Saturday, 17th March 2018  

Vijayavani

ರಾಜ್ಯದಲ್ಲಿ ಮತ್ತೆ ರಾಹುಲ್​ ಟೆಂಪಲ್​ರನ್​ - ಉಡುಪಿಗೆ ವಿಸಿಟ್ಟು​​​.. ಕೃಷ್ಣಮಠಕ್ಕೆ ಡೌಟು - ಕಾಂಗ್ರೆಸ್​​ನಲ್ಲಿ ಹೈಕಮಾಂಡ್​ ಆದ್ರಾ ಸಿಎಂ..        ಧರ್ಮ ಸಂಕಷ್ಟಕ್ಕೆ ಹೈಕಮಾಂಡ್​ ಎಂಟ್ರಿ - ಚುನಾವಣೆಗಾಗಿ ವಿಷ್ಯ ಸೈಡ್​ಗಿಡೋಕೆ ತಾಕೀತು - ಅತ್ತ ದಿಲ್ಲೀಲಿ ಮೊಯ್ಲಿಗೆ ವರಿಷ್ಠರ ಎಚ್ಚರಿಕೆ        ಕಾಂಗ್ರೆಸ್ ಕೋಟೆಯಲ್ಲಿ ಕೇಸರಿ ಮಾಸ್ಟರ್​ಪ್ಲಾನ್​ - ನಾಲ್ಕೂ ದಿಕ್ಕಿನಲ್ಲಿ ಚಾಣಕ್ಯನ ತಂಡ - ಸಿಎಂ ತವರಲ್ಲಿ ರಾಜೇಂದ್ರ ಅಗರ್​ವಾಲ್​​ ತಂತ್ರಗಾರಿಕೆ        ಮಾರ್ಚ್​ 21ಕ್ಕೆ ಎಲೆಕ್ಷನ್​ಗೆ ಮುಹೂರ್ತ ಸಾಧ್ಯತೆ - ಇವಿಎಂ ಬೇಡ ಅಂತ ಕೈ ನಿರ್ಣಯ - ಬ್ಯಾಲೆಟ್ ಪೇಪರ್​​ಗೆ ಎಚ್​​​ಡಿಡಿ ಅಭಿಮತ        ಭಾರತದ ಬ್ಯಾಂಕ್​​ಗಳಿಂದಲೇ ನಡೆದಿದೆ ಪ್ರಮಾದ - ಸಾಲ ವಾಪಸ್​​ ಕಟ್ಟೋದಾಗಿ ಮಲ್ಯ ವಾದ - ಮದ್ಯದ ದೊರೆ ದೇಶಕ್ಕೆ ಬರೋದೇ ಅನುಮಾನ        ನಾಡಿನೆಲ್ಲೆಡೆ ನಾಳೆ ಯುಗಾದಿ ಸಂಭ್ರಮ - ಶ್ರೀಶೈಲದಲ್ಲಿ ಜನಜಾಗೃತಿ ಸಮಾವೇಶ - ಪ್ರಧಾನಿ ಮೋದಿಯಿಂದ ಹಬ್ಬದ ಶುಭಾಶಯ       
Breaking News

40 ಸಾಧಕಿಯರಿಗೆ ಪುರಸ್ಕಾರ

Monday, 14.08.2017, 3:00 AM       No Comments

ಶ್ರವಣಬೆಳಗೊಳ (ಪಟ್ಟ ಮಹಾದೇವಿ ಶಾಂತಲಾ ವೇದಿಕೆ): ಜೈನಕಾಶಿ ಗೊಮ್ಮಟೇಶ್ವರನ ನಾಡಿನಲ್ಲಿ ಸಾವಿರ ವರ್ಷದಿಂದ ಮಹಿಳಾ ಪ್ರಶಸ್ತಿ ನೀಡಿ ಸಾಧಕ ಮಹಿಳೆಯರನ್ನು ಸಮಾಜಕ್ಕೆ ಪರಿಚಯಿಸಲಾಗುತ್ತಿದೆ ಎಂದು ಜೈನ ಮಠದ ಪೀಠಾಧ್ಯಕ್ಷ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದ್ದಾರೆ.

