Sunday, 21st October 2018  

Vijayavani

ಅರ್ಜುನ್‌ ಸರ್ಜಾಕಡೆಯಿಂದ ಬೆದರಿಕೆ ಕರೆ - ಕಾನೂನು ಹೋರಾಟದ ಬಗ್ಗೆ ದಾಖಲೆ ಸಂಗ್ರಹ - ಸುದ್ದಿಗೋಷ್ಠಿಯಲ್ಲಿ ಶ್ರುತಿ ಗಂಭೀರ ಆರೋಪ        ಭಾವೈಕ್ಯತೆ ಶ್ರೀಗಳಿಗೆ ಕಣ್ಣೀರ ವಿದಾಯ - ಕ್ರಿಯಾಸಮಾಧಿಯಲ್ಲಿ ಸಿದ್ದಲಿಂಗ ಶ್ರೀ ಲೀನ - ಭಕ್ತಸಾಗರದಿಂದ ತೋಂಟದಾರ್ಯರಿಗೆ ಅಂತಿಮ ನಮನ        ಡಿಕೆಶಿ ಶೋ ಮಾಡೋದು ಬಿಡ್ಬೇಕು - ಪಕ್ಷದ ಪರ ಕೆಲಸ ಮಾಡ್ಬೇಕು - ಬಳ್ಳಾರಿ ಪ್ರಚಾರದಲ್ಲಿ ಬಯಲಾಯ್ತು ಜಾರಕಿಹೊಳಿ ಸಿಟ್ಟು        ಸಿಎಂ ಎಚ್‌ಡಿಕೆ ಮತ್ತೆ ಟೆಂಪಲ್‌ರನ್‌ - ಶಕ್ತಿ ದೇವತೆ ಸನ್ನಿಧಿಗೆ ಕುಮಾರಸ್ವಾಮಿ - ಮಹಾರಾಷ್ಟ್ರದ ತುಳಜಾ ಭವಾನಿ ದೇಗುಲಕ್ಕೆ ಭೇಟಿ        ಶಿರಡಿ ಸಾಯಿ ಸಮಾಧಿ ಶತಮಾನೋತ್ಸವ ಹಿನ್ನೆಲೆ - ಸಾಯಿ ಸನ್ನಿಧಿಗೆ ಭಕ್ತ ಸಾಗರ - ನಾಲ್ಕು ದಿನದಲ್ಲಿ 5 ಕೋಟಿ ರೂಪಾಯಿ ಕಾಣಿಕೆ        ರೋಡ್ ರೋಲರ್​ನ್ನೂ ಬಿಡದ ಕಳ್ಳರು - ವರ್ತೂರು ಬಳಿ ನಿಲ್ಲಿಸಿ ಎಸ್ಕೇಪ್ ಆದ ಚೋರರು - ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ       
Breaking News

ರಾಷ್ಟ್ರಮಟ್ಟದ ಸಮ್ಮೇಳನ ಇಂದಿನಿಂದ

Wednesday, 13.06.2018, 3:00 AM       No Comments

ಗದಗ: ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ವಿಶ್ವವಿದ್ಯಾಲಯದ ವತಿಯಿಂದ ‘ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಂಸ್ಥೆಗಳ ವೈವಿಧ್ಯತೆಗಳು’ ವಿಷಯ ಕುರಿತು ರಾಷ್ಟ್ರಮಟ್ಟದ ಸಮ್ಮೇಳನ ಜೂ. 13 ಮತ್ತು 14ರಂದು ನಗರದ ಸಾಹಿತ್ಯ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಗ್ರಾಮೀಣಾವೃದ್ಧಿ ವಿಶ್ವವಿದ್ಯಾಲಯ ಕುಲಪತಿ ಪ್ರೊ. ತಿಮ್ಮೇಗೌಡ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ. 13ರಂದು ಬೆಳಗ್ಗೆ 10ಕ್ಕೆ ಶಾಸಕ ಎಚ್.ಕೆ.ಪಾಟೀಲ ಸಮ್ಮೇಳನ ಉದ್ಘಾಟಿಸುವರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ನಾಗಲಾಂಬಿಕಾದೇವಿ ಗೌರವ ಅತಿಥಿಗಳಾಗಿ ಭಾಗವಹಿಸುವರು.

ಸಮ್ಮೇಳನವು ವಿದ್ಯಾರ್ಥಿಗಳು, ಸಂಶೋಧಕರು, ವೃತ್ತಿಪರರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್​ನ ಪ್ರಸ್ತುತ ವಿಷಯಗಳು, ರಾಜ್ಯ ಹಾಗೂ ಕೇಂದ್ರದಿಂದ ಅನುಷ್ಠಾನಗೊಂಡ ನೀತಿಗಳು, ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಕುರಿತು ಚರ್ಚೆ ಹಾಗೂ ಆಧುನಿಕ ತಂತ್ರಜ್ಞಾನ ಅಳವಡಿಸುವಿಕೆ ಹಾಗೂ ಪಂಚಾಯತರಾಜ್ ಸಂಸ್ಥೆಗಳನ್ನು ಸಬಲೀಕರಿಸಲು ಕೈಗೊಳ್ಳಬೇಕಾದ ಕ್ರಮಗಳನ್ನು ಕುರಿತು ವಿಷಯ ಮಂಡನೆ ಮಾಡಲು ವೇದಿಕೆಯನ್ನು ಒದಗಿಸಲಾಗುತ್ತದೆ ಎಂದರು.

