Wednesday, 22nd November 2017  

Vijayavani

1. ಉಗ್ರನ ವಿರುದ್ಧ ಕೊಡಲಿಲ್ಲ ಪಾಕ್ ಸಾಕ್ಷ್ಯ – LET ಕ್ರಿಮಿ ಹಫೀಜ್ ಸಯೀದ್​ಗೆ ಕ್ಲೀನ್​ಚಿಟ್ – ಮನೆಯಿಂದ ಹೊರಬರ್ತಾನೆ ಮುಂಬೈ ದಾಳಿ ಮಾಸ್ಟರ್ ಮೈಂಡ್ 2. ಅಲೆಮಾರಿಗಳ ಮನೆ ತೆರವು ವೇಳೆ ಅಮಾನವೀಯ ವರ್ತನೆ – ನಡುರಸ್ತೆಯಲ್ಲಿ ಮಹಿಳೆಗೆ ಹೆರಿಗೆ – ದಿಗ್ವಿಜಯ ನ್ಯೂಸ್​ ವರದಿಗೆ ಡಿಸಿ ಸ್ಪಂದನೆ 3. ಹೆರಿಗೆ ವೇಳೆ ಮೃತಪಟ್ಟಿದ್ದಾಳೆ ಅಂದ್ರು ಡಾಕ್ಟರ್ಸ್​ – ಅಂತ್ಯ ಸಂಸ್ಕಾರದ ವೇಳೆ ಕಣ್ಣು ಬಿಟ್ಲಂತೆ ಬಾಣಂತಿ – ಮನೆಗೆ ತರೋವಷ್ಟರಲ್ಲಿ ಮತ್ತೆ ಸಾವಿನ ದರ್ಶನ 4. ಕೊಪ್ಪಳ ಜಿಲ್ಲಾಪ್ರವಾಸದಲ್ಲಿ ಎಚ್​ಡಿಡಿ – ಗವಿಮಠಕ್ಕೆ ಮಾಜಿ ಪ್ರಧಾನಿ ಭೇಟಿ – ಇಳಿವಯಸ್ಸಿನಲ್ಲೂ ಕಿಂಡಿಯಲ್ಲೆ ತೆರಳಿ ದರ್ಶನ 5. ಯೂರ್ಟನ್​ ವೇಳೆ ಕಾರಿಗೆ ಲಾರಿ ಡಿಕ್ಕಿ – ಡಿಕ್ಕಿ ಹೊಡೆದ ಲಾರಿಗೆ ಟ್ರಕ್ ಡ್ಯಾಶ್ – ಸೌದಿ ಹೈವೇಯಲ್ಲಿ ಹಾರಿಬಲ್ ಆಕ್ಸಿಡೆಂಟ್
Breaking News :

