Saturday, 16th December 2017  

Vijayavani

1. ಭಯೋತ್ಪಾದನೆಗೆ ಒತ್ತಡ ಆರೋಪ ವಿಚಾರ- ಆತ್ಮಹತ್ಯೆಗೆ ಯತ್ನಿಸಿದ ಯುವಕನ ಸ್ಥಿತಿ ಗಂಭೀರ- ಬಾಗಲಕೋಟೆ ಆಸ್ಪತ್ರೆಯಲ್ಲಿ ಮುಂದುವರಿದ ಚಿಕಿತ್ಸೆ 2. ಎಐಸಿಸಿ ಅಧ್ಯಕ್ಷರಾಗಿ ಇಂದು ರಾಹುಲ್​​​ ಅಧಿಕಾರ- ದೆಹಲಿ ಕಚೇರಿಯಲ್ಲಿ ಪದಗ್ರಹಣ ಕಾರ್ಯಕ್ರಮ- ರಾಹುಲ್​​​​ ಮುಂದಿದೆ ನೂರಾರು ಸವಾಲು 3. ಸುನಿಲ್​​ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ಪ್ರಕರಣ- ಇಂದು ಬೆಳಗೆರೆ ಜಾಮೀನು ಅರ್ಜಿ ವಿಚಾರಣೆ- ಇತ್ತ ಜಯದೇವದಲ್ಲಿ ಮುಂದುವರಿದ ಚಿಕಿತ್ಸೆ 4. ಕಲಬುರಗಿಯತ್ತ ಸಾಗಿದ ಸಿಎಂ ಸಾಧನ ಸಂಭ್ರಮ- ಜೇವರ್ಗಿಯಲ್ಲಿ ಹಲವು ಕಾಮಗಾರಿಗೆ ಚಾಲನೆ- ಸಿಎಂಗೆ ಹಲವು ಸಚಿವರಿಂದ ಸಾಥ್​​​ 5. ಸನ್ನಿ ನೈಟ್​​ಗೆ ಸರ್ಕಾರದ ಬ್ರೇಕ್​- ನಿರ್ಧಾರದ ವಿರುದ್ಧ ಪರ-ವಿರುದ್ಧ ಚರ್ಚೆ- ಸಚಿವರ ಕ್ರಮಕ್ಕೆ ಕೆಂಡಕಾರಿದ ಅಭಿಮಾನಿಗಳು
Breaking News :