ರಾಷ್ಟ್ರೀಯ ಜೈನ ಮಹಿಳಾ ಸಮ್ಮೇಳನದಲ್ಲಿ ಜೈನ ಸಮಾಜದ ಮಹಿಳೆಯರ ಅಭ್ಯುದಯಕ್ಕಾಗಿ ಸೇವೆ ಸಲ್ಲಿಸುತ್ತಿರುವ ರಾಷ್ಟ್ರದ 9 ಜೈನ ಮಹಿಳಾ ಸಂಸ್ಥೆಗಳು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ 40 ಮಹಿಳೆಯರಿಗೆ ಆದರ್ಶ ಮಹಿಳಾ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಮಹಾ ಮಸ್ತಕಾಭಿಷೇಕದಲ್ಲಿ ಗುಳಕಾಯಿ ಅಜ್ಜಿ ಮಾಡಿದ ಅಭಿಷೇಕದಿಂದ ಬಾಹುಬಲಿ ಮೂರ್ತಿಗೆ ಸಂಪೂರ್ಣ ಮಜ್ಜನವಾಯಿತು. ಅಂದಿನಿಂದ ಇಂದಿನವರೆಗೆ ಸಾಧನೆ ಮಾಡಿದ ಮಹಿಳೆಯರಿಗೆ ಕ್ಷೇತ್ರದಲ್ಲಿ ಗೌರವ ನೀಡಲಾಗುತ್ತಿದೆ. ಚಾವುಂಡರಾಯನ ಆದೇಶದಂತೆ ಪ್ರತಿ ಮಹಾ ಮಸ್ತಕಾಭಿಷೇಕದಲ್ಲಿ ಮಹಿಳಾ ಸಮ್ಮೇಳನ ಏರ್ಪಡಿಸಿ ಮಹಿಳೆಯರ ಸಾಧನೆಯನ್ನು ರಾಷ್ಟ್ರಕ್ಕೆ ತಿಳಿಸುವುದರೊಂದಿಗೆ ಆದರ್ಶ ಮಹಿಳೆಯನ್ನು ಗುರುತಿಸಿ ಅವರಿಗೆ ಗೌರವ ಸಲ್ಲಿಸುವ ಕೆಲಸವನ್ನು ಜೈನಮಠ ನಿರಂತವಾಗಿ ಮಾಡುತ್ತಿದೆ ಎಂದರು.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಚನ್ನಮ್ಮ, ಸಾಲುಮರದ ತಿಮ್ಮಕ್ಕ, ಹಾಸನ ಜಿಲ್ಲೆ ಸ್ಥಳೀಯ ಪತ್ರಿಕೆ ಸಂಪಾದಕಿ ಲೀಲಾವತಿ, ಸಾಹಿತಿ ಡಾ.ಪದ್ಮಾಶೇಖರ್, ಸಾಹಿತಿ ನಾಡೋಜ ಕಮಲಾ ಹಂಪನಾ, ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ ಸೇರಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 12 ಮಹಿಳೆಯರಿಗೆ ಆದರ್ಶ ಮಹಿಳಾ ಪ್ರಶಸ್ತಿ ವಿತರಿಸಲಾಯಿತು.

ದೇಶ ರಕ್ಷಣೆ, ಕಲೆ ಮತ್ತು ಸಂಸ್ಕೃತಿ, ಆಡಳಿತ, ಸಮಾಜ ಸೇವೆ, ಸಾಹಿತ್ಯ ಕ್ಷೇತ್ರ, ಶಿಕ್ಷಣ ಕ್ಷೇತ್ರ, ಚಿತ್ರಕಲೆ ಮತ್ತು ಕರಕುಶಲ, ಶಾಸ್ತ್ರೀಯ ಸಂಗೀತ, ಜಾನಪದ, ಕ್ರೀಡಾ, ನೃತ್ಯಕಲೆ ಕ್ಷೇತ್ರದಲ್ಲಿ ಸಾಧನೆ ಮಾಡಿದ 28 ಜೈನ ಮಹಿಳೆಯರಿಗೆ ಆದರ್ಶ ಜೈನ ಮಹಿಳಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಒಟ್ಟು 40 ಮಹಿಳೆಯರಿಗೆ ಸ್ವರ್ಣ ಲೇಪಿತ ಪದಕ ಗುಳಕಾಯಿ ಅಜ್ಜಿ ಮೂರ್ತಿ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ಜೈನ ಸಮಾಜದ ಮಹಿಳೆಯ ಏಳಿಗೆಗಾಗಿ ಸೇವೆ ಸಲ್ಲಿಸುತ್ತಿರುವ ಮಧ್ಯಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ಕೇರಳ, ರಾಜಸ್ಥಾನ ಸೇರಿ ದೇಶದ 9 ಜೈನ ಮಹಿಳಾ ಸಂಸ್ಥೆಗಳಿಗೆ ತಲಾ 1 ಲಕ್ಷ ರೂ. ಹಾಗೂ ಸ್ವರ್ಣ ಲೇಪಿತ ಪದಕ, ಪಂಚಲೋಹದ ಗುಳಕಾಯಿ ಅಜ್ಜಿ ಮೂರ್ತಿ, ಪ್ರಮಾಣ ಪತ್ರ ನೀಡುವ ಮೂಲಕ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

Leave a Reply

Your email address will not be published. Required fields are marked *

Back To Top