Sunday, 15th July 2018  

Vijayavani

ಬಾಲಕನ ವಿಡಿಯೋ ಹಿಂದೆ ಬಿಜೆಪಿ ಕೈವಾಡ ಆರೋಪ - ವಿಡಿಯೋ ತನಿಖೆಗೆ ಸದಾನಂದಗೌಡ ಆಗ್ರಹ - ರಾಜಕಾರಣಿಗಳ ಆಟಕ್ಕೆ ಕೊಡವರ ಆಕ್ರೋಶ        26 ವರ್ಷ ಲಿಂಗಾಯತರೇ ರಾಜ್ಯ ಆಳಿದ್ದಾರೆ - ಕುಮಾರಸ್ವಾಮಿ ಸಿಎಂ ಆಗಿ 2 ತಿಂಗಳಾಗಿದೆ - ಉತ್ತರ ಕರ್ನಾಟಕ ನಿರ್ಲಕ್ಷ್ಯ ಆರೋಪಕ್ಕೆ ದೇವೇಗೌಡ ತಿರುಗೇಟು        ಕೊನೆಗೂ ಶಿರಾಡಿ ಘಾಟ್‌ ಲೋಕಾರ್ಪಣೆ - ವಾಸ್ತು ಪ್ರಕಾರ ರೇವಣ್ಣ ಉದ್ಘಾಟನೆ - ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತ        ಮಟನ್ ಬಿರಿಯಾನಿ, ಚಿಕನ್ ಚಾಪ್ಸ್, ಬೋಟಿ ಗೊಜ್ಜು, ಮೊಟ್ಟೆ - 25 ಸಾವಿರ ಮಂದಿಗೆ ಭರ್ಜರಿ ಬಾಡೂಟ - ಚಾಮುಂಡೇಶ್ವರಿ ಕ್ಷೇತ್ರದ ಜನರಿಗೆ ಜಿಟಿಡಿ ಕೃತಜ್ಞತೆ        ಒಂದು ದೇಶ ಒಂದೇ ಚುನಾವಣೆ - ಮೋದಿ ಪರಿಕಲ್ಪನೆಗೆ ಸೂಪರ್‌ಸ್ಟಾರ್‌ ಬೆಂಬಲ - ಹಣ, ಸಮಯ ಉಳಿತಾಯ ಎಂದ ರಜನಿ        ಉಕ್ಕಿಹರಿಯುತ್ತಿರೋ ಕೃಷ್ಣೆ - ಬೆಳಗಾವಿ, ಚಿಕ್ಕೋಡಿ ಭಾಗದಲ್ಲಿ ಪ್ರವಾಹ ಪರಿಸ್ಥಿತಿ - ಇತ್ತ ತಮಿಳುನಾಡಿನಲ್ಲಿ ಕಾವೇರಿ ಭೋರ್ಗರೆತ       
Breaking News

21ರಿಂದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ

Monday, 16.01.2017, 8:44 AM       No Comments

ಬೆಳಗಾವಿ: ಪರಿವರ್ತನ ಪರಿವಾರದ ವತಿಯಿಂದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಜ.21ರಿಂದ 24ರವರೆಗೆ ತಾಲೂಕಿನ ಸಾವಗಾಂವ ರಸ್ತೆಯ ಅಂಗಡಿ ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ಪರಿವಾರ ಅಧ್ಯಕ್ಷ ಹಾಗೂ ಮಾಜಿ ಶಾಸಕ ಅಭಯ ಪಾಟೀಲ ಸುದ್ದಿಗಾರರಿಗೆ ಹೇಳಿದರು. ಮಕ್ಕಳು, ಮಹಿಳೆ ಮತ್ತು ಯುವ ವಿಭಾಗಗಳಲ್ಲಿ ಸ್ಪರ್ಧೆಗಳಿದ್ದು, ಎಲ್ಲ ವಿಭಾಗಗಳ ವಿಜೇತರಿಗೆ ನಗದು ಬಹುಮಾನವಿದೆ. 17 ದೇಶಗಳ ಮತ್ತು 5 ರಾಜ್ಯಗಳ 22 ರಾಷ್ಟ್ರೀಯ ಮತ್ತು 21 ಅಂತಾರಾಷ್ಟ್ರೀಯ ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.

