Friday, 22nd September 2017  

Vijayavani

1. ಸಮಾವೇಶಕ್ಕೆ ಲಕ್ಷ ಮಂದಿ ಸೇರಿಸೋ ಟಾರ್ಗೆಟ್​- ಬರದಿದ್ರೆ ಅಕ್ಕಿ ಕಟ್​​, ಬ್ಯಾಂಕ್​ ಸಬ್ಸಿಡಿಗೆ ಬ್ರೇಕ್​- ಫಲಾನುಭವಿಗಳಿಗೆ ಕೈ ಕಾರ್ಯಕರ್ತರ ಬೆದರಿಕೆ 2. ಕೊಟ್ಟ ಮಾತು ಮರೆತ ಸಿಎಂ ಸಿದ್ದರಾಮಯ್ಯ- 8 ತಿಂಗಳಾದ್ರೂ ಕುಟುಂಬಸ್ಥರಿಗೆ ಸಿಗದ ಪರಿಹಾರ- ಇದೇನಾ ನುಡಿದಂತೆ ನಡೆಯುವ ಸರ್ಕಾರ..? 3. ಎಸ್​​.ಎಂ.ಕೃಷ್ಣ ಅಳಿಯನ ಮನೆ ಕಚೇರಿ ತಲಾಷ್​​- ಎರಡನೇ ದಿನವೂ ಮುಂದುವರಿದ ಪರಿಶೀಲನೆ- ಹುಡುಕಿದಷ್ಟು ಪತ್ತೆಯಾಗ್ತಿದೆ ದಾಖಲೆ ಪತ್ರ 4. ಗದಗದಲ್ಲಿ ಹನಿ ನೀರಿಗಾಗಿ ಹೋರಾಟ- 6 ಸಾವಿರ ಜನಕ್ಕೆ ಟ್ಯಾಂಕರ್​ ನೀರೇ ಆಧಾರ- ಜನರ ಸಮಸ್ಯೆಗೆ ಸ್ಪಂದಿಸಬೇಕಿದೆ ಸರ್ಕಾರ 5. ಮೈಸೂರು ದಸರಾಗೆ ಜನವೋ ಜನ- ಅತ್ತೆ, ಸೊಸೆ ಜೊತೆ ಜೊತೆ ಮಾಡಿದ್ರು ನಳಪಾಕ- ಕೆಲವೇ ಕ್ಷಣಗಳಲ್ಲಿ ಯುವ ದಸರಾಗೆ ಚಾಲನೆ
Breaking News :

7 ವರ್ಷಗಳ ಬಳಿಕ ಕನ್ನಡಕ್ಕೆ ಆಶಾ ಭೋಸ್ಲೆ

Thursday, 14.09.2017, 3:00 AM       No Comments

ಬೆಂಗಳೂರು: ಆಶಾ ಭೋಸ್ಲೆ ಎಂದಾಕ್ಷಣ ಸಂಗೀತಪ್ರಿಯರ ಕಿವಿ ಒಮ್ಮೆ ನಿಮಿರಿಕೊಳ್ಳುತ್ತದೆ, ಅಂಥ ಅದ್ಭುತ ಗಾಯಕಿ ಅವರು. ಇದೀಗ ಅವರು ಹಾಡಿರುವ ಮತ್ತೊಂದು ಕನ್ನಡ ಚಿತ್ರಗೀತೆಯನ್ನು ಕೇಳುವ ಸೌಭಾಗ್ಯ ಸ್ಯಾಂಡಲ್​ವುಡ್ ಸಿನ್ರಿಪ್ರಿಯರದ್ದು. ಏಕೆಂದರೆ ಏಳು ವರ್ಷಗಳ ಬಳಿಕ ಅವರೀಗ ಇನ್ನೊಂದು ಕನ್ನಡ ಸಿನಿಮಾದಲ್ಲಿ ಹಾಡಿದ್ದಾರೆ. ಹೀಗೆ ಕನ್ನಡಿಗರಿಗೆ ಭೋಸ್ಲೆಯ ಗಾನಸುಧೆ ಆಲಿಸುವ ಅವಕಾಶ ನೀಡುತ್ತಿರುವುದು ‘19/11’ ಎಂಬ ವಿಭಿನ್ನ ಶೀರ್ಷಿಕೆಯ ಸಿನಿಮಾ. ಆರ್ಯನ್ ಎಂ. ಪ್ರತಾಪ್ ನಿರ್ದೇಶಿಸಿರುವ ಈ ಚಿತ್ರದ ‘ಕಣ್ಣು ಕಣ್ಣಲಿ ಬಣ್ಣ ಬಣ್ಣದ ಕನಸನ್ನು ಕೊಡ್ತಾಳಲ್ಲ..’ ಎಂಬ ಗೀತೆಯನ್ನು ಆಶಾ ಭೋಸ್ಲೆ ಹಾಡಿದ್ದಾರೆ.

