Wednesday, 18th October 2017  

Vijayavani

1. ರಾತ್ರಿ ಹಾಕಿದ ಟಾರು ಬೆಳಗ್ಗೆ ಕಿತ್ತುಬಂತು- ಸರ್ಕಾರದಿಂದ ಕಾಟಾಚಾರದ ಗುಂಡಿ ಮುಚ್ಚೋಕಾರ್ಯ- ಕೋಟ್ಯಾಂತರ ರೂಪಾಯಿ ನೀರಲ್ಲಿ ಹೋಮ 2. ಬರಿಗೈಯಲ್ಲಿ ಕಾರ್ಮಿಕನಿಂದ ಮಾನ್​ಹೋಲ್​ ಸ್ವಚ್ಛತೆ- ಸುರಕ್ಷಾ ಸಾಧನ ನೀಡಿದ ಮಹಾನಗರ ಪಾಲಿಕೆ- ಮಂಗಳೂರಿನಲ್ಲಿ ಅಮಾನವೀಯ ಘಟನೆ 3. ಪರಿಸರ ಉಳಿಸಿ, ಪಟಾಕಿ ತ್ಯಜಿಸಿ ಅಭಿಯಾನಕ್ಕೆ ಆಕ್ಷೇಪ- ವರ್ತಕರೊಂದಿಗೆ ಪರಿಸರ ಪ್ರೇಮಿಗಳ ವಾಗ್ವಾದ- ಮೈಸೂರಿನಲ್ಲಿ ಪಟಾಕಿ ಜಟಾಪಟಿ 4. ಅನೈತಿಕ ಸಂಬಂಧ ತಿಳಿದು ಗಂಡ ಬಿಟ್ಟ- ಪ್ರಿಯಕರನಿಗಾಗಿ ಮಗಳಿಗೆ ಕೊಟ್ಲು ಕಾಟ- ಗಂಗಾವತಿಯ ಹಿರೇಜಂತಕಲ್​ನಲ್ಲಿ ಕ್ರೂರಿ ತಾಯಿ 5. ನೋಟ್​ಬ್ಯಾನ್​ ವಿಚಾರದಲ್ಲಿ ಕಮಲ್​ ಉಲ್ಟಾ- ಬೆಂಬಲ ವ್ಯಕ್ತಪಡಿಸಿದ್ದಕ್ಕೆ ಕ್ಷಮೆಯಾಚನೆ- ಇದು ಕಮಲ್​ ಹೊಸ ರಾಜಕೀಯ ಆಟ
Breaking News :

25 ಸಾವಿರ ಪೊಲೀಸರಿಗೆ ಹಿಂಬಡ್ತಿಯ ತೂಗುಗತ್ತಿ

Saturday, 20.05.2017, 3:04 AM       No Comments

| ಕೀರ್ತಿನಾರಾಯಣ ಸಿ.

ಬೆಂಗಳೂರು: ಬಡ್ತಿಯಲ್ಲಿ ಮೀಸಲಾತಿ ನೀಡುವ ಕಾಯ್ದೆ ಯನ್ನು ಸುಪ್ರೀಂಕೋರ್ಟ್ ರದ್ದುಪಡಿಸಿರುವ ಹಿನ್ನೆಲೆಯಲ್ಲಿ ಮುಖ್ಯಪೇದೆಯಿಂದ ಡಿವೈಎಸ್ಪಿ ಹಂತದವರೆಗೆ ರಾಜ್ಯದ ಅಂದಾಜು 25 ಸಾವಿರ ಪೊಲೀಸರಿಗೆ ಹಿಂಬಡ್ತಿ ಆತಂಕ ಎದುರಾಗಿದೆ. ಬಡ್ತಿಯಿಂದಾಗಿ ಇನ್​ಸ್ಪೆಕ್ಟರ್ ಹಾಗೂ ಡಿವೈಎಸ್ಪಿ ಹುದ್ದೆಗೇರಿ ದ್ದವರೀಗ ಎಸ್ಸೈ, ಎಎಸ್ಸೈ ಹುದ್ದೆಗೆ ಬಂದು ಕರ್ತವ್ಯ ನಿರ್ವಹಿಸಬೇಕಾದ ಸ್ಥಿತಿ ನಿರ್ವಣವಾಗಲಿದೆ. ಸುಪ್ರೀಂಕೋರ್ಟ್ ಆದೇಶದ ಪ್ರಕಾರ 1978ರ ನಂತರ ಇದುವರೆಗೆ ಮೀಸಲಾತಿ ಅನ್ವಯ ಬಡ್ತಿ ಪಡೆದಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಿಬ್ಬಂದಿ, ಅಧಿಕಾರಿಗಳಿಗೆ ಹಿಂಬಡ್ತಿ ಆಗಲಿದೆ.