ರಾಷ್ಟ್ರಮಟ್ಟದ ಸಮ್ಮೇಳನದಲ್ಲಿ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳು, ತಮಿಳನಾಡು, ಆಂಧ್ರಪ್ರದೇಶ, ದೆಹಲಿ, ಕೇರಳ, ರಾಜಸ್ಥಾನ, ಮಹಾರಾಷ್ಟ್ರ ರಾಜ್ಯಗಳ ವಿಶ್ವವಿದ್ಯಾಲಯಗಳಿಂದ ಸುಮಾರು 350ಕ್ಕೂ ಹೆಚ್ಚು ತಜ್ಞರು, ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು, ಸಂಪನ್ಮೂಲ ವ್ಯಕ್ತಿಗಳು, ರಾಜ್ಯದ ಪಂಚಾಯತರಾಜ್ ಇಲಾಖೆಯ ನೌಕರರು ಹಾಗೂ ಪಂಚಾಯಿತಿ ಸದಸ್ಯರುಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಸಮ್ಮೇಳನದಲ್ಲಿ ತಜ್ಞರಿಂದ ವಿವಿಧ ವಿಷಯಗಳ ಕುರಿತು ಒಟ್ಟು 9 ಗೋಷ್ಠಿಗಳು ನಡೆಯಲಿವೆ. ಈಗಾಗಲೇ ಪ್ರಾಧ್ಯಾಪಕರು ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಂದ 160ಕ್ಕೂ ಹೆಚ್ಚು ಸಂಶೋಧನ ಲೇಖನಗಳು ಬಂದಿದ್ದು, ಅವುಗಳನ್ನು ವಿವಿಧ ವಿಚಾರ ಗೋಷ್ಠಿಗಳಲ್ಲಿ ಮಂಡಿಸಲಾಗುವುದು ಎಂದರು.

ಸಮ್ಮೇಳನದಲ್ಲಿ ವಿಷಯ ತಜ್ಞರು ಹಾಗೂ ಪರಿಣಿತರೊಂದಿಗೆ ರ್ಚಚಿಸಿ ಸರ್ಕಾರಕ್ಕೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತರಾಜ್ ಸುಧಾರಣೆಗಾಗಿ ಹಲವಾರು ಸಲಹೆಗಳನ್ನು ನೀಡಲಾಗುವುದು ಎಂದು ಅವರು ವಿವರಿಸಿದರು.

ಜಿಪಂ ಅಧ್ಯಕ್ಷ ವಾಸಣ್ಣ ಕುರಡಗಿ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಮಾಜಿ ಸಂಸದ ಸಿ. ನಾರಾಯಣ ಸ್ವಾಮಿ, ಮಾಜಿ ಶಾಸಕ ಡಿ.ಆರ್ ಪಾಟೀಲ, ನಿವೃತ್ತ ಅಧಿಕಾರಿಗಳಾದ ಎಸ್.ಎಂ.ವಿಜಯಾನಂದ, ಕಮಲ್ ತೊರೈ, ಡಾ. ಮಿನಾಕ್ಷಿ ಸುಂದರಂ, ಪ್ರೊ. ಆರ್.ಎಸ್. ದೇಶಪಾಂಡೆ, ವಿಶ್ರಾಂತ ಕುಲಪತಿ ಡಾ. ಎಸ್.ಎ. ಪಾಟೀಲ, ದೆಹಲಿಯ ಸಮಾಜ ವಿಜ್ಞಾನ ಸಂಸ್ಥೆ ಅಧ್ಯಕ್ಷ ಜಾರ್ಜ್ ಮ್ಯಾಥ್ಯೂ, ಜಿಲ್ಲಾಧಿಕಾರಿ ಮನೋಜ್ ಜೈನ್, ಜಿಪಂ ಸಿಇಒ ಮಂಜುನಾಥ ಚವ್ಹಾಣ, ಎಸ್ಪಿ ಸಂತೋಷಬಾಬು ಭಾಗವಹಿಸುವರು. ಗ್ರಾಮೀಣಾಭಿವೃದ್ಧಿ ವಿವಿ ಕುಲಪತಿ ಪ್ರೊ. ಬಿ. ತಿಮ್ಮೇಗೌಡ ಅಧ್ಯಕ್ಷತೆ ವಹಿಸಲಿದ್ದು, ಕುಲಸಚಿವ ಡಾ. ಸುರೇಶ ನಾಡಗೌಡರ, ಗೌರವ ಪ್ರಾಧ್ಯಾಪಕ ಜೀವನಕುಮಾರ ಸಮ್ಮೇಳನದ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದರು. ಕುಲಸಚಿವ ಡಾ. ಸುರೇಶ ನಾಡಗೌಡರ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Back To Top