ಅವರೊಂದಿಗೆ ಗಾಯಕ ಚೇತನ್ ನಾಯಕ್ ದನಿಗೂಡಿಸಿದ್ದಾರೆ. ಇದರ ಸಾಹಿತ್ಯವನ್ನು ನಿರ್ದೇಶಕ ಆರ್ಯನ್ ಹಾಗೂ ರಾಘವೇಂದ್ರ ಕಾಮತ್ ಜತೆಯಾಗಿ ರಚಿಸಿದ್ದಾರೆ. ಮಾತ್ರವಲ್ಲ ಚಿತ್ರಕ್ಕೆ ಕಥೆ ಹಾಗೂ ಚಿತ್ರಕಥೆ ರಚನೆ ಕೂಡ ನಿರ್ದೇಶಕರದ್ದೇ. ವಿಶೇಷವೆಂದರೆ, ಈ ಹಾಡಿನ ಧ್ವನಿಮುದ್ರಣ ನಡೆದಿರುವುದು ಮುಂಬೈನ ಯಶ್​ರಾಜ್ ಸ್ಟುಡಿಯೊದಲ್ಲಿ. ಈ ಸಿನಿಮಾಗೆ ಜೋಯೆಲ್ ಹಾಗೂ ಅಭಿಲಾಷ್ ಜತೆಯಾಗಿ ಸಂಗೀತ ಸಂಯೋಜಿಸಿದ್ದಾರೆ. ‘ಅಮರಾವತಿ’ ಖ್ಯಾತಿಯ ‘ಶ್ರೀನಿಲಯಂ ಸಿನಿ ಕ್ರಿಯೇಷನ್ಸ್’ ಬ್ಯಾನರ್​ನಲ್ಲಿ ಮಾಧವ ರೆಡ್ಡಿ ಅವರು ನಿರ್ವಿುಸಿರುವ ಈ ಚಿತ್ರದಲ್ಲಿ ಪಲ್ಲವಿ ನಾಯಕ್ ಹಾಗೂ ರಕ್ಷಕ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅಂದಹಾಗೆ, ಆಶಾ ಭೋಸ್ಲೆ ಕನ್ನಡದಲ್ಲಿ ಪ್ರಪ್ರಥಮವಾಗಿ ಹಾಡಿದ್ದು ‘ಮತ್ತೆ ಮುಂಗಾರು’ ಚಿತ್ರಕ್ಕೆ. ದ್ವಾರ್ಕಿ ರಾಘವ್ ನಿರ್ದೇಶನ ಮತ್ತು ಶ್ರೀನಗರ ಕಿಟ್ಟಿ ಅಭಿನಯದಲ್ಲಿ ಮೂಡಿಬಂದಿದ್ದ ಚಿತ್ರದ ‘ಹೇಳದೆ ಕಾರಣ..’ ಹಾಡು ಆಶಾ ಅವರ ಕಂಠಸಿರಿಯಲ್ಲಿ ಸುಶ್ರಾವ್ಯವಾಗಿ ಮೂಡಿಬಂದಿತ್ತು. ದ್ವಾರ್ಕಿ ರಚಿಸಿರುವ ಇದಕ್ಕೆ ಸಾಹಿತ್ಯ ಬರೆದಿದ್ದರು.

Leave a Reply

Your email address will not be published. Required fields are marked *

Back To Top