ಡಿಜಿಧನ್ ಲಕ್ಕಿಗ್ರಾಹಕ ಪ್ರಶಾಂತ್

ಲಿಂಗಸುಗೂರು (ರಾಯಚೂರು): ನಗದು ರಹಿತ ಆರ್ಥಿಕ ವ್ಯವಹಾರವನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಜಾರಿ ತಂದ ಡಿಜಿಧನ್ ಲಕ್ಕಿಗ್ರಾಹಕ ಯೋಜನೆಗೆ ಪಟ್ಟಣದ ಯುವಕ ಎಚ್. ಪ್ರಶಾಂತ ಅವರು ಆಯ್ಕೆಯಾಗಿದ್ದು, 1000 ರೂ. ಬಹುಮಾನವನ್ನು ಗೆದ್ದಿದ್ದಾರೆ. ಆನ್​ಲೈನ್ ಮೂಲಕ 189 ರೂ. ಮೌಲ್ಯದ ವಾಚ್ ಅನ್ನು ಖರೀದಿಸಿದ್ದರು. ಪಟ್ಟಣದ ಸುಕೋ ಬ್ಯಾಂಕ್​ನ ಅವರ ಖಾತೆಗೆ ಹಣ ಜಮಾವಣೆ ಆಗಿದೆ.

ಧರ್ಮಸ್ಥಳದಲ್ಲಿ ನಗದು ರಹಿತ ವ್ಯವಸ್ಥೆ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಧರ್ಮಸ್ಥಳದಲ್ಲಿ ವಿವಿಧ ಸೇವೆಗಳಿಗೆ ನಗದು ರಹಿತ ಪಾವತಿ ಸೌಲಭ್ಯ ಕಲ್ಪಿಸಿದ್ದು, ಡಿ. ಹರ್ಷೆಂದ್ರ ಕುಮಾರ್ ಶನಿವಾರ ಚಾಲನೆ ನೀಡಿದರು. ದೇವಸ್ಥಾನದಲ್ಲಿ ಪೂಜೆ ಹಾಗೂ ವಿವಿಧ ಸೇವೆಗಳು, ಅನ್ನದಾನಕ್ಕೆ ನಗದು ರಹಿತ ಪಾವತಿ ಸೌಲಭ್ಯವಿದ್ದು, ಭಕ್ತರು ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಇದರಿಂದ ನಗದು ಹಣಕ್ಕಾಗಿಯೇ ಆಶ್ರಯಿಸಬೇಕಾದ ಪರಿಸ್ಥಿತಿ ಅಲ್ಪಮಟ್ಟಿಗೆ ದೂರವಾಗಿದೆ.

ಮೇ 4ಕ್ಕೆ ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮೇ 4ರ ಸಂಜೆ 6.50ಕ್ಕೆ ಗೋಧೂಳಿ ಲಗ್ನದಲ್ಲಿ 46ನೇ ವರ್ಷದ ಉಚಿತ ಸಾಮೂಹಿಕ ವಿವಾಹ ನಡೆಯಲಿದೆ. ಆಸಕ್ತರು ಏಪ್ರಿಲ್ 30ರೊಳಗೆ ವಿವರ ಮಾಹಿತಿ ಹಾಗೂ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ವರನಿಗೆ ಧೋತಿ, ಶಾಲು ಮತ್ತು ವಧುವಿಗೆ ಸೀರೆ, ರವಿಕೆ ಕಣ ಹಾಗೂ ಮಂಗಲ ಸೂತ್ರ ನೀಡಲಾಗುವುದು. ಮದುವೆಯ ಎಲ್ಲ ವೆಚ್ಚವನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧಮೋತ್ಥಾನ ಟ್ರಸ್ಟ್ ಭರಿಸಲಿದೆ. ಮಾಹಿತಿಗೆ 08256 277144 ಸಂರ್ಪಸಬಹುದು.

 

Leave a Reply

Your email address will not be published. Required fields are marked *

Back To Top