Saturday, 18th November 2017  

Vijayavani

1. ಮುಷ್ಕರ ಬಿಕ್ಕಟ್ಟು ಇತ್ಯರ್ಥಕ್ಕೆ ಸಿಎಂ ಸಭೆ- ವೈದ್ಯಕೀಯ ಸಂಘದ ಜತೆ ಮೀಟಿಂಗ್- ಬಗೆಹರಿಯುತ್ತಾ ಖಾಸಗಿ ವಿಧೇಯಕ ಗೊಂದಲ 2. ಖಾಸಗಿ ವೈದ್ಯರ ಮುಷ್ಕರ ವಿಚಾರ- ಹೈಕೋರ್ಟ್‌ನಲ್ಲಿ ಪಿಐಎಲ್‌ ವಿಚಾರಣೆ- ಖಡಕ್‌ ಸೂಚನೆ ನೀಡುತ್ತಾ ಹೈಕೋರ್ಟ್..? 3. ಐದನೇ ದಿನ, ಬಲಿಯಾದವರು ಹನ್ನೊಂದು ಜನ- ವೈದ್ಯರ ಮುಷ್ಕರಕ್ಕೆ ಅಮಾಯಕರ ಸಾವು- ಪ್ರತಿಷ್ಠೆ ಬಿಡಿ, ಕರ್ತವ್ಯಕ್ಕೆ ಬನ್ನಿ 4. ಕಾವೇರಿ ಬಳಿಕ ತಮಿಳುನಾಡು ಮತ್ತೊಂದು ಕ್ಯಾತೆ- ಮೈಸೂರು ಪಾಕ ತಮ್ಮದೆಂದು ವಾದ- ಸೋಷಿಯಲ್ ಮೀಡಿಯಾದಲ್ಲಿ ಶುರು ಸಿಹಿ ಸಮರ 5. ಪತ್ರಕರ್ತೆ ಮೇಲೆ ಎರಗಿದ ಕಿಡಿಗೇಡಿ- ದೆಹಲಿ ಮೆಟ್ರೋ ಸ್ಟೇಷನ್‌ನಲ್ಲಿ ಲೈಂಗಿಕ ಕಿರುಕುಳ- ಸಿಸಿಟಿವಿ ಆಧರಿಸಿ ಆರೋಪಿ ಸೆರೆ
Breaking News :

3 ಹುಲಿಮರಿ, ಮರಿಯಾನೆ ದತ್ತು

Friday, 28.04.2017, 3:01 AM       No Comments

ಆನೇಕಲ್: ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನವನದ ಒಂದು ಮರಿಯಾನೆ ಹಾಗೂ ಮೂರು ಹುಲಿಮರಿಗಳನ್ನು ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ದತ್ತು ಪಡೆದಿದ್ದಾರೆ.

ತಿಂಗಳ ಹಿಂದೆ ಉದ್ಯಾನವನಕ್ಕೆ ಭೇಟಿ ನೀಡಿದ್ದ ಜನಾರ್ದನ ರೆಡ್ಡಿ ವಿಸ್ಮಯ ಹುಲಿ ಇತ್ತೀಚೆಗೆ ಜನ್ಮ ನೀಡಿದ ಮೂರು ಮರಿಗಳನ್ನು ಹಾಗೂ ಆರು ತಿಂಗಳ ಹಿಂದೆ ಜನಿಸಿದ್ದ ಮರಿಯಾನೆಯನ್ನು ವೀಕ್ಷಿಸಿದ್ದರು. ಇವುಗಳನ್ನು ದತ್ತು ಪಡೆಯಲು ಒಪ್ಪಂದ ಪತ್ರ ಸಿದ್ಧಪಡಿಸುವಂತೆ ತಿಳಿಸಿದ್ದರು. ಗುರುವಾರ ಉದ್ಯಾನಕ್ಕೆ ಭೇಟಿ ನೀಡಿ ಈ ಪ್ರಾಣಿಗಳನ್ನು ಒಂದು ವರ್ಷದ ಅವಧಿಗೆ ದತ್ತು ಪಡೆದರು.

ಹುಲಿಮರಿಯೊಂದಕ್ಕೆ ವಾರ್ಷಿಕ 1 ಲಕ್ಷ ರೂ. ಹಾಗೂ ಮರಿಯಾನೆ ನಿರ್ವಹಣೆಗೆ 1.75 ಲಕ್ಷ ರೂ. ವೆಚ್ಚವಾಗುತ್ತದೆ. ಜನಾರ್ದನರೆಡ್ಡಿ ಒಟ್ಟು 4.75 ಲಕ್ಷ ರೂಪಾಯಿ ಪಾವತಿ ಮಾಡಿ ದತ್ತು ಪಡೆದರು ಎಂದು ಉದ್ಯಾನದ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ್ ತಿಳಿಸಿದ್ದಾರೆ.

ಮರಿಯಾನೆಗೆ ಶ್ರೀರಾಮುಲು ಎಂದು ನಾಮಕರಣ

ದತ್ತು ಪಡೆದ ನಾಲ್ಕು ಪ್ರಾಣಿಗಳಿಗೂ ಜನಾರ್ದನರೆಡ್ಡಿ ಹೊಸ ಹೆಸರು ಇಟ್ಟಿದ್ದಾರೆ. ಎರಡು ಹೆಣ್ಣು ಮರಿಹುಲಿಗಳ ಪೈಕಿ ಒಂದಕ್ಕೆ ಶಾಂಭವಿ ಎಂದು ಹಾಗೂ ಇನ್ನೊಂದಕ್ಕೆ ಅರುಣ್ಯ, ಗಂಡು ಹುಲಿಮರಿಗೆ ಶಿವು ಎಂದು ಹಾಗೂ ಮರಿಯಾನೆಗೆ ಸ್ನೇಹಿತ ಶ್ರೀರಾಮುಲುವಿನ ಹೆಸರಿಟ್ಟರು. ಹುಲಿಗಳ ಸಂತತಿ ಹೆಚ್ಚಿಸುವ ನಿಟ್ಟಿನಲ್ಲಿ ಪ್ರತ್ಯೇಕ ನಿಧಿ ಸ್ಥಾಪಿಸುವುದಾಗಿ ಹೇಳಿದರು. ಹುಲಿ ಸಫಾರಿ ಸ್ಥಳಕ್ಕೆ ಭೇಟಿ ನೀಡಿ ದತ್ತು ಪಡೆದ ಮರಿಹುಲಿಗಳು ಹಾಗೂ ಮರಿಯಾನೆ ವೀಕ್ಷಿಸಿ ಮೈದಡವಿ ಬೆಲ್ಲ ತಿನ್ನಿಸಿದರು.

Leave a Reply

Your email address will not be published. Required fields are marked *

Back To Top