ಚಿತ್ರದಲ್ಲಿ ಅವರು ಗಿಟಾರ್ ಹಿಡಿದುಕೊಳ್ಳುವುದು ಕೆಲವೇ ದೃಶ್ಯಗಳಲ್ಲಾದರೂ, ಅದಕ್ಕಾಗಿ ಮಾಡಿದ ತಯಾರಿ ದೊಡ್ಡದು. ಶೂಟಿಂಗ್ ಶುರುವಾಗುವುದಕ್ಕೂ ಮುನ್ನ ಎರಡು ತಿಂಗಳು ಗಿಟಾರ್ ಕಲಿಯಲು ಮೀಸಲಿರಿಸಿದ್ದರು. ಪರಿಣಾಮ, ಚಿತ್ರೀಕರಣದ ವೇಳೆ ಯಾವ ವೃತ್ತಿಪರ ಗಿಟಾರ್ ವಾದಕರಿಗೂ ಕಮ್ಮಿ ಇಲ್ಲದಂತೆ ಪರ್ಫಾಮ್ ಮಾಡಿ, ನಿರ್ದೇಶಕರಿಂದಲೂ ಮೆಚ್ಚುಗೆ ಗಿಟ್ಟಿಸಿಕೊಂಡರಂತೆ. ಇಷ್ಟು ಮಾತ್ರವಲ್ಲದೆ, ಹಲವು ಕಾರಣಗಳಿಗಾಗಿ ನಿಖಿತಾ ಪಾಲಿಗೆ ‘ಮುಗುಳು ನಗೆ’ ಸ್ಪೆಷಲ್ ಎನಿಸಿಕೊಂಡಿದೆ. ‘ಆರು ವರ್ಷದ ಸಿನಿಜರ್ನಿಯಲ್ಲಿ ಇದೇ ಮೊದಲ ಬಾರಿಗೆ ನನ್ನ ಪಾತ್ರಕ್ಕೆ ನಾನೇ ಡಬ್ಬಿಂಗ್ ಮಾಡಿದ್ದೇನೆ. ಶೂಟಿಂಗ್​ಗಾಗಿ 1956ರ ಮಾಡೆಲ್​ನ ವಿಂಟೇಜ್ ಕಾರು ಓಡಿಸಿದ್ದೇನೆ. ರೇನ್​ಬೋ ಕಲರಿಂಗ್​ನ ಕೇಶ ವಿನ್ಯಾಸ ಮಾಡಿಸಿ, ವಿಶೇಷವಾದ ಟ್ಯಾಟೂ ಕೂಡ ಹಾಕಿಸಿಕೊಂಡು ಕ್ಯಾಮರಾ ಎದುರಿಸಿದ್ದೇನೆ. ಮಾಮೂಲಿ ಹಿರೋಯಿನ್ ಪಾತ್ರಕ್ಕಿಂತ ಭಿನ್ನವಾದ ಶೈಲಿಯಲ್ಲಿ ಡೈಲಾಗ್ ಹೇಳಿದ್ದೇನೆ’ ಎಂದು ವಿಶೇಷತೆಗಳನ್ನು ಪಟ್ಟಿ ಮಾಡಿದ್ದಾರೆ ನಿಖಿತಾ. ಚಿತ್ರದಲ್ಲಿ ಗಣೇಶ್ ಜತೆ ನಿಖಿತಾ ಮಾತ್ರವಲ್ಲದೆ ಅಮೂಲ್ಯ, ಆಶಿಕಾ ಮತ್ತು ಅಪೂರ್ವ ಕೂಡ ಬಣ್ಣ ಹಚ್ಚಿದ್ದಾರೆ. ಎಲ್ಲರ ಪಾತ್ರಕ್ಕೂ ನಿರ್ದೇಶಕರು ಸಮಾನ ಅವಕಾಶ ನೀಡಿದ್ದು, ಅವರು ಹೆಚ್ಚು, ಇವರು ಕಡಿಮೆ ಎಂಬ ಭಾವನೆ ಯಾರಲ್ಲೂ ಮೂಡಿಲ್ಲವಂತೆ. ಪ್ರಸ್ತುತ ‘ಮುಗುಳು ನಗೆ’ ಶೂಟಿಂಗ್ ಮುಗಿದಿದ್ದು, ಶೀಘ್ರದಲ್ಲೇ ಆಡಿಯೋ ಬಿಡುಗಡೆ ಆಗಲಿದೆ.

ಗಿಟಾರ್ ಕಲಿಯಬೇಕು ಎಂದು ನಿರ್ದೇಶಕರು ಹೇಳಿದ್ದನ್ನು ಗಂಭೀರವಾಗಿ ತೆಗೆದುಕೊಂಡೆ. ಎರಡು ತಿಂಗಳು ಖುಷಿಯಿಂದ ಅಭ್ಯಾಸ ಮಾಡಿದೆ. ಕಲಿಯಬೇಕು ಎಂಬ ಆಸೆ ಮೊದಲೇ ಇತ್ತಾದರೂ ಸಾಧ್ಯವಾಗಿರಲಿಲ್ಲ. ಈ ಚಿತ್ರದ ಮೂಲಕ ಆಸೆ ಈಡೇರಿತು. ಸಿನಿಮಾ ಮುಗಿದ ನಂತರವೂ ಅಭ್ಯಾಸ ಮುಂದುವರಿಸಿದ್ದೇನೆ.

| ನಿಖಿತಾ ನಟಿ

 

 

Leave a Reply

Your email address will not be published. Required fields are marked *

Back To Top