Wednesday, 20th June 2018  

Vijayavani

ಐಟಿ ದೂರಿನಲ್ಲಿದೆ ಸ್ಫೋಟಕ ಮಾಹಿತಿ - ಎಐಸಿಸಿಗೆ ಕೋಟಿ ಕೋಟಿ ಕೊಟ್ಟಿದ್ರಾ ಡಿಕೆಶಿ - ಹವಾಲಾ ವ್ಯವಹಾರದಲ್ಲಿ ಡಿಕೆಶಿ ಹೆಸರು        ಉಪ್ಪು-ಹುಳಿ, ಖಾರ ಇಲ್ಲದ ಊಟ - ನಾನ್​ ವೆಜ್​​ನಿಂದ ದೂರ ದೂರ - ಪ್ರಕೃತಿ ಚಿಕಿತ್ಸಾಲಯದಲ್ಲಿ ಸಿದ್ದು ಫುಲ್ ಸಸ್ಯಹಾರಿ        ಕಾಶ್ಮೀರದಲ್ಲಿ ಯೋಧನ ಕಿಡ್ನಾಪ್​​​, ಹತ್ಯೆ ಪ್ರಕರಣ - ಮೃತನ ಮನೆಗೆ ರಕ್ಷಣಾ ಸಚಿವ ಭೇಟಿ - ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ನಿರ್ಮಲಾ ಸೀತಾರಾಮನ್​​        ರೈತ ಎಂದರೆ, ರಕ್ತ, ಬೆವರು ಸುರಿಸುವ ಅನ್ನದಾತ - ದೇಶದ ಅಭಿವೃದ್ಧಿಗೆ ದೇಶದ ರೈತರ ಕೊಡುಗೆ ಆಪಾರ - ರೈತರ ಜತೆ ಪ್ರಧಾನಿ ಮೋದಿ ಸಂವಾದ        ಬಿಸಿಲು ಬರೋವರೆಗೂ ಬಯಲಲ್ಲೇ ಪಾಠ - ಕುಸಿಯುತ್ತಿರೋ ಶಾಲೆಯಲ್ಲೇ ವಿದ್ಯಾರ್ಥಿಗಳ ನರಳಾಟ - ದಾವಣಗೆರೆಯ ಸರ್ಕಾರಿ ಶಾಲೆಗೆ ಬೇಕಿದೆ ಕಾಯಕಲ್ಪ        ಕಣಿವೆ ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ಹಿನ್ನೆಲೆ - ಮೈತ್ರಿ ಮುರಿದ ಬೆನ್ನಲ್ಲೇ ರಾಜ್ಯಪಾಲರ ಆಡಳಿತ ಜಾರಿ- ಮಧ್ಯಾಹ್ನ 2:30ಕ್ಕೆ ಅಧಿಕಾರಿಗಳ ಸಭೆ ಕರೆದ ಗವರ್ನರ್       
Breaking News

25 ಸಾವಿರ ಕ್ವಿಂಟಾಲ್ ಪಡಿತರ ಹುಳುಪಾಲು

Saturday, 06.01.2018, 3:05 AM       No Comments

|ಹರೀಶ ಬೇಲೂರು

ಬೆಂಗಳೂರು: ದೇಶಾದ್ಯಂತ ಹೊತ್ತಿನ ಊಟಕ್ಕೂ ಗತಿಯಿಲ್ಲದ ಸಾವಿರಾರು ಜೀವಗಳು ನೀರು ಕುಡಿದು ಹೊಟ್ಟೆ ತುಂಬಿಸಿಕೊಳ್ಳುವ ಪರಿಸ್ಥಿತಿ ಇರುವಾಗ 12 ಕೋಟಿ ರೂ.ಮೌಲ್ಯದ 25 ಸಾವಿರ ಕ್ವಿಂಟಾಲ್​ಗೂ ಅಧಿಕ ಆಹಾರ ಹುಳುಹಿಡಿದಿದೆ. ಆಹಾರ ಇಲಾಖೆಯ ನಿರ್ಲಕ್ಷ್ಯ ನಡೆಯಿಂದಾಗಿ ಹುಳು ಹಿಡಿದಿರುವ ಈ ಆಹಾರ ಧಾನ್ಯವೀಗ ವಿಲೇವಾರಿಗಾಗಿ ಕಾದು ಕುಳಿತಿದೆ.

