Thursday, 18th January 2018  

Vijayavani

ಹಿರಿಯ ನಟ ನಿರ್ದೇಶಕ ಕಾಶಿನಾಥ್ ಇನ್ನಿಲ್ಲ - ಬೆಂಗಳೂರಿನ ಶಂಕರ ಕ್ಯಾನ್ಸರ್​ ಆಸ್ಪ್ರೆಯಲ್ಲಿ ಕೊನೆಯುಸಿರು- ಕಳಚಿದ ಅನುಭವದ ಕೊಂಡಿ        ಡೈರೆಕ್ಟರ್​ ಎಪಿ ಅರ್ಜುನ್​ ಕಚೇರಿಯಲ್ಲಿ ಕಳ್ಳತನ - ಯಶ್​ ಬರ್ತಡೇ ದಿನ ಕೃತ್ಯ - ಮಾಜಿ ಕಾರು ಡ್ರೈವರ್ ವಿರುದ್ಧ ಅನುಮಾನದ ಹುತ್ತ         ಒಂಟಿ ಮಹಿಳೆಗೆ ಜಡೆ ಹಿಡಿದು ಥಳಿತ - ಕೊಪ್ಪಳ ಬಸ್​ಸ್ಟಾಪ್​ನಲ್ಲಿ ಪುರುಷರ ಅಟ್ಟಹಾಸ - ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್         ನೈಂಟಿ ಕೊಡ್ತೇವೆ ಅಂತ ಹರಕೆ ಹೊರ್ತಾರೆ ಭಕ್ತರು - ದೇವರ ಹೆಸರಲ್ಲಿ ಸಾಮೂಹಿಕ ಮದ್ಯಾರಾಧನೆ - ಕುಣಿಗಲ್‍ನ ಒಡೇಭೈರವನಿಗೆ ಬ್ರಾಂದಿ ವಿಸ್ಕಿಯೇ ನೈವೇದ್ಯ        ಕೃಷ್ಣನಗರಿಯಲ್ಲಿ ಪರ್ಯಾಯ ಸಂಭ್ರಮ - ಕೃಷ್ಣಪೂಜೆ ನೆರವೇರಿಸಿದ ಪಲಿಮಾರು ಶ್ರೀಗಳು - ಅದ್ಧೂರಿಯಿಂದ ಸರ್ವಜ್ಞ ಪೀಠಾರೋಹಣ       
Breaking News :

3 ಕೋಟಿ ರೂ. ಬ್ಲಾಕ್​ ಮನಿಗೆ ನಾಯಿಗಳ ಕಣ್ಗಾವಲು!

Thursday, 15.12.2016, 4:04 AM       No Comments

ಬೆಂಗಳೂರು: ಕಾಳಧನಿಕರ ಅಕ್ರಮ ಸಂಪತ್ತಿನ ವಿರುದ್ಧ ಸಮರ ಸಾರಿರುವ ಆದಾಯ ತೆರಿಗೆ ಇಲಾಖೆ(ಐಟಿ) ಬೆಂಗಳೂರು ಹಾಗೂ ಗೋವಾದಲ್ಲಿ ನಡೆಸಿದ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ 3.58 ಕೋಟಿ ರೂ. ನಗದನ್ನು ವಶಕ್ಕೆ ಪಡೆದುಕೊಂಡಿದೆ. ಅಚ್ಚರಿ ಎಂದರೆ ಬೆಂಗಳೂರಿನ ಅಪಾರ್ಟ್​ವೆುಂಟ್​ವೊಂದರಲ್ಲಿ ವೃದ್ಧೆಯೊಬ್ಬರು ನಾಯಿಗಳ ಕಾವಲಿಟ್ಟುಕೊಂಡು 2.89 ಕೋಟಿ ರೂ. ನಗದು ಬಚ್ಚಿಟ್ಟಿದ್ದನ್ನು ಐಟಿ ಅಧಿಕಾರಿಗಳು ದಾಳಿ ವೇಳೆ ಜಪ್ತಿ ಮಾಡಿದ್ದಾರೆ.

