Tuesday, 20th February 2018  

Vijayavani

ಹ್ಯಾರಿಸ್ ಪುತ್ರ ಆಯ್ತು ಮತ್ತೊಬ್ಬ ಕೈ ಮುಖಂಡನ ದರ್ಪ- ಸರ್ಕಾರಿ ಕಚೇರಿಗೆ ನುಗ್ಗಿ ಅಧಿಕಾರಿಗೆ ಧಮ್ಕಿ- ಜಲಮಂಡಳಿ ಸದಸ್ಯ ನಾರಾಯಣಸ್ವಾಮಿ ಗೂಂಡಾಗಿರಿ        ನಾನು ಎರಚಿದ್ದು ಪೆಟ್ರೋಲ್ ಅಲ್ಲ, ನೀರು- ಕಿವಿಗೆ ಕಲರ್ ಕಲರ್ ಹೂವಿಟ್ಟ ನಾರಾಯಣಸ್ವಾಮಿ- ನಿಮ್ಮ ಏರಿಯಾದಲ್ಲಿ ನೀರಿಗೆ ಬಣ್ಣ ಇರುತ್ತಾ...?        ಸಿದ್ದರಾಮಯ್ಯ ಆಪ್ತನ ದರ್ಪ ಕಾಂಗ್ರೆಸ್‌ಗೆ ಕಾಣಿಸಲ್ವಾ- ಪರಮೇಶ್ವರ್‌ ಅವರೇ ಗೂಂಡಾನ ವಿರುದ್ಧ ಕ್ರಮ ಇಲ್ವಾ..?- ಕಾಂಗ್ರೆಸ್‌ ಸರ್ಕಾರದಲ್ಲಿ ಅಧಿಕಾರಿಗಳಿಷ್ಟು ಸೇಫ್..?        ದಕ್ಷಿಣ ಕರ್ನಾಟಕದಲ್ಲಿ ಅಮಿತ್ ಷಾ ದಂಡಯಾತ್ರೆ- ಕುಕ್ಕೆ ಸನ್ನಿಧಿಯಲ್ಲಿ ವಿಶೇಷ ಪೂಜೆ- ಜ್ವರದ ನಡುವೆಯೂ ಹತ್ತು ಹಲವು ಕಾರ್ಯಕ್ರಮದಲ್ಲಿ ಭಾಗಿ        ಮೇಯ್ತಿದ್ದ ಮದಗಜ ಕೆಣಕಿದ ಶ್ವಾನ- ನಾಯಿ ತುಂಟಾಟಕ್ಕೆ ತಿರುಗಿ ಬಿದ್ದ ಆನೆ- ಮಡಿಕೇರಿಯ ಕಾಫಿತೋಟದಲ್ಲಿ ಆನೆ, ನಾಯಿ ಕಾಳಗ       
Breaking News

25ನೇ ಮುಖಾಮುಖಿಗೆ ಸಜ್ಜಾದ ಕರ್ನಾಟಕ-ಮುಂಬೈ

Thursday, 07.12.2017, 3:00 AM       No Comments

ಬೆಂಗಳೂರು: ದೇಶೀಯ ಕ್ರಿಕೆಟ್​ನ ಸಾಂಪ್ರದಾಯಿಕ ಎದುರಾಳಿಗಳಾಗಿರುವ 8 ಬಾರಿಯ ಚಾಂಪಿಯನ್ ಕರ್ನಾಟಕ ಹಾಗೂ 41 ಬಾರಿಯ ಚಾಂಪಿಯನ್ ಮುಂಬೈ ತಂಡಗಳು ಶುಕ್ರವಾರದಿಂದ ನಾಗ್ಪುರದಲ್ಲಿ ನಡೆಯಲಿರುವ 84ನೇ ಆವೃತ್ತಿಯ ರಣಜಿ ಟ್ರೋಫಿ ಕ್ವಾರ್ಟರ್​ಫೈನಲ್ ಪಂದ್ಯದಲ್ಲಿ ಎದುರಾಗಲಿವೆ. ಜಾಮ್ತಾನಗರದ ವಿಸಿಎ ಸ್ಟೇಡಿಯಂನಲ್ಲಿ ನಡೆಯಲಿರುವ 5 ದಿನಗಳ ಪಂದ್ಯ, ಉಭಯ ತಂಡಗಳ ನಡುವಿನ 25ನೇ ರಣಜಿ ಮುಖಾಮುಖಿಯಾಗಿದೆ.

