Monday, 11th December 2017  

Vijayavani

1. ಜೈಲಿನ ಆಸ್ಪತ್ರೆಯಲ್ಲಿ ಬೆಳಗೆರೆಗೆ ಚಿಕಿತ್ಸೆ – ಚೇತರಿಸಿಕೊಂಡ್ರೆ ಬ್ಯಾರಕ್‌ಗೆ ರವಾನೆ – ನೆಲದ ಮೇಲೆ ಕೂರಲು ರವಿ ಪರದಾಟ 2. ಕೊತ ಕೊತ ಕುದಿಯುತ್ತಿದೆ ಕುಮಟಾ – ಉಗ್ರ ಸ್ವರೂಪ ಪಡೆದ ಹಿಂದೂ ಸಂಘಟನೆಗಳ ಪ್ರತಿಭಟನೆ – ಆಕ್ರೋಶಕ್ಕೆ ಹೊತ್ತಿ ಉರಿದ ಐಜಿಪಿ ಕಾರು 3. ರಾಹುಲ್ ಗಾಂಧಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ – ಪ್ರತಿಸ್ಪರ್ಧಿ ಇಲ್ಲದ್ದಕ್ಕೆ ಯುವರಾಜನಿಗೆ ಸಾರಥ್ಯ – ದೆಹಲಿಯಲ್ಲಿ ಕಾರ್ಯಕರ್ತರ ಸಂಭ್ರಾಮಾಚರಣೆ 4. ಮಂಡ್ಯದ ಸಂತೆಬಾಚಹಳ್ಳಿ ಕ್ರಾಸ್‌ ಬಳಿ ಭೀಕರ ಅಪಘಾತ – ಟ್ಯಾಂಕರ್ ಹರಿದು ಬೈಕ್ ಸವಾರರು ಸಾವು – ಕೆ.ಆರ್.ಪೇಟೆ ಗ್ರಾಮಾಂತರ ಠಾಣೆ ಪ್ರಕರಣ 5. ಸ್ಟೀಲ್‌ ಬ್ರಿಡ್ಜ್ ಹೋಯ್ತು ಮೆಟ್ರೋ ಬಂತು – ಏರ್‌ಪೋರ್ಟ್‌ಗೆ ರೈಲು ಬಿಡಲು ಸರ್ಕಾರದ ಒಪ್ಪಿಗೆ – ಮಹತ್ವದ ಯೋಜನೆಗೆ ಕ್ಯಾಬಿನೆಟ್‌ನಲ್ಲಿ ಅಸ್ತು
Breaking News :

56 ವಲಸಿಗರು ನೀರುಪಾಲು

Saturday, 12.08.2017, 3:03 AM       No Comments

ದುಬೈ: ಎರಡು ಪ್ರತ್ಯೇಕ ಪ್ರಕರಣದಲ್ಲಿ 300ಕ್ಕೂ ಹೆಚ್ಚು ಆಫ್ರಿಕಾ ವಲಸೆಗಾರರನ್ನು ಮಾನವ ಕಳ್ಳ ಸಾಗಣೆ ತಂಡ ಸಮುದ್ರಕ್ಕೆ ತಳ್ಳಿದೆ. ಈ ವೇಳೆ 56 ಜನರು ನೀರು ಪಾಲಾಗಿ, 22 ಜನರು ಕಣ್ಮರೆಯಾಗಿದ್ದಾರೆ ಎಂದು ವಲಸಿಗರಿಗಾಗಿ ಕಾರ್ಯನಿರ್ವಹಿಸುತ್ತಿರುವ ಅಂತರಾಷ್ಟ್ರೀಯ ಸಂಸ್ಥೆ(ಐಒಎಂ) ಹೇಳಿದೆ.

ಬುಧವಾರ, ಗಲ್ಪ್ ರಾಷ್ಟ್ರಗಳಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಇಥಿಯೋಪಿಯಾ ಹಾಗೂ ಸೊಮಾಲಿ ಯಾದ 120 ವಲಸಿಗರನ್ನು ಮಾನವ ಕಳ್ಳ ಸಾಗಣೆಗಾರರು ದೋಣಿಯಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಆದರೆ, ಕಳ್ಳಸಾಗಣೆಗಾರರಿಗೆ ಯೆಮೆನ್​ನಲ್ಲಿ ಅಧಿಕಾರಿಗಳಿಂದ ಬಂಧನಕ್ಕೊಳಗಾಗುವ ಭೀತಿ ಎದುರಾದ ಕಾರಣ ವಲಸಿಗರನ್ನು ಸಮುದ್ರಕ್ಕೆ ದೂಡಿದ್ದರು. ಈ ವೇಳೆ 50 ಜನರು ಮೃತಪಟ್ಟು 22 ಜನರು ಕಾಣೆಯಾಗಿದ್ದರು.

ಇದಾದ ಮರುದಿನವೇ ಅಂದರೆ ಗುರುವಾರ ಮಾನವ ಕಳ್ಳ ಸಾಗಣೆಗಾರರು 180 ಆಫ್ರಿಕಾ ವಲಸಿಗರನ್ನು ಯೆಮೆನ್​ಗೆ ದೋಣಿ ಮೂಲಕ ಕರೆದುಕೊಂಡು ಹೋಗುತ್ತಿತ್ತು. ಇವರನ್ನೂ ಕೂಡ ಸಮುದ್ರಕ್ಕೆ ತಳ್ಳಲಾಗಿದೆ. ಈ ವೇಳೆ 6 ಜನರು ಮೃತಪಟ್ಟಿದ್ದರು. ವಲಸಿಗರ ಸರಾಸರಿ ವಯಸ್ಸು 16 ಎಂದು ಐಒಎಂ ತಿಳಿಸಿದೆ. ನೀರಿನಲ್ಲಿ ಮುಳುಗಿ ಬದುಕುಳಿದ ಇಥಿಯೋಪಿಯಾ ಹಾಗೂ ಸೊಮಾಲಿಯಾದ ವಲಸಿಗರಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. ನಂತರ ಅವರು ಅರಬ್ಬಿ ಸಮುದ್ರ ತೀರದ ಷಾಬ್ವಾ ಸೇರಿದ್ದಾರೆ ಎಂದು ಐಒಎಂ ಅಧಿಕಾರಿಗಳು ತಿಳಿಸಿದ್ದಾರೆ. -ಏಜೆನ್ಸೀಸ್

Leave a Reply

Your email address will not be published. Required fields are marked *

Back To Top