Saturday, 18th November 2017  

Vijayavani

1. ಜಯಾ ನಿವಾಸದಲ್ಲಿ ಐಟಿ ಇಂಚಿಂಚೂ ಶೋಧ- ಪೋಯೆಸ್​ ಗಾರ್ಡನ್​​ನಲ್ಲಿ ದಾಖಲೆಗಳ ಪರಿಶೀಲನೆ- ಚೆನ್ನೈನಲ್ಲಿ ಕಳೆದ ರಾತ್ರಿಯಿಂದಲೂ ಹೈಡ್ರಾಮಾ 2. ಬೆಂಗಳೂರಿನಲ್ಲಿ ವ್ಯಕ್ತಿಯ ಪುಂಡಾಟ- ನಡುರೋಡಲ್ಲೇ ಟ್ರಾಫಿಕ್​​ ಪೊಲೀಸ್​ ಮೇಲೆ ಹಲ್ಲೆ- ದೊಣ್ಣೆ ಹಿಡಿದ ವ್ಯಕ್ತಿ ಈಗ ಖಾಕಿ ಅತಿಥಿ 3. ಒಂದಲ್ಲ… ಎರಡಲ್ಲ… ಬರೋಬ್ಬರಿ ಮೂರು- ಬೀಗರ ಊಟದಲ್ಲೇ ಸಿಕ್ಕಿಬಿದ್ದ ರಸಿಕ ಮಹಾಶಯ- ಹಾಸನದ ಗೊರೂರಿನಲ್ಲಿ ಬಿತ್ತು ಸಖತ್ ಗೂಸಾ 4. ಪಿಒಕೆ ವಶಪಡಿಸಿಕೊಳ್ಳಲು ಪಾಕ್​ ತೆರಿಗೆ ಹುನ್ನಾರ- ಕೋಳಿ, ಕುರಿ, ಹಸುವಿಗೂ ಟ್ಯಾಕ್ಸ್​- ಪಾಕ್​ ವಿರುದ್ಧ ಗಿಲ್ಗಿಟ್​​​ನಲ್ಲಿ ಆಕ್ರೋಶ 5. ಸಿಂಹಳೀಯರ ದಾಳಿಗೆ ಭಾರತ ತತ್ತರ- ಮೊದಲ ಇನ್ನಿಂಗ್ಸ್​​​ನಲ್ಲಿ 172ಕ್ಕೆ ಆಲೌಟ್​- ಶ್ರೀಲಂಕಾ ರಕ್ಷಣಾತ್ಮಕ ಆಟ
Breaking News :

ಬೈಕ್​ನಲ್ಲಿ ತೆರಳುತ್ತಿದ್ದ ಮೂವರು ವಿದ್ಯುತ್​ಗೆ ಬಲಿ

Wednesday, 24.05.2017, 8:46 AM       No Comments

ಹಾಸನ: ರಸ್ತೆಯಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಬೈಕ್​ನಲ್ಲಿ ತೆರಳುತ್ತಿದ್ದ ಮೂವರು ಮೃತಪಟ್ಟ ಘಟನೆ ಹಾಸನ ತಾಲೂಕಿನ ಶಂಕರನಹಳ್ಳಿ ಬಳಿ ನಡೆದಿದೆ.

ಗೋಪನಹಳ್ಳಿಯ ರವಿ (56), ಪ್ರಸಾದ್ (23), ಕಿಟ್ಟಿ (59) ಮೃತಪಟ್ಟವರು. ಮಳೆಯಿಂದಾಗಿ ವಿದ್ಯುತ್ ತಂತಿ ತುಂಡಾಗಿ ರಸ್ತೆಯ ಮೇಲೆ ಬಿದ್ದಿತ್ತು. ಬುಧವಾರ ಬೆಳಗ್ಗೆ ಇದೇ ಮಾರ್ಗದಲ್ಲಿ ಸಾಗುತ್ತಿದ್ದ ಬೈಕ್​ಗೆ ವಿದ್ಯುತ್ ತಂತಿ ತಗುಲಿ ಈ ದುರ್ಘಟನೆ ಸಂಭವಿಸಿದೆ.

ಸ್ಥಳಕ್ಕೆ ಹಾಸನ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

 ದಿಗ್ವಿಜಯ ನ್ಯೂಸ್ LIVE LINK

(ವೈವಿಧ್ಯಮಯ ಸುದ್ದಿಗಳಿಗೆ ವಿಜಯವಾಣಿ ಪತ್ರಿಕೆ ಓದಿರಿ)

Leave a Reply

Your email address will not be published. Required fields are marked *

Back To Top