Wednesday, 15th August 2018  

Vijayavani

ಕಾವೇರಿ ಕಣಿವೆಯಲ್ಲಿ ಮಳೆ ಆರ್ಭಟ: ಕೆಆರ್‌ಎಸ್‌ಗೆ ಭಾರಿ ಒಳಹರಿವು, ಡ್ಯಾಂನಿಂದ 1.50 ಲಕ್ಷ ಕ್ಯೂಸೆಕ್‌ ನೀರು ಹೊರಕ್ಕೆ        ಹಾಸನದಲ್ಲಿ ಮಳೆ ಅಬ್ಬರ: ಶಿರಾಡಿಘಾಟ್‌ನಲ್ಲಿ ಅನಿಲ ಟ್ಯಾಂಕ್‌ ಪಲ್ಟಿ, ಸೋಮವಾರ ಪೇಟೆ ಹೆದ್ದಾರಿ ಬಿರುಕು        ಉಕ್ಕಿಹರಿಯುತ್ತಿದೆ ತುಂಗಭದ್ರ: ದಾವಣಗೆರೆ ಜಿಲ್ಲೆಯಲ್ಲಿ ಬೆಳೆ ನಾಶ, ಕಂಪ್ಲಿ ಸೇತುವೆ ನೀರಲ್ಲಿ ಮುಳುಗಡೆ        ಕೆಂಪು ಕೋಟೆ ಮೇಲೆ ಮೋದಿ ಧ್ವಜರೋಹಣ: ಸರ್ಕಾರದ ಸಾಧನೆಗಳ ಬಣ್ಣನೆ, ಆಯುಷ್ಮಾನ್‌ ಭಾರತ ಘೋಷಣೆ       
Breaking News

2 ಜಿಲ್ಲೆಗಳಲ್ಲಿ 24 ವಿದ್ಯಾರ್ಥಿಗಳ ಡಿಬಾರ್

Tuesday, 27.03.2018, 3:03 AM       No Comments

ಕಲಬುರಗಿ/ಯಾದಗಿರಿ: ಸೋಮವಾರ ನಡೆದ ಎಸ್ಸೆಸ್ಸೆಲ್ಸಿ ಗಣಿತ ಪರೀಕ್ಷೆಯಲ್ಲಿ 24 ವಿದ್ಯಾರ್ಥಿಗಳು ಡಿಬಾರ್ ಆಗಿದ್ದು, ಕಲಬುರಗಿ ಜಿಲ್ಲೆಯಲ್ಲೇ 15 ವಿದ್ಯಾರ್ಥಿಗಳು ಡಿಬಾರ್ ಆಗಿದ್ದಾರೆ. ಜತೆಗೆ ಯಾದಗಿರಿ ಜಿಲ್ಲೆಯ 9 ವಿದ್ಯಾರ್ಥಿಗಳನ್ನು ಡಿಬಾರ್ ಮಾಡಲಾಗಿದೆ.

ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾ ನೇತೃತ್ವದ ತಂಡ ಜೇವರ್ಗಿ ಕಾಲನಿ ಸರ್ಕಾರಿ ಪ್ರೌಢಶಾಲೆಯಲ್ಲಿ ಇಬ್ಬರು ಹಾಗೂ ಶಿಕ್ಷಣಾಧಿಕಾರಿಗಳ ತಂಡ ವಾಣಿವಿಲಾಸ ಪ್ರೌಢಶಾಲೆಯಲ್ಲಿ 13 ವಿದ್ಯಾರ್ಥಿಗಳನ್ನು ಡಿಬಾರ್ ಮಾಡಿದೆ ಎಂದು ಡಿಡಿಪಿಐ ಶಾಂತಗೌಡ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಗರದ 11 ಕೇಂದ್ರಗಳಲ್ಲಿ ನೇರ ಅಭ್ಯರ್ಥಿಗಳು (ಶುಲ್ಕ ಭರಿಸಿ ನೇರವಾಗಿ ಪರೀಕ್ಷೆಗೆ ಹಾಜರಾಗುವವರು) ಪರೀಕ್ಷೆ ಬರೆಯುತ್ತಾರೆ. ಇಂಥ ಕೇಂದ್ರಗಳಲ್ಲೇ ನಕಲು ಚಟುವಟಿಕೆ ಹೆಚ್ಚು ಎಂದರು.

ಯಾದಗಿರಿ ಜಿಲ್ಲೆಯಲ್ಲಿ ವಿವಿಧ ಶಾಲೆಗಳ ಕಾಂಪೌಂಡ್ ಮೇಲೆ ನಿಂತು ಚೀಟಿ ಕೊಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಕೆಲ ಕೇಂದ್ರ ಗಳಿಗೆ ಜಿಪಂ ಸಿಇಒ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಭೇಟಿ ನೀಡಿ ಪರಿಶೀಲಿಸಿದಾಗ ವಿದ್ಯಾರ್ಥಿಗಳು ನಕಲು ಮಾಡುವುದು ಕಂಡು ಬಂದಿದೆ. ಈ ಸಂಬಂಧ 9 ವಿದ್ಯಾರ್ಥಿಗಳು ಹಾಗೂ ಪರೀಕ್ಷಾ ಮೇಲ್ವಿಚಾರಕರಾದ ಸಂಗಮ್ಮ ನಾಗಾವಿ ಮತ್ತು ಸುರಪುರದ ಯಲ್ಲಪ್ಪ ಚಂದನಕೇರಾ ಅವರನ್ನು ಅಮಾನತು ಮಾಡಲಾಗಿದೆ.

ರಾಜ್ಯದಲ್ಲಿ 8,00,577 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 28,906 ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ಪ್ರಕಟಣೆ ತಿಳಿಸಿದೆ.

 ನಕಲು ಚೀಟಿ ಪೂರೈಕೆ

ವಿಜಯಪುರ: ನಗರದ ದರಬಾರ್ ಹಾಗೂ ಅಂಜುಮನ್ ಪರೀಕ್ಷೆ ಕೇಂದ್ರದಲ್ಲಿ ಸೋಮವಾರ ವ್ಯಾಪಕ ನಕಲು ನಡೆದಿರುವುದು ಕಂಡು ಬಂದಿದೆ. ಮೇಲ್ವಿಚಾರಕರು ಹಾಗೂ ನಿಯೋಜಿತ ಪೊಲೀಸ್ ಸಿಬ್ಬಂದಿಯೇ ಚೀಟಿ ಪೂರೈಸುತ್ತಿದ್ದ ದೃಶ್ಯಗಳು ಗೋಚರಿಸಿದವು. ಕೇಂದ್ರದ ಸಮೀಪದಲ್ಲೇ ಜೆರಾಕ್ಸ್ ಮಳಿಗೆ ತೆರೆದು ಉತ್ತರಪತ್ರಿಕೆ ಸಿದ್ಧಪಡಿಸುತ್ತಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು. ಕಂದಗಲ್ಲ ಹನುಮಂತರಾಯ ರಂಗಮಂದಿರ ಕಾಪಿ ಚೀಟಿ ತಯಾರಿಸುವ ಕೇಂದ್ರಸ್ಥಳವಾಗಿ ಮಾರ್ಪಟ್ಟಿತ್ತು.

 

Leave a Reply

Your email address will not be published. Required fields are marked *

Back To Top