Monday, 24th September 2018  

Vijayavani

ದುನಿಯಾ ವಿಜಿಗೆ ಇನ್ನೂ ತಪ್ಪದ ಸಂಕಷ್ಟ- 2 ದಿನ ಜರಾಸಂಧನಿಗೆ ನ್ಯಾಯಾಂಗ ಬಂಧನ- ರೌಡಿ ಶೀಟ್​ ಓಪನ್​ಗೆ ಖಾಕಿ ಪ್ಲಾನ್.        ದರ್ಶನ್ ಕಾರ್ ಆಕ್ಸಿಡೆಂಟ್- ಬಲಗೈ ಮೂಳೆ ಮುರಿತ ಬೆನ್ನಲ್ಲೇ ವಾರ್ಡ್​ಗೆ ದಚ್ಚು ಶಿಫ್ಟ್- ಶೀಘ್ರ ಗುಣಮುಖ ಆಗುವಂತೆ ಸುದೀಪ್ ಟ್ವೀಟ್        ಪರಿಷತ್​ ಮೂರೂ ಸ್ಥಾನ ಮಿತ್ರಕೂಟಕ್ಕೆ- ಕಾಂಗ್ರೆಸ್​ನ ಇಬ್ಬರು, ಜೆಡಿಎಸ್​​ನ ಒಬ್ಬರು ಅವಿರೋಧ ಆಯ್ಕೆ- ರಮೇಶ್​ ಆಯ್ಕೆಗೆ ಅಪಸ್ವರ        ಉತ್ತರ ಭಾರತದಲ್ಲಿ ಅಬ್ಬರಿಸಿದ ವರುಣ- ಮೇಘಸ್ಫೋಟಕ್ಕೆ ಪಂಜಾಬ್, ಹಿಮಾಚಲ ತಲ್ಲಣ- ಕೇದಾರನಾಥದಲ್ಲಿ ಕನ್ನಡಿಗರಿಗೆ ಸಂಕಷ್ಟ        ಸಿಕ್ಕಿಂನಲ್ಲಿ ಏರ್​ಪೋರ್ಟ್​ಗೆ ಮೋದಿ ಚಾಲನೆ- ನಯನ ಮನೋಹರ ವಿಮಾನ ನಿಲ್ದಾಣ ಲೋಕಾರ್ಪಣೆ        ಅಂತೂ ರಜನಿ ಪಾರ್ಟಿಗೆ ಮುಹೂರ್ತ ಫಿಕ್ಸ್- ಡಿಸೆಂಬರ್​ನಲ್ಲಿ ಹೊಸ ಪಕ್ಷದ ಹೆಸರು ಅನೌನ್ಸ್- ಥ್ರಿಲ್ ಆಗಿದ್ದಾರೆ ಫ್ಯಾನ್ಸ್.!       
Breaking News

ರಕ್ತ ಹೆಪ್ಪುಗಟ್ಟಿಸುವ ಹಿಮದಲ್ಲೂ ಸೈನಿಕರ ಯೋಗಾಚರಣೆ

Thursday, 21.06.2018, 12:37 PM       No Comments

ಲಡಾಖ್‌: ಪ್ರಪಂಚದಾದ್ಯಂತ ಲಕ್ಷಾಂತರ ಮಂದಿಗೆ ಪ್ರೇರಣೆಯಾಗುವಂತೆ ಭಾರತೀಯ ಸಶಸ್ತ್ರ ಸೇನಾಪಡೆಯ ಸದಸ್ಯರು ರಕ್ತವನ್ನೇ ಹೆಪ್ಪುಗಟ್ಟಿಸುವಂತಹ ಹಿಮಗಡ್ಡೆಗಳ ನಡುವೆ ಯೋಗ ಮಾಡಿ 4 ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಿದರು.

ಈ ಕುರಿತು ಆಯುಷ್‌ ಸಚಿವಾಲಯವು ಮರುಭೂಮಿ, ನದಿ ಮತ್ತು ನೌಕಾ ಹಡಗುಗಳಲ್ಲಿ ಸಶಸ್ತ್ರ ಪಡೆಗಳ ಸೈನಿಕರು ಯೋಗಾಸನ ಮಾಡುತ್ತಿರುವ ಪೋಟೊಗಳನ್ನು ಟ್ವೀಟ್‌ ಮಾಡಿದೆ.

ಇಂಡೋ-ಟಿಬೆಟ್ ಗಡಿ ಪೊಲೀಸ್ (ಐಟಿಬಿಪಿ) ಹಿಮವೀರ್‌ ಪಡೆ ಸಮುದ್ರ ಮಟ್ಟದಿಂದ ಬರೋಬ್ಬರಿ 18,000 ಅಡಿ ಎತ್ತರವಿರುವ ಲಡಾಖ್‌ನ ತಂಪು ಭೂಮಿಯಲ್ಲಿ ಸೂರ್ಯ ನಮಸ್ಕಾರವನ್ನು ಮಾಡಿದ್ದಾರೆ.

ಇದರೊಂದಿಗೆ ಅರುಣಾಲ ಪ್ರದೇಶದ ಲೋಹಿತ್ ಪುರದಲ್ಲಿರುವ ಇಂಡೋ-ಟಿಬೆಟ್ ಗಡಿಯಲ್ಲಿನ ದಿಗರು ನದಿಯಲ್ಲಿ ಐಟಿಬಿಪಿಯ ಹಲವಾರು ಯೋಧರು ನದಿ ಯೋಗ ಪ್ರದರ್ಶನ ಮಾಡಿದರು.

ಈಶಾನ್ಯ ಭಾರತದ ನೌಕಾ ಪಡೆಯ ಐಎನ್ಎಸ್ ಜ್ಯೋತಿ ಸಿಬ್ಬಂದಿ ಕೂಡ ವಿಶಾಖಪಟ್ಟಣದ ಬಂಗಾಳ ಕೊಲ್ಲಿಯಲ್ಲಿ ಯೋಗ ದಿನಾಚರಣೆ ಅಂಗವಾಗಿ ಯೋಗ ಪ್ರದರ್ಶನ ನೀಡಿದರು. ಈಶಾನ್ಯ ನೌಕಾ ಪಡೆಯ ಜಲಾಂತರ್ಗಾಮಿ ಸಿಬ್ಬಂದಿಯು ಯೋಗಾಚರಣೆಯಲ್ಲಿ ಭಾಗವಹಿಸಿದ್ದರು. (ಏಜೆನ್ಸೀಸ್)

 

 

Leave a Reply

Your email address will not be published. Required fields are marked *

Back To Top