Sunday, 23rd July 2017  

Vijayavani

1. ಕೊಪ್ಪಳದ ಖೋಟಾನೋಟು ಪ್ರಕರಣಕ್ಕೆ ಹೊಸ ಟ್ವಿಸ್ಟ್​- ಐವರಲ್ಲಿ ಮೂವರು ಆರೋಪಿಗಳು ಅರೆಸ್ಟ್- ವೈಯಕ್ತಿಕ ದ್ವೇಷಕ್ಕೆ ಬಲಿಯಾಗಿದ್ದ ಉಪನ್ಯಾಸಕ 2. ಮಳೆಗೆ ಹಾರಂಗಿ ಜಲಾಶಯ ಬಹುತೇಕ ಭರ್ತಿ- ಡ್ಯಾಂನಿಂದ 1,200 ಕ್ಯೂಸೆಕ್ ನೀರು ಬಿಡುಗಡೆ- ನದಿಪಾತ್ರದ ಜನರಿಗೆ ಎಚ್ಚರದಿಂದಿರಲು ಸೂಚನೆ 3. ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿಶ್ವಕರ್ಮ ಸಮಾವೇಶ- ಸಮುದಾಯದಿಂದ ಬಿಎಸ್​ವೈಗೆ ಸನ್ಮಾನ- ಬಿಜೆಪಿ ಹಲವು ಮುಖಂಡರು ಹಾಜರ್‌ 4. ಕಾಂಗ್ರೆಸ್​ ಕದ ತಟ್ಟಿದ ಜೆಡಿಎಸ್​ ರೆಬೆಲ್ಸ್​- ಇನ್ನೆರಡು ತಿಂಗಳಲ್ಲಿ ಸೇರ್ಪಡೆ ಖಚಿತ- ಇನ್ನೂ ಏಳು ಜನ ಬರ್ತಾರೆಂದು ಜಮೀರ್​ ಬಾಂಬ್​ 5. ವನಿತೆಯರ ವಿಶ್ವಕಪ್‌ನಲ್ಲಿ ಇಂಡೋ- ಇಂಗ್ಲೆಂಡ್‌ ಫೈಟ್- ಟಾಸ್‌ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ- ಟೀಂ ಇಂಡಿಯಾಗೆ ದೇಶ ಜನರಿಂದ ಆಲ್​ ದ ಬೆಸ್ಟ್​
Breaking News :

27ರಂದು ಬಿಜೆಪಿ ಅತೃಪ್ತರ ಸಭೆ

Friday, 21.04.2017, 3:00 AM       No Comments

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಮುಸುಕಿನ ಗುದ್ದಾಟ ಮತ್ತೆ ಬಯಲಿಗೆ ಬಂದಿದ್ದು, ಏ.27ಕ್ಕೆ ಬೆಂಗಳೂರಿನಲ್ಲಿ ಅತೃಪ್ತ ಮುಖಂಡರ ಸಭೆ ನಡೆಸುವುದಾಗಿ ವಿಧಾನ ಪರಿಷತ್​ನ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ರಾಜ್ಯ ಘಟಕದಲ್ಲಿ ಉಂಟಾಗಿರುವ ಭಿನ್ನಮತ ಶಮನ ಹಾಗೂ ಪದಾಧಿಕಾರಿಗಳ ಪಟ್ಟಿಯನ್ನು ಫೆ.10ರೊಳಗೆ ಬದಲಾವಣೆ ಮಾಡಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ನಾಲ್ವರ ಸಮಿತಿ ರಚನೆ ಮಾಡಿದ್ದರು. ಆದರೆ, ಆ ಸಮಿತಿ ಇನ್ನೂ ಸಭೆ ನಡೆಸಿಲ್ಲ ಎಂದು ಬಿ.ಎಸ್. ಯಡಿಯೂರಪ್ಪ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಅಶಿಸ್ತಿನಿಂದ ಕೂಡಿದ ಪಕ್ಷ, ಮುಂದಿನ ಸಿಎಂ ಅಭ್ಯರ್ಥಿಯನ್ನು ಶಾಸಕಾಂಗ ಪಕ್ಷ ನಿರ್ಧರಿಸುತ್ತದೆ ಎಂಬ ಮಾತನ್ನು ದಿಗ್ವಿಜಯ್ ಸಿಂಗ್ ಹೇಳಿದರೆ, ಸಿದ್ದರಾಮಯ್ಯ ನಾನೇ ಮುಂದಿನ ಮುಖ್ಯಮಂತ್ರಿ ಎನ್ನುತ್ತಾರೆ. ಆದರೆ, ನಮ್ಮ ಪಕ್ಷದಲ್ಲಿ ವರಿಷ್ಠರು ಯಡಿಯೂರಪ್ಪರನ್ನು ಘೋಷಣೆ ಮಾಡಿದ ಕೂಡಲೇ ನಾವ್ಯಾರು ವಿರೋಧ ಮಾಡಲಿಲ್ಲ ಎಂದರು.

ಪ್ರತಿಕ್ರಿಯೆಗೆ ನಕಾರ: ನಂಜನಗೂಡು, ಗುಂಡ್ಲುಪೇಟೆ ಕ್ಷೇತ್ರಗಳ ಉಪ ಚುನಾವಣೆ ಸೋಲಿನ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಏ.23ರಂದು ಪಕ್ಷದ ರಾಜ್ಯಾಧ್ಯಕ್ಷರು ಸಭೆ ಕರೆದಿದ್ದಾರೆ, ಅಲ್ಲಿ ಎಲ್ಲ ವಿಚಾರ ಚರ್ಚೆ ನಡೆಸುತ್ತೇವೆ ಎಂದರು.

ಬ್ರಿಗೇಡ್​ಗೆ ಚುರುಕು: ರಾಜ್ಯದಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡನ್ನು ಇನ್ನಷ್ಟು ಬಲಗೊಳಿಸಲು ನಿರ್ಧರಿಸಿದ್ದು, ಅದಕ್ಕೆ ಪೂರಕವಾಗಿ ಕಾರ್ಯಕ್ರಮ ರೂಪಿಸಲಾಗಿದೆ. ಮೇ 8ರಂದು ರಾಯಚೂರಿನಲ್ಲಿ ಅಭ್ಯಾಸವರ್ಗ, ಜೂ.18ಕ್ಕೆ ಮೈಸೂರಿನಲ್ಲಿ ಪದಾಧಿಕಾರಿಗಳ ಸಮಾವೇಶ ನಡೆಸಲಾಗುತ್ತಿದೆ ಎಂದು ಈಶ್ವರಪ್ಪ ತಿಳಿಸಿದರು.

ದೂರು ನೀಡಲು ನಿರ್ಧಾರ

ಬಿಜೆಪಿ ಪದಾಧಿಕಾರಿಗಳ ಪಟ್ಟಿ ಬದಲಾವಣೆ ಸಂಬಂಧ ಹೈಕಮಾಂಡ್​ಗೆ ಮತ್ತೊಮ್ಮೆ ಮೊರೆ ಹೋಗಲು ಅತೃಪ್ತ ನಾಯಕರು ನಿರ್ಣಯಿಸಿದ್ದಾರೆ. ಏ.27ರಂದು ಇನ್ನೊಂದು ಸಭೆ ನಡೆಸಿ ಬಳಿಕ ವರಿಷ್ಠರಿಗೆ ದೂರು ನೀಡಲು ಬುಧವಾರ ನಡೆದ ಸಭೆಯಲ್ಲಿ ತೀರ್ವನಿಸಲಾಗಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

4 × 2 =

Back To Top