Thursday, 20th September 2018  

Vijayavani

Breaking News

ತೆಲಂಗಾಣದಲ್ಲಿ ಕಣಿವೆಗೆ ಉರುಳಿದ ಬಸ್‌, 52 ಜನರ ಸಾವು

Tuesday, 11.09.2018, 1:55 PM       No Comments

ಹೈದರಾಬಾದ್‌: ಸರ್ಕಾರಿ ಸ್ವಾಮ್ಯದ ರಸ್ತೆ ಸಾರಿಗೆ ನಿಗಮದ ಬಸ್ ಕಣಿವೆಗೆ ಉರುಳಿದ ಪರಿಣಾಮ ಬಸ್‌ನಲ್ಲಿದ್ದ 6 ಜನ ಮಕ್ಕಳು ಮತ್ತು ಮಹಿಳೆ ಸೇರಿ ಸುಮಾರು 52 ಜನ ಪ್ರಯಾಣಿಕರು ಮೃತಪಟ್ಟಿದ್ದು, 20 ಜನ ಗಾಯಗೊಂಡಿರುವ ಘಟನೆ ತೆಲಂಗಾಣದ ಜಗ್ತಿಯಲ್‌ ಜಿಲ್ಲೆಯಲ್ಲಿ ನಡೆದಿದೆ.

ಕೊಂಡಗಟ್ಟುವಿನಿಂದ ಜಗ್ತಿಯಲ್‌ಗೆ ಬಸ್‌ ಹಿಂತಿರುಗುತ್ತಿದ್ದಾಗ ಶನಿವಾರಪೇಟೆ ಗ್ರಾಮದ ಬಳಿಯ ಘಟ್ಟದ ರಸ್ತೆಯಲ್ಲಿ ಕಣಿವೆಗೆ ಜಾರಿ ಬಿದ್ದಿದೆ. ಬಸ್‌ನಲ್ಲಿ 60 ಜನರು ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇಂದು ಬೆಳಗ್ಗೆ 11.45ರ ವೇಳೆಗೆ ಘಟನೆ ನಡೆದಿದ್ದು, 45 ಜನರು ಮೃತಪಟ್ಟಿದ್ದಾರೆ. ಗಾಯಗೊಂಡ 20ಕ್ಕೂ ಹೆಚ್ಚು ಜನರನ್ನು ಸ್ಥಳೀಯ ಬೇರೆ ಬೇರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಜಗ್ತಿಯಲ್ ಜಿಲ್ಲಾಧಿಕಾರಿ ಎ ಶರತ್ ತಿಳಿಸಿದ್ದಾರೆ.

ಘಟನೆಯಲ್ಲಿ ಮಡಿದವರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಘೋಷಿಸಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *

Back To Top