Monday, 20th August 2018  

Vijayavani

ಕೊಡಗಿನ ಸಂತ್ರಸ್ತರಿಗೆ ಗಾಯದ ಮೇಲೆ ಬರೆ - ಫೈನಾನ್ಸ್​ ಕಂಪನಿಗಳಿಂದ ಕಿರುಕುಳ - ಕೊಟ್ಟ ಸಾಲ ವಾಪಸ್​ ಕೊಡುವಂತೆ ಪಟ್ಟು        ಮಣಿಪಾಲ್ ಆಸ್ಪತ್ರೆ ವೈದ್ಯನ ಹುಚ್ಚಾಟ - ಕುಡಿದ ಮತ್ತಿನಲ್ಲಿ ಬಿಎಂಡಬ್ಲ್ಯೂ ಕಾರು ಚಾಲನೆ - ಪಾದಾಚಾರಿ ಬಲಿ ಪಡೆದ ಡಾಕ್ಟರ್        ಹೋಪ್ ಫಾರಂ ಬಳಿ ಕುಸಿದ ಲೈಟ್ ಕಂಬ - ಸ್ಥಳದಲ್ಲೇ ವಿದ್ಯಾರ್ಥಿನಿ ದುರ್ಮರಣ - ಬಿಬಿಎಂಪಿ, ಬೆಸ್ಕಾಂ ನಿರ್ಲಕ್ಷ್ಯಕ್ಕೆ ಮತ್ತೊಂದು ಬಲಿ        ವೈಮಾನಿಕ ಸಮೀಕ್ಷೆಯಲ್ಲಿ ಸಿಎಂ ಪೇಪರ್ ರೀಡಿಂಗ್ - ಸಂತ್ರಸ್ತರಿಗೆ ಬಿಎಸ್ಕೆಟ್ ಎಸೆದ ರೇವಣ್ಣ - ಸಾರ್ವಜನಿಕರಿಂದ ಆಕ್ರೋಶ        ಮಹಾರಾಷ್ಟ್ರದಲ್ಲಿ ಮಹಾ ಮಳೆಯ ಅಬ್ಬರ - ಚಿಕ್ಕೋಡಿಯಲ್ಲಿ 6 ಸೇತುವೆಗಳು ಮತ್ತೆ ಮುಳುಗಡೆ - ಜನರಿಗೆ ಸಂಕಷ್ಟ        ಮರಿಗೆ ತೊಂದರೆ ನೀಡ್ತಿದ್ದಾರೆಂದು ರೊಚ್ಚಿಗೆದ್ದ ಆನೆ - ಫೋಟೋ ತೆಗೆದ ಪ್ರವಾಸಿರ ಮೇಲೆ ಅಟ್ಯಾಕ್       
Breaking News

24ಕ್ಕೆ ದ ಸ್ಟೋಲನ್ ಪ್ರಿನ್ಸೆಸ್

Friday, 10.08.2018, 3:02 AM       No Comments

ದು ತಿಂಗಳ ಹಿಂದೆ ವಿಶ್ವದ ಹಲವೆಡೆ ತೆರೆಕಂಡು ಒಳ್ಳೆಯ ಪ್ರತಿಕ್ರಿಯೆ ಗಿಟ್ಟಿಸಿಕೊಂಡು, ಕಲೆಕ್ಷನ್ ವಿಚಾರದಲ್ಲೂ ಸದ್ದು ಮಾಡಿರುವ ‘ದ ಸ್ಟೋಲನ್ ಪ್ರಿನ್ಸೆಸ್’ ಅನಿಮೇಶನ್ ಚಿತ್ರ ಇದೀಗ ಭಾರತದಲ್ಲೂ ಬಿಡುಗಡೆ ಆಗುತ್ತಿದೆ. ಮೂಲ ಚಿತ್ರವನ್ನು ಅಲ್ಟ್ರಾ ಮೀಡಿಯಾ ಮತ್ತು ಎಂಟರ್​ಟೈನ್​ವೆುಂಟ್ ಸಂಸ್ಥೆ ಹಿಂದಿ, ತೆಲುಗು, ತಮಿಳು ಭಾಷೆಯಲ್ಲಿ ಡಬ್ ಮಾಡಿದ್ದು, ಆ.24ರಂದು ದೇಶಾದ್ಯಂತ ಬಿಡುಗಡೆ ಮಾಡುತ್ತಿದೆ.