ರಾಜ್ಯಕ್ಕೆ ಮುಂಬೈ ಸವಾಲು: ಪ್ರಸಕ್ತ ಆವೃತ್ತಿಯ ಲೀಗ್ ಹಂತದಲ್ಲಿ ಕರ್ನಾಟಕ ಕನಿಷ್ಠ ಇನಿಂಗ್ಸ್ ಹಿನ್ನಡೆ ಬಿಟ್ಟುಕೊಡದೆ ಪಾರಮ್ಯ ಮರೆದಿದೆ. ಹ್ಯಾಟ್ರಿಕ್ ಗೆಲುವಿನ ಬಳಿಕ ಎರಡು ಪಂದ್ಯಗಳಲ್ಲಿ ಇನಿಂಗ್ಸ್ ಮುನ್ನಡೆ ಸಾಧಿಸಿ ಲೀಗ್ ಹಂತದ ಕೊನೇ ಪಂದ್ಯ ಬಾಕಿ ಇರುವಾಗಲೇ ಕರ್ನಾಟಕ ತಂಡ ನಾಕೌಟ್ ಹಂತವನ್ನು ಖಾತ್ರಿಪಡಿಸಿಕೊಂಡಿತ್ತು. ಆದರೆ, ಮುಂಬೈ ತಂಡ ತ್ರಿಪುರ ವಿರುದ್ಧ ಮಾಡು ಇಲ್ಲವೇ ಮಡಿ ಹೋರಾಟದ ಮೂಲಕ ಕೊನೇ ಕ್ಷಣದಲ್ಲಿ ಎಂಟರ ಘಟ್ಟಕ್ಕೇರಿದ ಸಾಧನೆ ಮಾಡಿದೆ.

ರಾಹುಲ್, ಮನೀಷ್ ಅಲಭ್ಯ

ಶ್ರೀಲಂಕಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಿಂದ ಬಿಡುಗಡೆಗೆ ಟೀಮ್ ಮ್ಯಾನೇಜ್​ವೆುಂಟ್ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಆರಂಭಿಕ ಕೆಎಲ್ ರಾಹುಲ್ ಪಂದ್ಯಕ್ಕೆ ಅಲಭ್ಯರಾದರೆ, ಲಂಕಾ ಏಕದಿನ ಸರಣಿಯಲ್ಲಿ ಆಡಲಿರುವ ಹಿನ್ನೆಲೆಯಲ್ಲಿ ಮನೀಷ್ ಪಾಂಡೆ ಕೂಡ ಅಲಭ್ಯರಾಗಿದ್ದಾರೆ.

ರಾಜ್ಯಕ್ಕಿದೆ ಬಲಿಷ್ಠ ಬ್ಯಾಟಿಂಗ್ ಬಲ

ಕೆಎಲ್ ರಾಹುಲ್, ಮನೀಷ್ ಪಾಂಡೆ ಅನುಪಸ್ಥಿತಿಯಲ್ಲೂ ಕರ್ನಾಟಕ ತಂಡ ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿದೆ. ಇದಕ್ಕೆ ಲೀಗ್ ಹಂತದಲ್ಲಿ ಸತತ 3 ಪಂದ್ಯಗಳಲ್ಲಿ 600ಕ್ಕೂ ಅಧಿಕ ರನ್ ಪೇರಿಸಿರುವುದೇ ಸಾಕ್ಷಿ. ಆರಂಭಿಕ ಆರ್.ಸಮರ್ಥ್, ಕೇವಲ ಒಂದು ತಿಂಗಳಲ್ಲಿ ಸಾವಿರ ರನ್ ಸಿಡಿಸಿರುವ ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ಡಿ.ನಿಶ್ಚಲ್ ಒಳಗೊಂಡ ಬ್ಯಾಟಿಂಗ್ ಪಡೆ ಎದುರಾಳಿ ತಂಡದ ನಿದ್ದೆ ಗೆಡಿಸಿದರೂ ಆಶ್ಚರ್ಯ ಇಲ್ಲ.