ಹೀಗಾಗಲು ಕಾರಣವೇನು?
ಕಳೆದ ವರ್ಷ ಜುಲೈನಲ್ಲಿ ರಾಜ್ಯ ಸರ್ಕಾರ ಪ್ರತಿ ಪಡಿತರದಾರರಿಗೆ ನೀಡುತ್ತಿದ್ದ 5 ಕೆ.ಜಿ ಅಕ್ಕಿ ಪ್ರಮಾಣವನ್ನು 7 ಕೆ.ಜಿಗೆ ಏರಿಸಿತು. ಈ ವೇಳೆ ದಾಸ್ತಾನು ಮಾಡಿಟ್ಟಿದ್ದ ಗೋಧಿ, ರಾಗಿ, ಸಕ್ಕರೆ, ಉಪ್ಪು, ತಾಳೆ ಎಣ್ಣೆ ಮತ್ತು ಹೆಸರು ಕಾಳುಗಳು ವಿತರಣೆಯಾಗುವಂತೆ ನೋಡಿಕೊಳ್ಳಲಿಲ್ಲ. ಹೀಗಾಗಿ ಗೋದಾಮುಗಳಲ್ಲೇ ಕೊಳೆತಿದೆ.

ಯಾವುದು, ಎಷ್ಟು ಹಾಳು?
ರಾಜ್ಯಾದ್ಯಂತ ಸಂಗ್ರಹಿಸಲಾಗಿದ್ದ 35,831.30 ಕ್ವಿಂಟಾಲ್ ಗೋಧಿಯಲ್ಲಿ 20917 ಕ್ವಿಂಟಾಲ್ ಹಾಳಾಗಿದೆ. ಉಳಿದ 14,913 ಕ್ವಿಂಟಾಲ್ ಅಷ್ಟೇ ಬಳಸಲು ಯೋಗ್ಯವಾಗಿದೆ. ಒಟ್ಟು 21582 ಕ್ವಿಂಟಾಲ್ ರಾಗಿ ಸಂಗ್ರಹಿಸಲಾಗಿದ್ದು, ಇದರಲ್ಲಿ 2534 ಕ್ವಿಂಟಾಲ್ ಹಾಳಾಗಿದೆ. 19045 ಕ್ವಿಂಟಾಲ್ ರಾಗಿ ಬಳಸಲು ಯೋಗ್ಯವಾಗಿದೆ. 1575 ಕ್ವಿಂಟಾಲ್ ಸಕ್ಕರೆ ದಾಸ್ತಾನು ಮಾಡಲಾಗಿತ್ತು. ಇದರಲ್ಲಿ 642 ಕ್ವಿಂಟಾಲ್ ಹಾಳಾಗಿದ್ದು, ಉಳಿದ 933 ಕ್ವಿಂಟಾಲ್ ಬಳಸಲು ಯೋಗ್ಯವಾಗಿದೆ. 2884 ಕ್ವಿಂಟಾಲ್ ಉಪು್ಪ ಸಂಗ್ರಹಿಸಲಾಗಿತ್ತು. ಇದರಲ್ಲಿ 691 ಕ್ವಿಂಟಾಲ್ ಹಾಳಾಗಿದ್ದು, ಉಳಿದ 2192 ಕ್ವಿಂಟಾಲ್ ಬಳಸಬಹುದಾಗಿದೆ. 1.55 ಲಕ್ಷ ಲೀಟರ್ ತಾಳೆ ಎಣ್ಣೆ ಸಂಗ್ರಹಿಸಿಡಲಾಗಿತ್ತು. ಇದರಲ್ಲಿ 1.8 ಲಕ್ಷ ಲೀಟರ್ ಎಣ್ಣೆ ಹಾಳಾಗಿದ್ದು, ಉಳಿದ 46,981 ಲೀಟರ್ ಎಣ್ಣೆ ಬಳಸಬಹುದಾಗಿದೆ. ಅದೇ ರೀತಿ 2612 ಕ್ವಿಂಟಾಲ್ ಹೆಸರು ಕಾಳು ದಾಸ್ತಾನು ಮಾಡಲಾಗಿತ್ತು. ಇದರಲ್ಲಿ 1589 ಕ್ವಿಂಟಾಲ್ ಹಾಳಾಗಿದ್ದು ಉಳಿದ 1022 ಕ್ವಿಂಟಾಲ್ ಬಳಸಲು ಯೋಗ್ಯವಾಗಿದೆ.

ಹಾಳಾದ ಧಾನ್ಯದ ಗತಿ ಏನು?
12 ಕೋಟಿ ರೂ. ಮೌಲ್ಯದ ಪಡಿತರ ಧಾನ್ಯಗಳಾದ ಗೋಧಿ, ರಾಗಿ, ಸಕ್ಕರೆ, ಉಪ್ಪು, ತಾಳೆ ಎಣ್ಣೆ ಮತ್ತು ಹೆಸರು ಕಾಳುಗಳಿಗೆ ಹುಳು ಹಿಡಿದು ಕೊಳೆತಿರುವುದರಿಂದ ಪಶುಗಳ ಬಳಕೆಗೂ ಸಾಧ್ಯವಿಲ್ಲ ಎಂದು ಆಹಾರ ಸುರಕ್ಷತಾ ಪ್ರಯೋಗಾಲಯ ವರದಿ ಕೊಟ್ಟಿದೆ. ಹೀಗಾಗಿ ಬೇರೆ ದಾರಿಯಿಲ್ಲದೆ ಕೊಳೆತ ಧಾನ್ಯಗಳಿಗೆ ಬೆಂಕಿ ಹಾಕಿ ನಾಶ ಮಾಡಬೇಕಿದೆ.

