Saturday, 16th December 2017  

Vijayavani

1. ಭಯೋತ್ಪಾದನೆಗೆ ಒತ್ತಡ ಆರೋಪ ವಿಚಾರ- ಆತ್ಮಹತ್ಯೆಗೆ ಯತ್ನಿಸಿದ ಯುವಕನ ಸ್ಥಿತಿ ಗಂಭೀರ- ಬಾಗಲಕೋಟೆ ಆಸ್ಪತ್ರೆಯಲ್ಲಿ ಮುಂದುವರಿದ ಚಿಕಿತ್ಸೆ 2. ಎಐಸಿಸಿ ಅಧ್ಯಕ್ಷರಾಗಿ ಇಂದು ರಾಹುಲ್​​​ ಅಧಿಕಾರ- ದೆಹಲಿ ಕಚೇರಿಯಲ್ಲಿ ಪದಗ್ರಹಣ ಕಾರ್ಯಕ್ರಮ- ರಾಹುಲ್​​​​ ಮುಂದಿದೆ ನೂರಾರು ಸವಾಲು 3. ಸುನಿಲ್​​ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ಪ್ರಕರಣ- ಇಂದು ಬೆಳಗೆರೆ ಜಾಮೀನು ಅರ್ಜಿ ವಿಚಾರಣೆ- ಇತ್ತ ಜಯದೇವದಲ್ಲಿ ಮುಂದುವರಿದ ಚಿಕಿತ್ಸೆ 4. ಕಲಬುರಗಿಯತ್ತ ಸಾಗಿದ ಸಿಎಂ ಸಾಧನ ಸಂಭ್ರಮ- ಜೇವರ್ಗಿಯಲ್ಲಿ ಹಲವು ಕಾಮಗಾರಿಗೆ ಚಾಲನೆ- ಸಿಎಂಗೆ ಹಲವು ಸಚಿವರಿಂದ ಸಾಥ್​​​ 5. ಸನ್ನಿ ನೈಟ್​​ಗೆ ಸರ್ಕಾರದ ಬ್ರೇಕ್​- ನಿರ್ಧಾರದ ವಿರುದ್ಧ ಪರ-ವಿರುದ್ಧ ಚರ್ಚೆ- ಸಚಿವರ ಕ್ರಮಕ್ಕೆ ಕೆಂಡಕಾರಿದ ಅಭಿಮಾನಿಗಳು
Breaking News :

3ಡಿ ಮೂಳೆ ಅಂಗಾಂಶ ಅಭಿವೃದ್ಧಿ

Thursday, 14.09.2017, 3:00 AM       No Comments

ಮುರಿತಕ್ಕೊಳಗಾದ ಅಥವಾ ಸಾಂದ್ರತೆ ಕಳೆದುಕೊಂಡು ಬಲಹೀನಗೊಂಡ ಮೂಳೆಗಳಿಗೆ ಪರ್ಯಾಯವಾಗಿ ಬಳಸಲಾಗುವ 3ಡಿ ಮೂಳೆ ಅಂಗಾಂಶವನ್ನು ಕೃತಕವಾಗಿ ಲ್ಯಾಬ್​ನಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಅಪಘಾತಕ್ಕೊಳಗಾದ ಮತ್ತು ಮೂಳೆಸಂಬಂಧಿ ಸಮಸ್ಯೆ ಹೊಂದಿರುವ ರೋಗಿಗಳಿಗೆ ಪ್ರಯೋಜನವಾಗಲಿದೆ. 3ಡಿ ಮೂಳೆ ಅಂಗಾಂಶವು ಬಲಹೀನಗೊಂಡ ಅಥವಾ ಮುರಿದ ಮೂಳೆಗೆ ಬಳಸುವ ಕುರಿತು ಇಂಗ್ಲೆಂಡಿನ ಗ್ಲಾಸ್ಗೋ ಯೂನಿವರ್ಸಿಟಿ ಮತ್ತು ಸ್ಟ್ರಾಥ್ಕ್ಲಿಡ್ ಯೂನಿವರ್ಸಿಟಿ ತಜ್ಞರು ಸಂಶೋಧನೆ ನಡೆಸಿದ್ದಾರೆ. ಅಪಘಾತದ ಸಂದರ್ಭದಲ್ಲಿ ಮೂಳೆ ಹೆಚ್ಚು ಹಾನಿಗೊಳ್ಳುತ್ತದೆ. ಅಂತಹ ಸಂದರ್ಭದಲ್ಲಿ ಬದಲಿ ವ್ಯವಸ್ಥೆಯ ಜತೆಗೆ ಶಸ್ತ್ರಚಿಕಿತ್ಸಾ ತಜ್ಞರು ದಾನಿಗಳಿಂದ ಪಡೆದ ಅಥವಾ ರೋಗಿಯ ಮೂಳೆಯಿಂದ ಪಡೆದ ಅಂಶವನ್ನು ಬಳಸಿ ಮಾದರಿ ಅಭಿವೃದ್ಧಿಪಡಿಸುತ್ತಾರೆ. ಆದರೆ ನ್ಯಾನೋಕಿಕಿಂಗ್ ತಂತ್ರಜ್ಞಾನ ಬಳಸಿ 3ಡಿ ಮೂಳೆ ಅಂಗಾಂಶ ಅಭಿವೃದ್ಧಿಯಿಂದ ಮೊದಲ ಬಾರಿಗೆ ಪ್ರಯೋಗಾಲಯದಲ್ಲಿ ಕೃತಕ ಎಲುಬನ್ನು ಅಭಿವೃದ್ಧಿಪಡಿಸಲಾಗಿದೆ. ಭವಿಷ್ಯದಲ್ಲಿ ಮೂಳೆ ಕಸಿ ಅಗತ್ಯವಿರುವ ರೋಗಿಗಳಿಗೆ 3ಡಿ ಮೂಳೆ ಅಂಗಾಂಶವನ್ನು ಜೋಡಿಸಿದರೆ, ಅದರಿಂದ ತೊಂದರೆಗೊಳಗಾದ ಮೂಳೆಯನ್ನು ಸರಿಪಡಿಸುವ ಅಥವಾ ಬದಲಿಸುವ ಸಾಧ್ಯತೆಯಿದೆ. ಎಲುಬಿನಲ್ಲಿರುವ ಅಸ್ತಿಮಜ್ಜೆಯನ್ನು ಮಾನವನ ದೇಹ ನೈಸರ್ಗಿಕವಾಗಿ ಉತ್ಪಾದಿಸುವುದರಿಂದ, ಅದು 3ಡಿ ಎಲುಬಿನೊಂದಿಗೆ ಸೇರಿಕೊಳ್ಳುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಈ ಕುರಿತು ನೇಚರ್ ಬಯೋಮೆಡಿಕಲ್ ಇಂಜಿನಿಯರಿಂಗ್ ಜರ್ನಲ್​ನಲ್ಲಿ ವರದಿ ಪ್ರಕಟವಾಗಿದೆ. -ಏಜೆನ್ಸೀಸ್

Leave a Reply

Your email address will not be published. Required fields are marked *

Back To Top