ಮುಂಬೈಗೆ ಪ್ರಮುಖರ ಅನುಪಸ್ಥಿತಿ

ಟೂರ್ನಿಯಲ್ಲಿ ಉತ್ತಮ ಇತಿಹಾಸ ಹೊಂದಿರುವ ಮುಂಬೈ ತಂಡಕ್ಕೆ ಪ್ರಮುಖ ಆಟಗಾರರ ಗೈರು ಕಾಡುತ್ತಿದೆ. ರಾಷ್ಟ್ರೀಯ ತಂಡದ ಸೇವೆಯಲ್ಲಿರುವುದರಿಂದ ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ರೋಹಿತ್ ಶರ್ಮ ತಂಡಕ್ಕೆ ಅಲಭ್ಯರಾಗಿದ್ದರೆ, ಪ್ರಮುಖ ವೇಗಿ ಶಾರ್ದೂಲ್ ಠಾಕೂರ್ ಗಾಯದಿಂದ ಹೊರಗುಳಿದಿದ್ದಾರೆ. 19 ವಯೋಮಿತಿ ತಂಡದ ನಾಯಕ ಪೃಥ್ವಿ ಷಾಗೆ ಆಡಲು ಅನುಮತಿ ನೀಡಿರುವುದು ತಂಡದ ಪಾಲಿಗೆ ಸಮಾಧಾನಕರ ಸಂಗತಿ.

ಆರಂಭ: ಬೆಳಗ್ಗೆ 9.30, ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ಇತರ ಪಂದ್ಯಗಳು

ಜೈಪುರ

ಗುಜರಾತ್-ಬಂಗಾಳ

ಮುಳಪದು ದೆಹಲಿ-ಮಧ್ಯಪ್ರದೇಶ

ಸೂರತ್: ಕೇರಳ-ವಿದರ್ಭ

# ಕರ್ನಾಟಕ, ಮುಂಬೈ ರಣಜಿ ಇತಿಹಾಸದಲ್ಲಿ ಇದುವರೆಗೆ 24 ಬಾರಿ ಮುಖಾಮುಖಿಯಾಗಿವೆ. ಕರ್ನಾಟಕ 2 ಪಂದ್ಯಗಳಲ್ಲಿ ಗೆದ್ದು 10ರಲ್ಲಿ ಸೋತಿದೆ. ಉಳಿದ 12 ಪಂದ್ಯಗಳು ಡ್ರಾಗೊಂಡಿವೆ.

# ಮೈಸೂರು-ಬಾಂಬೆ ಎಂಬ ಹೆಸರು ಹೊಂದಿದ್ದ ಕಾಲದಲ್ಲೇ ಸಾಂಪ್ರದಾಯಿಕ ಎದುರಾಳಿಗಳೆನಿಸಿದ್ದ ಉಭಯ ತಂಡಗಳ ರಣಜಿ ವೈರತ್ವಕ್ಕೆ ಈಗ 75 ವರ್ಷ. 1942ರಲ್ಲಿ ಮೊದಲ ರಣಜಿ ಫೈಟ್ ನಡೆದಿತ್ತು.

# ಕರ್ನಾಟಕ ತಂಡಕ್ಕೆ ಕಳೆದ 11 ವರ್ಷಗಳಲ್ಲಿ 10ನೇ ಕ್ವಾರ್ಟರ್​ಫೈನಲ್ ಪಂದ್ಯ ಇದಾಗಿದೆ. ಇದರಲ್ಲಿ 3 ಬಾರಿ ಫೈನಲ್​ಗೇರಿದೆ.

(ಅಂಕಿ-ಅಂಶ: ಚನ್ನಗಿರಿ ಕೇಶವಮೂರ್ತಿ)

Leave a Reply

Your email address will not be published. Required fields are marked *

Back To Top