ಹೆಡ್ ಕಾನ್ಸ್​ಟೆಬಲ್​ಗಳಿಂದ ಡಿವೈಎಸ್ಪಿವರೆಗೆ ಎಲ್ಲರೂ ಈ ನಿಯಮದ ವ್ಯಾಪ್ತಿಗೆ ಒಳಪಡಲಿದ್ದಾರೆ. 1978ರಿಂದ 2017ರ ಮಾರ್ಚ್ ಅಂತ್ಯದವರೆಗೆ ಇಲಾಖೆಯಲ್ಲಿ ಬಡ್ತಿ ಪಡೆದಿರುವವರ ಮಾಹಿತಿ ಒದಗಿಸುವಂತೆ ನೇಮಕಾತಿ ಮತ್ತು ತರಬೇತಿ ವಿಭಾಗ ಹಾಗೂ ಆಯಾ ಜಿಲ್ಲಾ ಎಸ್ಪಿ ಕಚೇರಿಗಳಿಗೆ ಪೊಲೀಸ್ ಮಹಾನಿರ್ದೇಶಕ ಆರ್.ಕೆ.ದತ್ತ ನಿರ್ದೇಶನ ನೀಡಿದ್ದಾರೆ. 10-15 ದಿನದಲ್ಲಿ ಹಿಂಬಡ್ತಿ ಪಡೆಯುವ ಸಿಬ್ಬಂದಿ ಮತ್ತು ಅಧಿಕಾರಿಗಳ ಸ್ಪಷ್ಟ ಸಂಖ್ಯೆ ಲಭ್ಯವಾಗಲಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಯಾರ್ಯಾರಿಗೆ ಸಂಕಷ್ಟ?: ಪ್ರಸ್ತುತ ಇಲಾಖೆಯಲ್ಲಿ 80,697 ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಾಹಿತಿ ಪ್ರಕಾರ 1978ರಿಂದ ಒಟ್ಟಾರೆ ಸಿಬ್ಬಂದಿಯಲ್ಲಿ ಶೇ.35 ಸಿಬ್ಬಂದಿಗೆ ಹಿಂಬಡ್ತಿ ಆಗಲಿದೆ. ಇದರಲ್ಲಿ ಶೇ.10 ಸಿಬ್ಬಂದಿ ಈಗಾಗಲೇ ನಿವೃತ್ತಿಯಾಗಿದ್ದಾರೆ. ಕೋರ್ಟ್ ವಿನಾಯಿತಿ ನೀಡಿರುವ ಹಿನ್ನೆಲೆಯಲ್ಲಿ ನಿವೃತ್ತಿ ಹೊಂದಿರುವವರು ಆತಂಕಪಡುವ ಅಗತ್ಯವಿಲ್ಲ. ಆದರೆ, ಹಾಲಿ ಕೆಲಸ ಮಾಡುತ್ತಿರುವ ಶೇ.25 ಮಂದಿ ಮೇಲೆ ಹಿಂಬಡ್ತಿ ತೂಗುಗತ್ತಿ ನೇತಾಡುತ್ತಿದೆ. ಮೀಸಲಾತಿ ರದ್ದುಪಡಿಸಿ ಹಿಂಬಡ್ತಿ ನೀಡಿದವರಿಗೆ ಜ್ಯೇಷ್ಠತೆ ಆಧಾರದ ಮೇಲೆ ಬಡ್ತಿ ಹುದ್ದೆ ಸಿಗಲಿದೆ.

ಹಾಲಿ ಬಡ್ತಿ ಪ್ರಕ್ರಿಯೆ ಸ್ಥಗಿತ: 1998 ಬ್ಯಾಚ್​ನ ಇನ್​ಸ್ಪೆಕ್ಟರ್​ಗಳು ಡಿವೈಎಸ್ಪಿ ಹುದ್ದೆಗೆ, 2007ನೇ ಬ್ಯಾಚ್​ನ ಎಸ್ಸೈಗಳು ಇನ್​ಸ್ಪೆಕ್ಟರ್ ಹುದ್ದೆಗೆ,1984-85ನೇ ಬ್ಯಾಚ್​ನ ಡಿವೈಎಸ್ಪಿಗಳು ಹೆಚ್ಚುವರಿ ಡಿವೈಎಸ್ಪಿ ಹುದ್ದೆ, ಕಾನ್ಸ್​ಟೆಬಲ್​ನಿಂದ ಮುಖ್ಯಪೇದೆ ಹುದ್ದೆಗೆ, ಮುಖ್ಯಪೇದೆ ಹುದ್ದೆಯಿಂದ ಎಎಸ್ಸೈ ಹುದ್ದೆಗೆ ಹಾಗೂ ಎಎಸ್ಸೈ ಹುದ್ದೆಯಿಂದ ಎಸ್ಸೈ ಹುದ್ದೆಗೆ ಬಡ್ತಿ ಪಡೆಯಲು ಸಾವಿರಾರು ಸಿಬ್ಬಂದಿ ಕಾಯುತ್ತಿದ್ದಾರೆ. ಆದರೆ, ಎಸ್ಸಿ-ಎಸ್ಟಿ ಮೀಸಲಾತಿ ಬಡ್ತಿ ಕಾಯ್ದೆ ರದ್ದತಿ ಹಿನ್ನೆಲೆಯಲ್ಲಿ ಹಾಲಿ ಬಡ್ತಿ ಪ್ರಕ್ರಿಯೆ ಸ್ಥಗಿತವಾಗಿದೆ.