ಸ್ನೇಹಿತೆಯ ಜೀವ ಉಳಿಸಿದ ನಾಲ್ಕು ವರ್ಷದ ಬಾಲಕಿ

Wednesday, 15.11.2017, 10:40 AM       No Comments

>> ಕಾಲು ಜಾರಿ ಕೆರೆಗೆ ಬಿದ್ದಿದ್ದ ರಿತು

ಮಂಡ್ಯ: ನಾಲ್ಕು ವರ್ಷದ ಚಿಕ್ಕ ಬಾಲಕಿಯ ಸಮಯಪ್ರಜ್ಞೆಯಿಂದ ಆಕೆಯ ಪುಟಾಣಿ ಗೆಳತಿಯ ಜೀವ ಉಳಿದ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಮದ್ದೂರು ತಾಲೂಕಿನ ಅಣ್ಣೂರು ಗ್ರಾಮದ ನಾಲ್ಕು ವರ್ಷದ ಚಂದನ ಮತ್ತು ರಿತು ಇಬ್ಬರು ಎದುರು ಬದುರು ಮನೆಯವರು. ಜೊತೆಗೆ ಇಬ್ಬರೂ ಕೂಡ ಆತ್ಮೀಯ ಗೆಳತಿಯರು. ನವೆಂಬರ್ 10 ರಂದು ಅಜಿತ್ ಕುಮಾರ್ ಮತ್ತು ಶಿಲ್ಪಾ ದಂಪತಿ ಪುತ್ರಿ ಚಂದನಾ ಅಂಗಡಿಯಿಂದ ತಿಂಡಿ ತೆಗೆದುಕೊಂಡು ಬರುತ್ತಿದ್ದಳು. ಈ ವೇಳೆ ತನ್ನ ಗೆಳತಿ ಚಂದ್ರಶೇಖರ್ ಮತ್ತು ವಿನುತಾ ಅವರ ಮಗಳು ರಿತು ತನ್ನ ಚಪ್ಪಲಿಗೆ ಮೆತ್ತಿಕೊಂಡಿರುವ ಸಗಣಿ ತೊಳೆಯಲು ಹತ್ತಿರದ ಚಿಕ್ಕ ಕೆರೆಯ ಕಟ್ಟೆ ಕಡೆಗೆ ಹೋಗುತ್ತಿರುವುದನ್ನು ನೋಡಿದ್ದಾಳೆ.

ಚಂದನ ಕೂಡ ರಿತುವನ್ನು ಮಾತನಾಡಿಸಲು ಅವಳ ಬಳಿ ಬಂದಿದ್ದಾಳೆ. ಆದರೆ ಅಷ್ಟರಲ್ಲಿ ಕಾಲು ಜಾರಿ ರಿತು ಕೆರೆಯೊಳಗೆ ಬಿದ್ದಿದ್ದಾಳೆ. ಇದನ್ನು ನೋಡಿ ಚಂದನಾ ಮನೆಯ ಬಳಿ ತೆರಳಿ ರಿತುವಿನ ಪೋಷಕರು ಮತ್ತು ತನ್ನ ತಂದೆಗೆ ವಿಷಯ ತಿಳಿಸಿ ಅಳಲಾರಂಭಿಸಿದ್ದಾಳೆ.

ಆರಂಭದಲ್ಲಿ ಮನೆಯವರು ಚಿಕ್ಕ ಹುಡುಗಿ ಏನೇನೋ ಹೇಳುತ್ತಿದ್ದಾಳೆ ಅಂದುಕೊಂಡಿದ್ದರು. ಇದನ್ನು ನೋಡಿ ಚಂದನ ಅಳುವನ್ನು ಜೋರು ಮಾಡಿದ್ದಾಳೆ. ಇದರಿಂದ ಗಾಬರಿಗೊಂಡ ಪೋಷಕರು ಕೆರೆ ಬಳಿ ಓಡಿ ಬಂದು ನೋಡಿದಾಗ ರಿತು ನೀರಿಗೆ ಬಿದ್ದಿರುವುದು ಕಂಡಿದೆ.

ತಕ್ಷಣ ರಿತುವನ್ನು ನೀರಿನಿಂದ ಮೇಲೆತ್ತಿದರೂ ಆಕೆ ತೀವ್ರ ಅಸ್ವಸ್ಥಳಾಗಿದ್ದಳು. ನಂತರ ರಿತುವನ್ನು ಕೆಎಂ ದೊಡ್ಡಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎರಡು ದಿನಗಳ ಕಾಲ ಚಿಕಿತ್ಸೆ ಕೊಡಿಸಿ ಮನೆಗೆ ಕರೆತರಲಾಗಿದೆ. ಒಟ್ಟಾರೆ ಪುಟಾಣಿ ಹುಡುಗಿ ಚಂದನಾಳ ಸಮಯಪ್ರಜ್ಞೆಯಿಂದ ಆಕೆಯ ಗೆಳತಿ ರಿತು ಬದುಕುಳಿದಿದ್ದು, ಎಲ್ಲರೂ ಚಂದನಾಳ ಗುಣಗಾನ ಮಾಡುತ್ತಿದ್ದಾರೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *

Back To Top