ನಾಯಿ ಕಾವಲು: ಖಚಿತ ಮಾಹಿತಿ ಮೇರೆಗೆ ಯಶವಂತಪುರದ ತುಮಕೂರು ಮುಖ್ಯರಸ್ತೆಯಲ್ಲಿರುವ ಆರ್​ಎನ್​ಎಸ್ ಶಾಂತಿನಿವಾಸ ಅಪಾರ್ಟ್​ವೆುಂಟ್ ಮೇಲೆ ಡಿ.13 ರಂದು ದಾಳಿ ಮಾಡಿದ ಆದಾಯ ತೆರಿಗೆ ಇಲಾಖೆ ಮನೆಯೊಂದರಿಂದ 2.89 ಕೋಟಿ ರೂ ಹಣವನ್ನು ವಶಕ್ಕೆ ಪಡೆದಿದೆ. ಇದರಲ್ಲಿ 2.25 ಕೋಟಿ ರೂ. 2000 ಮುಖಬೆಲೆ ನೋಟುಗಳಾಗಿವೆ. ಶಾಂತಿನಿವಾಸ ಅಪಾರ್ಟ್​ವೆುಂಟ್ ಎ ಬ್ಲಾಕ್​ನ 5ನೇ ಅಂತಸ್ತಿನಲ್ಲಿರುವ ಫ್ಲಾಟ್ ಸಂಖ್ಯೆ 508ರಲ್ಲಿ ಲೆಕ್ಕವಿಡದ ಹಣ ಇದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿತು.

ಇದನ್ನು ಆಧರಿಸಿ ಫ್ಲಾಟ್​ಗೆ ಹೋದಾಗ ಡಾ| ಶಕೀಲಾ ಶೆಟ್ಟಿ ಎಂಬ ವೃದ್ಧೆ ಎರಡು ನಾಯಿಗಳೊಂದಿಗೆ ಆ ಮನೆಯಲ್ಲಿರುತ್ತಾರೆ.

ಮೊದಲಿಗೆ ಮನೆಗೆ ಕಾವಲಿದ್ದ ನಾಯಿಗಳನ್ನು ಕಟ್ಟಿಹಾಕಲು ಒಪ್ಪದಿದ್ದ ವೃದ್ಧೆ ನಂತರ ಪೊಲೀಸರು ಬಂದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳನ್ನು ಮನೆ ಒಳಗೆ ಬಿಟ್ಟುಕೊಂಡರು. ಅಧಿಕಾರಿಗಳ ಪರಿಶೀಲನೆಯಲ್ಲಿ ಮನೆಯ ಒಂದು ಕೊಠಡಿ ಲಾಕ್ ಆಗಿರುವುದು ಗಮನಕ್ಕೆ ಬಂದಿದೆ. ಲಾಕ್ ತೆರೆಯಲು ಹೇಳಿದಾಗ ಅದರ ಕೀ ತನ್ನ ಬಳಿ ಇಲ್ಲ ಎಂದು ಶಕೀಲಾ ಶೆಟ್ಟಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಡಿ.14 ರ ಬೆಳಗಿನ ಜಾವ ಅದೇ ಮನೆಗೆ ಬಂದ ಆನಂದ್ ಎಂಬ ವ್ಯಕ್ತಿಯನ್ನು ವಶಕ್ಕೆ ಪಡೆದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಅಪಾರ್ಟ್​ವೆುಂಟ್ ಕ್ಲಬ್​ನಲ್ಲಿ ತೀವ್ರ ವಿಚಾರಣೆ ನಡೆಸಿದಾಗ ಮನೆಯಲ್ಲಿ ದೊರೆತ ಹಣ ತನ್ನದೇ ಎಂದು ಒಪ್ಪಿಕೊಂಡಿದ್ದಾರೆ. ಅಲ್ಲದೇ ಅದು ಲೆಕ್ಕವಿಡದ ಕಪ್ಪು ಹಣ ಎಂದೂ ಆನಂದ್ ಹೇಳಿಕೆ ನೀಡಿದ್ದಾರೆ.