6 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿ

Wednesday, 27.09.2017, 3:00 AM       No Comments

ನವದೆಹಲಿ: ಷೇರುಮಾರುಕಟ್ಟೆಯಲ್ಲಿ ದಿನದಂತ್ಯಕ್ಕೆ ಮಂಗಳವಾರ ರೂಪಾಯಿ ಮೌಲ್ಯ 35 ಪೈಸೆ ಕುಸಿಯುವುದರೊಂದಿಗೆ ಕಳೆದ ಆರು ತಿಂಗಳಲ್ಲಿಯೇ ಅತೀ ಕನಿಷ್ಠ ಎನ್ನಲಾದ ರೂ.65.45 ದಾಖಲೆಯಾಗಿದೆ. ಡಿಸೆಂಬರ್​ನಲ್ಲಿ ಅಮೆರಿಕದ ಕೇಂದ್ರೀಯ ಬ್ಯಾಂಕ್ ಬಡ್ಡಿ ದರಗಳಲ್ಲಿ ಏರಿಕೆ ಕುರಿತು ನೀಡಿರುವ ಸ್ಪಷ್ಟನೆ, ಒತ್ತಡದಲ್ಲಿರುವ ಜಿಡಿಪಿ, ವಿದೇಶಿ ಹೂಡಿಕೆದಾರರಿಂದ ಬೃಹತ್ ಪ್ರಮಾಣದಲ್ಲಿ ಷೇರುಗಳ ಮಾರಾಟ, ನಿಫ್ಟಿ ಮತ್ತು ಸೆನ್ಸೆಕ್ಸ್​ನಲ್ಲಿ ಕಾಣದ ಚೇತರಿಕೆ ರೂಪಾಯಿ ಕುಸಿತಕ್ಕೆ ಪ್ರಮುಖ ಕಾರಣ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ. ಅಮೆರಿಕ-ಉತ್ತರ ಕೊರಿಯಾ ನಡುವೆ ತಿಕ್ಕಾಟದಿಂದ ಕವಿಯುತ್ತಿರುವ ಯುದ್ಧದ ಭೀತಿ ವಿದೇಶಿ ಹೂಡಿಕೆದಾರರನ್ನು ಭಾರತದ ಷೇರುಪೇಟೆಯಿಂದ ಕಾಲು ಕೀಳುವಂತೆ ಮಾಡಿದೆ. ಜತೆಗೆ ಆಮದುದಾರು ಮತ್ತು ಬ್ಯಾಂಕ್​ಗಳಿಂದ ಅಮೆರಿಕದ ಡಾಲರ್​ಗೆ ಹೆಚ್ಚುತ್ತಿರುವ ಬೇಡಿಕೆಯೂ ರೂಪಾಯಿಯನ್ನು ದುರ್ಬಲಗೊಳಿಸಿದೆ ಎನ್ನಲಾಗಿದೆ. ಕಳೆದ ಮಾರ್ಚ್​ನಲ್ಲಿ ಡಾಲರ್ ಎದುರು ರೂ.65.52ಕ್ಕೆ ರೂಪಾಯಿ ಕುಸಿದಿತ್ತು. ಇತ್ತೀಚೆಗೆ ಆರ್​ಬಿಐ ಬಿಡುಗಡೆಗೊಳಿಸಿದ್ದ ಮಾಹಿತಿ ಪ್ರಕಾರ ಸೆ.15ರಂದು ವಿದೇಶಿ ವಿನಿಮಯ 1,782.5 ಡಾಲರ್ ದಾಖಲಾಗುವ ಮೂಲಕ ಗಣನೀಯ ಏರಿಕೆ ಪ್ರದರ್ಶಿಸಿತ್ತು.

ಮಾರುಕಟ್ಟೆ ಆತಂಕಗಳು

  • ಸರ್ಕಾರದಿಂದ ಇನ್ನೂ ಘೋಷಣೆಯಾಗದ ವಿತ್ತೀಯ ಚೇತರಿಕೆ ಪ್ಯಾಕೇಜ್ (ಅಂದಾಜು ರೂ.50 ಸಾವಿರ ಕೋಟಿ)
  • ಚೀನಾ ಪಾಲಾಗುತ್ತಿರುವ ಭಾರತದ ಅತಿ ವೇಗ ಬೆಳವಣಿಗೆಯ ಆರ್ಥಿಕತೆ ಪಟ್ಟ.
  • ಕಳೆದ ವಾರ ರೂ.2, 491.18 ಕೋಟಿ ಮೊತ್ತದ ಷೇರುಗಳನ್ನು ಮಾರಾಟ ಮಾಡಿದ ವಿದೇಶಿ ಹೂಡಿಕೆದಾರರು.
  • 915 ಸೂಚ್ಯಂಕ ಕುಸಿದ ಸೆನ್ಸೆಕ್ಸ್.

ಭಾರತದ ಜಿಡಿಪಿ 7% ಏರಿಕೆ ಮಾತ್ರ?

ಖಾಸಗಿ ಕ್ಷೇತ್ರದಲ್ಲಿ ಹೂಡಿಕೆ ಇಳಿಕೆ ಮತ್ತು ಉತ್ಪಾದನೆ ವಲಯದಲ್ಲಿ ಕುಸಿತದ ಪರಿಣಾಮ ಪ್ರಸಕ್ತ ವರ್ಷ ಭಾರತ 7% ಮಾತ್ರ ಜಿಡಿಪಿ ಬೆಳವಣಿಗೆ ದಾಖಲಿಸಲಿದೆ ಎಂದು ಏಷ್ಯನ್ ಡೆವಲಪ್​ವೆುಂಟ್ ಬ್ಯಾಂಕ್ (ಎಡಿಬಿ) ಹೇಳಿದೆ. ಆದರೆ ಚೀನಾ ಆರ್ಥಿಕತೆ ಬೆಳವಣಿಗೆ 2017ರಲ್ಲಿ 6.7% ದಾಖಲಾಗಲಿದೆ ಎಂದು ಎಡಿಬಿ ಹೇಳಿದೆ.

Leave a Reply

Your email address will not be published. Required fields are marked *

Back To Top