Monday, 11th December 2017  

Vijayavani

1. ಸಿಗರೇಟ್​ ಕೊಟ್ರೆ ಮಾತ್ರ ಕಾರ್​ ಹತ್ತಿನಿ – ಇಲ್ಲಾಅಂದ್ರೆ ಡೋರ್ ಹಾಕೋದಕ್ಕೂ ಬಿಡಲ್ಲ – ಪೊಲೀಸರ ಎದ್ರು ಬೆಳಗೆರೆ ಹೈ ಡ್ರಾಮ್​ 2. ನಿನ್ನೆ ಮೌಖಿಕ, ಇಂದು ಲಿಖಿತ ಹೇಳಿಕೆ – ಸಿಸಿಬಿಯಿಂದ ರವಿ 2ನೇ ಪತ್ನಿ ಯಶೋಮತಿ ವಿಚಾರಣೆ – ಅತ್ತ ಸುನೀಲ್​ರಿಂದ ರಕ್ಷಣೆಗೆ ಮನವಿ 3. ಕನ್ನಡ ಜನರ ಓಟು ಪಡೆದು ಶಾಸಕರ ಮರಾಠಿ ಪ್ರೇಮ – ಸಂಜಯ್ ಪಾಟೀಲ್​ರಿಂದ ಕನ್ನಡ ವಿರೋಧಿ ಹೇಳಿಕೆ – ಶಾಸಕರ ನಡೆಗೆ ಜನರು ಕಿಡಿ 4. ಲಿಂಗಾಯತ ಸಮಾವೇಶದಲ್ಲಿ ಮೊಬೈಲ್ ಕಳ್ಳತನಕ್ಕೆ ಯತ್ನ – ತಗ್ಲಾಕೊಂಡವನಿಗೆ ಬಿತ್ತು ಹಿಗ್ಗಾಮುಗ್ಗಾ ಗೂಸಾ – ಒದ್ದು ಪೊಲೀಸರಿಗೆ ಒಪ್ಪಿಸಿದ ಜನ 5. ಗೋಲ್ಡ್​ ಆಗ್ತಿದಾರೆ ಅಕ್ಷಯ್ ಕುಮಾರ್ – ಧೋತಿಯಲ್ಲಿ ಕಿಲಾಡಿ ಚೇರ್​ ಸ್ಟಂಟ್ – ಸೋಶೀಯಲ್ ಮೀಡಿಯಾದಲ್ಲಿ ದೃಶ್ಯ ವೈರಲ್
Breaking News :

20 ಕೆಜಿ ತೂಕದ ಕ್ಯಾರೆಟ್!

Thursday, 12.10.2017, 3:01 AM       No Comments

ತಿ ಚಿಕ್ಕ ದೇಹ ಮತ್ತು ಅತಿ ದೊಡ್ಡ ದೇಹ, ಅತಿ ಹೆಚ್ಚು ತೂಕ ಎಂಬೆಲ್ಲ ವಿವಿಧ ರೀತಿಯ ಸಾಧನೆ ಮತ್ತು ದಾಖಲೆ ಮಾಡುವರನ್ನು ನೋಡಿದ್ದೇವೆ. ಕೆಲವರು ಆಕಸ್ಮಿಕವಾಗಿ ದಾಖಲೆ ಮಾಡಿದರೆ, ಮತ್ತೆ ಕೆಲವರು ಉದ್ದೇಶಪೂರ್ವಕ ವಾಗಿಯೇ ದಾಖಲೆ ಮಾಡುತ್ತಾರೆ. ಅದೇ ರೀತಿ ಮಿನ್ನೆಸೋಟದ ರೈತನೊಬ್ಬ ಅತಿದೊಡ್ಡ ಕ್ಯಾರೆಟ್ ಬೆಳೆದು ದಾಖಲೆ ಮಾಡಿದ್ದಾನೆ.ರೈತ ಕ್ರಿಸ್ಟೋಫರ್ ಕ್ವಾಲಿ ಕ್ಯಾರೆಟ್​ಗಾಗಿ ಗಿನ್ನೆಸ್ ದಾಖಲೆಯಲ್ಲೂ ಹೆಸರು ಪಡೆದಿದ್ದಾನೆ. ಈತ ಬೆಳೆದ ಕ್ಯಾರೆಟ್ ಬರೋಬ್ಬರಿ 20.2 ಕೆ.ಜಿ. ಇತ್ತು. ಓಸ್ಟೆಗೋದ ಫಾಮರ್್​ನಲ್ಲಿ ಕ್ಯಾರೆಟ್ ಬೆಳೆದಿದ್ದಾನೆ. ದೊಡ್ಡ ಗಾತ್ರದ ತರಕಾರಿ ಬೆಳೆದು ಸಾಧನೆ ಮಾಡಬೇಕು ಎಂದು ಕ್ರಿಸ್ಟೋಫರ್ ಅಂದುಕೊಂಡಿದ್ದು, ಹಲವು ಬಾರಿ ಸೋತು ಈ ಬಾರಿ ಸಫಲವಾಗಿದ್ದಾರೆ. ಹಿಂದೆ ಹಲವರು ಅತಿ ದೊಡ್ಡ ಹೂಕೋಸು, ಕುಂಬಳಕಾಯಿ ಬೆಳೆದು ಗಿನ್ನೆಸ್ ದಾಖಲೆ ಮಾಡಿದ್ದರು. ಅದರಂತೆ ತಾನೂ ಕೆಲವು ತರಕಾರಿ ಬೆಳೆಯಲ್ಲೂ ಪ್ರಯೋಗ ಮಾಡುತ್ತಿದ್ದು, 6 ಕೆ.ಜಿ.ಗೂ ಮಿಗಿಲಾದ ಟೊಮ್ಯಾಟೊ ಬೆಳೆದಿದ್ದೇನೆ ಎನ್ನುತ್ತಾರೆ ಕ್ರಿಸ್ಟೋಫರ್. -ಏಜೆನ್ಸೀಸ್

Leave a Reply

Your email address will not be published. Required fields are marked *

Back To Top