ಮಕ್ಕಳು ಮತ್ತು ಹದಿಹರೆಯದವರನ್ನೇ ಗಮನದಲ್ಲಿಟ್ಟುಕೊಂಡೆ ಲವ್​ಸ್ಟೋರಿ ರೀತಿಯಲ್ಲಿ ‘ದ ಸ್ಟೋಲನ್ ಪ್ರಿನ್ಸೆಸ್’ ಸಿನಿಮಾ ಮೂಡಿಬಂದಿದ್ದು, ಒಲೇ ಮಲ್ಮೂಜ್ ನಿರ್ದೇಶನ ಮಾಡಿದ್ದಾರೆ. ಕಥಾನಾಯಕ ರಸ್ಲ್ಯಾನ್​ಗೆ ಊರು ಸುತ್ತುವ ಖಯಾಲಿ. ಹಾಗೆ ಸುತ್ತಾಡುತ್ತ ರಾಜ ಕ್ವಿವಾನ್ ರಸ್​ನ ನಗರಕ್ಕೆ ಬರುತ್ತಾನೆ. ಅಲ್ಲಿ ಆಕೆಯ ಮಗಳು ಮಿಲಾಳನ್ನು ನೋಡುತ್ತಾನೆ. ಬಳಿಕ ಅದು ಪ್ರೀತಿಯಾಗಿ ತಿರುಗುತ್ತದೆ. ಹೀಗಿರುವಾಗಲೇ ರಾಕ್ಷಸನೋರ್ವ ಆಕೆಯನ್ನು ಅಪಹರಣ ಮಾಡುತ್ತಾನೆ. ಆ ಅಪಹರಣಕಾರನಿಂದ ಯುವರಾಣಿಯನ್ನು ಸುರಕ್ಷಿತವಾಗಿ ಕರೆದುಕೊಂಡು ಬರುವ ಪ್ರಸಂಗವೇ ‘ದ ಸ್ಟೋಲನ್ ಪ್ರಿನ್ಸೆಸ್’. ಉಕ್ರೇನ್​ನಲ್ಲಿ ಮೊದಲು ಬಿಡುಗಡೆಯಾಗಿದ್ದ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಈ ಹಿಂದಿನ ಹಲವು ಆನಿಮೇಟೆಡ್ ಸಿನಿಮಾಗಳು ಮಾಡಿದ್ದ ದಾಖಲೆಯನ್ನು ಮುರಿದಿತ್ತು.

ಉಕ್ರೇನ್ ಉದ್ಯಮಿ ಯೆಗೋರ್ ಒಲೆಸೋವ್ ‘ದಿ ಸ್ಟೋಲನ್ ಪ್ರಿನ್ಸೆಸ್’ ಚಿತ್ರ ನಿರ್ಮಾಣ ಮಾಡಿದ್ದು, 19ನೇ ಶತಮಾನದಲ್ಲಿ ಅಲೆಕ್ಸಾಂಡರ್ ಪುಷ್ಕಿನ್ ಬರೆದ ‘ರಷ್ಲ್ಯಾನ್ ಆಂಡ್ ಲುದ್​ವಿುಲಾ’ ಗೀತೆಯ ಆಯ್ದ ಭಾಗಗಳನ್ನು ಬಳಸಿಕೊಂಡು ಸಿನಿಮಾ ಮಾಡಿದ್ದಾರೆ.

Leave a Reply

Your email address will not be published. Required fields are marked *

Back To Top