ಅನ್ನಭಾಗ್ಯ ಯೋಜನೆಯಡಿ ವಿತರಣೆ
ಅನ್ನಭಾಗ್ಯ ಯೋಜನೆಯಡಿ ಈ ಪಡಿತರ ವಿತರಣೆ ಮಾಡಲಾಗುತ್ತದೆ. ಕೇಂದ್ರ ಸರ್ಕಾರ ಬೇರೆಯವರಿಂದ ಪ್ರತಿ ಕೆ.ಜಿ. ಗೋಧಿ ಹಾಗೂ ಅಕ್ಕಿಯನ್ನು 30 ರಿಂದ 35 ರೂ. ಗೆ ಖರೀದಿಸುತ್ತದೆ. ರಾಜ್ಯಕ್ಕೆ 2 ರೂ.ಗೆ ಗೋಧಿ ಹಾಗೂ 3 ರೂ.ಗೆ ಅಕ್ಕಿ ನೀಡುತ್ತಿದೆ. ಪ್ರತಿ ತಿಂಗಳು 2.17 ಲಕ್ಷ ಮೆಟ್ರಿಕ್ ಟನ್ ಗೋಧಿ ಮತ್ತು ಅಕ್ಕಿಯನ್ನು ನೀಡುತ್ತಿದೆ.
 
ಯಾವ ಧಾನ್ಯ, ಹೇಗೆ ಹಾಳಾಗಿದೆ?
2016ರ ಜುಲೈನಿಂದ ದಾಸ್ತಾನು ಮಾಡಿಡಲಾಗಿರುವ ಗೋಧಿ ಮತ್ತು ಹೆಸರುಕಾಳುಗಳಿಗೆ ಪೂರ್ಣ ಪ್ರಮಾಣದಲ್ಲಿ ಹುಳ ಬಿದ್ದಿದ್ದು, ಬಳಸಲು ಸಾಧ್ಯವಿಲ್ಲ. ಸಕ್ಕರೆ ಮತ್ತು ಉಪ್ಪು ಸ್ಥಳದಲ್ಲೇ ಕರಗಿ ಬೂಸ್ಟ್ ಹಿಡಿದಿದೆ. ತಾಳೆ ಎಣ್ಣೆ ಅವಧಿ ಮೀರಿದ್ದು, ರಾಗಿ ಮಸುಕು ಬಣ್ಣಕ್ಕೆ ತಿರುಗಿರುವುದರಿಂದ ಬಳಸಲು ಯೋಗ್ಯವಾಗಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಬಡವರ ಗೋಧಿಗೆ ಕೊಳೆವ ಭಾಗ್ಯ’ ಶೀರ್ಷಿಕೆಯಡಿ ರಾಜ್ಯಾದ್ಯಂತ ರಿಯಾಲಿಟಿ ಚೆಕ್ ನಡೆಸಿ ದಾಸ್ತಾನು ಪಡಿತರಕ್ಕೆ ಹುಳು ಬಿದ್ದಿರುವುದನ್ನು ವಿಜಯವಾಣಿ ಅಂಕಿಅಂಶ ಸಮೇತ (2017ರ ಅ.24ರಂದು)ಬಯಲಿಗೆಳೆದ ಬಳಿಕ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಪ್ರಕರಣದ ಸಮಗ್ರ ತನಿಖೆಗೆ ಆದೇಶಿಸಿದ್ದರು. ವಿತರಣೆಯಾಗದೆ ಉಳಿದ ಪಡಿತರವೆಷ್ಟು, ಅದರಲ್ಲಿ ಬಳಕೆಗೆ ಯೋಗ್ಯವಲ್ಲದ ಪಡಿತರ ಎಷ್ಟೆಂಬ ವಿವರವನ್ನು ಆಯಾ ಜಿಲ್ಲೆಗಳಿಂದಲೇ ಕೇಳಲಾಗಿತ್ತು. 3 ಜಿಲ್ಲೆ ಹೊರತುಪಡಿಸಿ 27 ಜಿಲ್ಲೆಗಳಿಂದ ಬಂದ ವರದಿಯಲ್ಲಿ ಈ ಅಧ್ವಾನ ಸ್ಥಿತಿ ಬಯಲಾಗಿದೆ.


