Thursday, 21st September 2017  

Vijayavani

1. ಆಸೀಸ್‌ ಬಗ್ಗುಬಡಿದ ಟೀಂಇಂಡಿಯಾ- ಈಡನ್‌ ಗಾರ್ಡನ್‌ನಲ್ಲಿ ಭಾರತಕ್ಕೆ ದಿಗ್ವಿಜಯ- ಹ್ಯಾಟ್ರಿಕ್‌ ಸಾಧನೆ ಮಾಡಿ ಕುಲ್ದೀಪ್‌ ಕಿಲಕಿಲ 2. ಶಿವರಾಮ ಕಾರಂತ ಲೇಔಟ್ ಡಿನೋಟಿಫೈ ಪ್ರಕರಣ- ಎಸಿಬಿ ಅಧಿಕಾರಿಗಳ ತುರ್ತು ಸಭೆ- ಮುಂದಿನ ನಡೆ ಬಗ್ಗೆ ಸುದೀರ್ಘ ಚರ್ಚೆ 3. ಬಳ್ಳಾರಿಯ ಮುದೇನೂರು ಕೆರೆ ಬಿರುಕು- ಯಾವುದೇ ಕ್ಷಣದಲ್ಲೂ ಕೆರೆ ಒಡೆಯೋ ಸಾಧ್ಯತೆ- ಆತಂಕದಲ್ಲಿ ಹೂವಿನಹಡಗಲಿ ಜನ 4. ಸಂಜೀವಿನಿ ಪರ್ವತ ಹೊತ್ತು ತಂದ ಹನುಮಂತ- ಕ್ರೇನ್‌ ಕೈಕೊಟ್ಟು ರಪ್‌ ಅಂತ ನೆಲಕ್ಕೆ ಬಿದ್ದ- ಆಸ್ಪತ್ರೆ ಸೇರಿದ ಆಂಜನೇಯ 5. ಅಖಾಡದಲ್ಲಿ ಕುಸ್ತಿ ಮಸ್ತಿಯ ಕಲರವ- ಅರಮನೆ ಆವರಣದಲ್ಲಿ ಕಲಾಶ್ರೀಮಂತಿಕೆಯ ವೈಭವ- ಮೈಸೂರಿನಲ್ಲಿ ಮೇಳೈಸಿದೆ ನಾಡಹಬ್ಬದ ಸಂಭ್ರಮ
Breaking News :

ನೇತ್ರಾವತಿ ನದಿಯಲ್ಲಿ ಮುಳುಗಿ 3 ಇಂಜಿನಿಯರಿಂಗ್​ ವಿದ್ಯಾರ್ಥಿಗಳ ಸಾವು

Monday, 04.09.2017, 4:43 PM       No Comments

ಮಂಗಳೂರು: ನೇತ್ರಾವತಿ ನದಿಯಲ್ಲಿ ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರು ಹೊರವಲಯದ ಇನೋಳಿ ಬಳಿ ನೇತ್ರಾವತಿ ನದಿಯಲ್ಲಿ ಈ ದುರ್ಘಟನೆ ನಡೆದಿದೆ. ಮಂಗಳೂರಿನ ಅಡ್ಯಾರು ಸಹ್ಯಾದ್ರಿ ಕಾಲೇಜಿನ 8 ವಿದ್ಯಾರ್ಥಿಗಳು ನದಿಯಲ್ಲಿ ಈಜಲು ತೆರಳಿದ್ದರು, ಈ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಉಳಿದ 5 ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದೆ.

ಮೃತಪಟ್ಟ ವಿದ್ಯಾರ್ಥಿಗಳನ್ನು ವಿಕಿಲ್ (21), ಶ್ರೀರಾಂ (22) ಮತ್ತು ಶುಭಂ (21) ಎಂದು ಗುರುತಿಸಲಾಗಿದೆ. ಉಳ್ಳಾಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top