Wednesday, 22nd November 2017  

Vijayavani

1. ಸಂಸತ್​ ಕದನಕ್ಕೆ ವೇದಿಕೆ ಸಜ್ಜು – ಡಿಸೆಂಬರ್​ 15 ರಿಂದ ಚಳಿಗಾಲದ ಅಧಿವೇಶನ – ಜಿಎಸ್​ಟಿ ಅಸ್ತ್ರ ಬಳಸಲು ಕೈ ಸಜ್ಜು 2. 100 ರೂಪಾಯಿ ಲಂಚಕ್ಕೆ ಗಲಾಟೆ ಶುರು – ಬೈಕ್​ ಸವಾರನ ಜತೆ ಎಎಸ್​​ಐ ಜಗಳ – ತುಮಕೂರಲ್ಲಿಖಾಕಿ, ಬೈಕ್​ ಸವಾರನ ಜಟಾಪಟಿ 3. ಮಾನಸಿಕ ಖಿನ್ನತೆನಾ..? ಸಂಸಾರದ ವಿರಸನಾ – ಬಿಲ್ಡಿಂಗ್​ ಮೇಲಿಂದ ಹಾರಿ ಮಹಿಳಾ ಟೆಕ್ಕಿ ಆತ್ಮಹತ್ಯೆ​ – ಸಾವಿಗೆ ಕಾರಣ ಕುರಿತು ಖಾಕಿ ತನಿಖೆ 4. ಕೆರೆ ಒತ್ತುವರಿ ಮಾಡಿದ್ದವ್ರಿಗೆ ಸಂಕಷ್ಟ – ಸಹಾಯ ಮಾಡಿದ ಅಧಿಕಾರಿಗಳಿಗೂ ಶಿಕ್ಷೆ – ಬಿಲ್ಡರ್​​ ಸ್ಥಿರಸ್ತಿ,ಚರಾಸ್ತಿ ಜಪ್ತಿ ಅಂದ್ರು ಕೋಳಿವಾಡ 5. ಬ್ರಹ್ಮೋಸ್​ ಕ್ಷಿಪಣಿ ಯಶಸ್ವಿ ಉಡಾವಣೆ – ಸರ್ಜಿಕಲ್​ ದಾಳಿಗೆ ಸಿಕ್ತು ಹೊಸ ಅಸ್ತ್ರ – ಭಾರತಕ್ಕೆ ವಿಶ್ವಮಟ್ಟದಲ್ಲಿ ಮತ್ತೊಂದು ಗರಿ
Breaking News :

ಬೆಂಗಳೂರಿನಲ್ಲಿ ಮೂವರು ಪಾಕ್​ ಪ್ರಜೆಗಳು ಸೇರಿ ನಾಲ್ವರ ಬಂಧನ

Thursday, 25.05.2017, 12:46 PM       No Comments

ಬೆಂಗಳೂರು: ಕಳೆದ 2 ತಿಂಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದ ಓರ್ವ ಮಹಿಳೆ ಸೇರಿದಂತೆ ಮೂವರು ಪಾಕ್​ ಪ್ರಜೆಗಳನ್ನು ಕ್ರೈಂ ಬ್ರ್ಯಾಂಚ್​ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಪಾಕಿಸ್ತಾನದ ಸಮೀರಾ ಅಬ್ದುಲ್​ ರೆಹಮಾನ್​, ಖಾಸಿಬ್​ ಶಂಷುದ್ದೀನ್​, ಕಿರಣ್​ ಗುಲಾಂ ಆಲಿಯನ್ನು ಕ್ರೈಬ್ರಾಂಚ್​ ಪೊಲೀಸರು ಬಂಧಿಸಿದ್ದಾರೆ. ಎಸಿಪಿ ಜೈ ಮಾರುತಿ ಅವರ ಸಿಸಿಬಿ ತಂಡ ಕಾರ್ಯಚರಣೆ ನಡೆಸಿ ಪಾಕ್​ ಪ್ರಜೆಗಳನ್ನು ಬಂಧಿಸಿದೆ. ಜತೆಗೆ ಸಿಸಿಬಿ ಪೊಲೀಸರು ಪಾಕ್​ ಪ್ರಜೆಗಳನ್ನು ಬೆಂಗಳೂರಿಗೆ ಕರೆ ತಂದಿದ್ದ ಕೇರಳದ ಮೊಹಮ್ಮದ್​ ಷಿಹಾಬ್​ನನ್ನೂ ಸಹ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ನೇಪಾಳ ಮೂಲಕ ಭಾರತಕ್ಕೆ ಪ್ರವೇಶಿಸಿದ್ದ ಪಾಕ್​ ಪ್ರಜೆಗಳು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್​ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಬೆಂಗಳೂರಿನ ವಿಳಾಸದ ಆಧಾರ್​ ಕಾರ್ಡ್ ಸಹ ಮಾಡಿಸಿಕೊಂಡಿದ್ದರು.

ಷಿಹಾಬ್​ ದುಬೈಗೆ ತೆರಳಿದ್ದ ಸಂದರ್ಭದಲ್ಲಿ ಪಾಕ್​ ಮೂಲದ ಯುವತಿ ಜತೆ ಪ್ರೀತಿಯ ಬಲೆಗೆ ಸಿಲುಕಿದ್ದ. ಇಬ್ಬರ ಪ್ರೀತಿಗೆ ಪಾಕಿಸ್ತಾನದಲ್ಲಿ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ನಕಲಿ ಪಾಸ್​ಪೋರ್ಟ್​ ಮತ್ತು ವೀಸಾ ಮೂಲಕ ಯುವತಿಯನ್ನು ನೇಪಾಳ ಮೂಲಕ ಬೆಂಗಳೂರಿಗೆ ಕರೆತಂದಿದ್ದ ಎಂದು ತಿಳಿದು ಬಂದಿದೆ.

ದಿಗ್ವಿಜಯ ನ್ಯೂಸ್ LIVE LINK

Leave a Reply

Your email address will not be published. Required fields are marked *

Back To Top