ಎಸ್ಸಿ-ಎಸ್ಟಿ ಮೀಸಲಾತಿ ಕಾಯ್ದೆ ಅನ್ವಯ ಬಡ್ತಿ ಪಡೆದಿರುವ ಸಿಬ್ಬಂದಿ ಪಟ್ಟಿ ನೀಡುವಂತೆ ಕೇಳಲಾಗಿದೆ. ಪಟ್ಟಿ ಬಂದ ಬಳಿಕ ಸರ್ಕಾರದ ಸೂಚನೆಯಂತೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ. 30 ವರ್ಷಕ್ಕೂ ಹೆಚ್ಚಿನ ಅವಧಿಯಲ್ಲಿ ನಡೆದಿರುವ ಬಡ್ತಿ ವಿವರ ಕಲೆ ಹಾಕಬೇಕಿದೆ.

| ಕಮಲ್ ಪಂತ್ ರಾಜ್ಯ ಎಡಿಜಿಪಿ (ಆಡಳಿತ ವಿಭಾಗ)

ಸುಪ್ರೀಂಕೋರ್ಟ್ ಆದೇಶವೇನು?

ಬಡ್ತಿಯಲ್ಲಿ ಮೀಸಲಾತಿ ನೀಡುತ್ತಿರುವ ಸರ್ಕಾರದ ಕ್ರಮ ಪ್ರಶ್ನಿಸಿ ಸರ್ಕಾರಿ ಅಧಿಕಾರಿ ಬಿ.ಕೆ.ಪವಿತ್ರಾ ಎಂಬುವರು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ನೇಮಕಾತಿಯಲ್ಲಿ ಮಾತ್ರ ಮೀಸಲಾತಿಗೆ ಅವಕಾಶವಿದೆ. ಬಡ್ತಿಯಲ್ಲಿ ಇಲ್ಲ ಎಂದು ವಾದಿಸಿದ್ದರು. ಇದನ್ನು ಪರಿಗಣಿಸಿದ ಸುಪ್ರೀಂಕೋರ್ಟ್, ಎಸ್ಸಿ-ಎಸ್ಟಿ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ಒದಗಿಸುವ ಕಾಯ್ದೆಯನ್ನು ರದ್ದುಪಡಿಸಿ ಫೆ.9ರಂದು ಆದೇಶಿಸಿತ್ತು. ಮೀಸಲಾತಿ ಆಧಾರದ ಮೇಲೆ ಬಡ್ತಿ ಪಡೆದವರಿಗೆ 3 ತಿಂಗಳಲ್ಲಿ ಹಿಂಬಡ್ತಿ ನೀಡಬೇಕು ಎಂದೂ ಸೂಚಿಸಿತ್ತು. ರಾಜ್ಯ ಸರ್ಕಾರ ಆದೇಶವನ್ನು ಮರುಪರಿಶೀಲಿಸುವಂತೆ ಅರ್ಜಿ ಸಲ್ಲಿಸಿದೆ.

ಮುಂಬಡ್ತಿ ಹೀಗಿರುತ್ತೆ

ಕಾನ್ಸ್​ಟೆಬಲ್-ಹೆಡ್​ಕಾನ್ಸ್ ಟೆಬಲ್-ಎಎಸ್ಸೈ-ಎಸ್ಸೈ ಎಸ್ಸೈ-ಇನ್​ಸ್ಪೆಕ್ಟರ್-ಡಿವೈಎಸ್ಪಿ-ಹೆಚ್ಚುವರಿ ಎಸ್ಪಿ

ಹಿಂಬಡ್ತಿ ಹೀಗಾಗುತ್ತೆ

ಇನ್​ಸ್ಪೆಕ್ಟರ್ ಹುದ್ದೆಯಲ್ಲಿರುವವರು ವಾಪಸ್ ಹೆಡ್ ಕಾನ್ಸ್​ಟೆಬಲ್ ಅಥವಾ ಎಎಸ್ಸೈ ಹುದ್ದೆಗೆ ಡಿವೈಎಸ್ಪಿ ಹುದ್ದೆಯಲ್ಲಿರುವವರು ಎಸ್ಸೈ ಅಥವಾ ಇನ್​ಸ್ಪೆಕ್ಟರ್ ಹುದ್ದೆಗೆ ವಾಪಸ್ಸಾಗಲಿದ್ದಾರೆ.

Leave a Reply

Your email address will not be published. Required fields are marked *

Back To Top