ಹುಳ ಹಿಡಿದ ಗೋಧಿ ಮತ್ತೆ ವಿತರಣೆ

<< ‘ವಿಜಯವಾಣಿ ರಿಯಾಲಿಟಿ’ ಚೆಕ್​ನಲ್ಲಿ ಬೆಳಕಿಗೆ ಬಂದ ಪ್ರಕರಣ >>

ಬಂಕಾಪುರ: ಸರ್ಕಾರ ಕೊಟ್ಟ ಪಡಿತರ ಧಾನ್ಯಗಳನ್ನು ತೂರಿ, ಸ್ವಚ್ಛಗೊಳಿಸಿ ತಿನ್ನುವಂತಾಗಿದೆ. ಗೋದಾಮಿನಲ್ಲಿ ಹುಳ ಹಿಡಿದು ಹಾಳಾದ ಗೋಧಿಯನ್ನೇ ಮತ್ತೆ ವಿತರಿಸಲಾಗಿದೆ ಎಂದು ಫಲಾನುಭವಿಗಳು ಆರೋಪಿಸಿದ್ದಾರೆ.

ಅನ್ನಭಾಗ್ಯ ಯೋಜನೆಯಡಿ ತಾಲೂಕಿನ ಬಡ ಕುಟುಂಬಗಳಿಗೆ ಡಿಸೆಂಬರ್ ತಿಂಗಳ ಪಡಿತರದಲ್ಲಿ ಈ ಹಿಂದೆ ಬೂಸ್ಟ್ ಬಂದು, ಹುಳ ಬಿದ್ದು ಹಾಳಾಗಿದ್ದ ಕ್ವಿಂಟಾಲ್ ಗೋಧಿಯನ್ನು ಬೆರೆಸಿ ವಿತರಿಸಲಾಗಿದೆ. ಶಿಗ್ಗಾಂವಿ ತಾಲೂಕು ಪಡಿತರ ಧಾನ್ಯಗಳ ಸಗಟು ಮಳಿಗೆ ಗೋದಾಮಿನಲ್ಲಿ ಅನ್ನಭಾಗ್ಯ ಯೋಜನೆಯ ಸುಮಾರು 416 ಕ್ವಿಂಟಾಲ್ ಗೋಧಿ ವಿತರಣೆಯಾಗದೆ, ಹುಳು ಹಿಡಿದಿರುವ ಕುರಿತು ‘ವಿಜಯವಾಣಿ ರಿಯಾಲಿಟಿ’ ಚೆಕ್​ನಲ್ಲಿ ಬೆಳಕಿಗೆ ಬಂದಿತ್ತು. ಇದಾದ ಎರಡು ತಿಂಗಳ ನಂತರ ನ. 2ರಂದು ಅದೇ ಗೋಧಿಯನ್ನು ಸಂಸ್ಕರಣಾ ಯಂತ್ರದಿಂದ ಹುಳ, ಬೂಸ್ಟ್, ಕಡ್ಡಿಗಳನ್ನು ಬೇರ್ಪಡಿಸಿ ಹೊಸ ಚೀಲಗಳಲ್ಲಿ ತುಂಬಿದ ಇಲಾಖೆ ಪಲಾನುಭವಿಗಳಿಗೆ ವಿತರಿಸಲು ಮುಂದಾಗಿತ್ತು. ಈ ಕುರಿತು ನ. 4ರಂದು ‘ಕಳಪೆ ಗೋಧಿ ವಿತರಣೆಗೆ ಮುಂದಾದ ಇಲಾಖೆ’ ಶೀರ್ಷಿಕೆಯಡಿ ವರದಿ ಮಾಡಿತ್ತು. ಆದರೂ ಎಚ್ಚೆತ್ತುಕೊಳ್ಳದ ಇಲಾಖೆ ಈಗ ಮತ್ತೆ ಡಿಸೆಂಬರ್ ತಿಂಗಳ ಪಡಿತರದಲ್ಲಿ ಉತ್ತಮ ಗೋಧಿ ವಿತರಿಸುವುದರ ಬದಲಾಗಿ ಅದೇ ಹುಳ ಹಿಡಿದು ಹಾಳಾಗಿದ್ದ, ಬಳಸಲು ಯೋಗ್ಯವಲ್ಲದ ಗೋಧಿಯನ್ನು ವಿತರಿಸಿದೆ. ಪಡಿತರ ಪಡೆದ ಫಲಾನುಭವಿಗಳು ಆಹಾರ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಡಿತರವನ್ನು ಸ್ವಚ್ಛಗೊಳಿಸದೇ ಉಪಯೋಗಿಸುವಂತೆಯೇ ಇಲ್ಲ ಎಂದು ಆರೋಪಿಸಿದ್ದಾರೆ.

 

Leave a Reply

Your email address will not be published. Required fields are marked *

Back To Top