ಫ್ಲಾಟ್ ಖರೀದಿ: ಅಕ್ರಮ ಹಣದ ಮಾಲೀಕ ಆನಂದ್ ನೋಟುಗಳ ರದ್ದತಿಯ ನಂತರ, ಅಂದರೆ ನ.10 ರಂದು ಆರ್​ಎನ್​ಎಸ್ ಶಾಂತಿ ನಿವಾಸ್​ನಲ್ಲಿ 3 ಬೆಡ್​ರೂಂನ ಐಷಾರಾಮಿ ಫ್ಲಾಟ್ ಖರೀದಿ ಮಾಡಿದ್ದರು. ಇದಾದ ಮೇಲೆ ಡಾ. ಶಕೀಲಾ ಶೆಟ್ಟಿ ಎಂಬ ವೃದ್ಧೆಯನ್ನು ಆ ಮನೆಯಲ್ಲಿ ವಾಸಕ್ಕೆ ಇಟ್ಟಿದ್ದರು. ಆನಂದ್ ಆಗಾಗ ಬಂದು ಹೋಗುತ್ತಿದ್ದರಷ್ಟೇ. ಸ್ವತಃ ಶಕೀಲಾ ಶೆಟ್ಟಗೂ ಆ ಮನೆಯಲ್ಲಿ ಅಕ್ರಮ ಸಂಪತ್ತು ಇದ್ದದ್ದು ಗೊತ್ತಿರಲಿಲ್ಲ. ಆಗಂತುಕರು ಬಂದಿದ್ದಾರೆಂದು ತಿಳಿದು ಆಕೆ ಬಾಗಿಲು ತೆರೆದಿರಲಿಲ್ಲ. ನಂತರ ಪೊಲೀಸರು ಬಂದ ಮೇಲೆ ಆಕೆ ಬಾಗಿಲು ತೆರೆದು ತನಿಖೆಗೆ ಅನುವು ಮಾಡಿಕೊಟ್ಟರು ಎಂದು ಐಟಿ ಅಧಿಕಾರಿಗಳು ತಿಳಿಸಿದರು.

ಗೋವಾದಲ್ಲೂ ಹೊಸ ನೋಟು ವಶ

ಮತ್ತೊಂದು ಪ್ರಕರಣದಲ್ಲಿ ಗೋವಾದ ಪಣಜಿಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 2000 ರೂ ಸಾವಿರ ಮುಖಬೆಲೆಯ 67.98 ಲಕ್ಷರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. ಮಹಾರಾಷ್ಟ್ರ ಗೋವಾ ಗಡಿಯಲ್ಲಿರುವ ಬಾಂದ್ರಾ ನಿವಾಸಿಯೊಬ್ಬ ರಾತ್ರಿ 11.30ಕ್ಕೆ ಸ್ಕೂಟರ್​ನಲ್ಲಿ ಹಣ ಇಟ್ಟುಕೊಂಡು ನೋಟುಗಳ ಬದಲಾವಣೆಗೆ ಬಂದಿದ್ದ. ಮತ್ತೊಬ್ಬ ವ್ಯಕ್ತಿಯ ನಿರ್ದೇಶನದ ಮೇರೆಗೆ ಸ್ಕೂಟರ್​ನಲ್ಲಿ ಬಂದ ವ್ಯಕ್ತಿ ಹಣವನ್ನು ತೆಗೆದುಕೊಂಡು ಬಂದಿದ್ದ. ಈ ಪ್ರಕರಣದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸ್ವತಃ ತಾವೇ ನೋಟು ಬದಲಾವಣೆ ಕಾರ್ಯಾಚರಣೆಗೆ ಇಳಿದಿದ್ದರು. 20% ಕಮಿಷನ್ ಪಡೆಯಲು ಆಮಿಷ ಒಡ್ಡಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹಣವನ್ನು ವಶಕ್ಕೆ ಪಡೆಯಲು ಒಂದಿಡೀ ದಿನ ಕಾಯುವಂತಾಗಿತ್ತು.

Leave a Reply

Your email address will not be published. Required fields are marked *

Back To Top