Thursday, 20th September 2018  

Vijayavani

Breaking News

ರಜನಿಕಾಂತ್​, ಅಕ್ಷಯ್​​ ಅಭಿಯನದ ಬಹುನಿರೀಕ್ಷಿತ 2.0 ಚಿತ್ರದ ಟೀಸರ್​ ಬಿಡುಗಡೆ

Thursday, 13.09.2018, 10:53 AM       No Comments

ಮುಂಬೈ: ಸೂಪರ್​ಸ್ಟಾರ್​ ರಜನಿಕಾಂತ್​ ಹಾಗೂ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಮೊದಲ ಬಾರಿಗೆ ಜತೆಯಾಗಿ ನಟಿಸಿರುವ ಬಹುನಿರೀಕ್ಷಿತ ಹಾಗೂ ಬಹುಕೋಟಿ ವೆಚ್ಚದ 2.0 ಚಿತ್ರದ ಟೀಸರ್​ ಗಣೇಶ ಚತುರ್ಥಿ ದಿನದಂದು ಬಿಡುಗಡೆಯಾಗಿದೆ. ಈ ಮೂಲಕ ಚಿತ್ರತಂಡ ಅಭಿಮಾನಿಗಳಿಗೆ ಹಬ್ಬದ ಉಡುಗೊರೆಯನ್ನು ನೀಡಿದೆ.

ಶಂಕರ್​ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರ ಸಾಕಷ್ಟು ನಿರೀಕ್ಷೆಯನ್ನು ಮೂಡಿಸಿದೆ. 2010ರಲ್ಲಿ ಇವರ ನಿರ್ದೇಶನದಲ್ಲೇ ಮೂಡಿಬಂದ ಎಂದಿರನ್​ ಚಿತ್ರ ಸಿಕ್ಕಾಪಟ್ಟೆ ಹಿಟ್​ ಆಗಿತ್ತು. ಇದರ ಮುಂದುವರಿದ ಭಾಗವಾಗಿ 2.0 ಮೂಡಿಬಂದಿದೆ.

ಅಕ್ಷಯ್​ ಕುಮಾರ್​ ಚಿತ್ರದಲ್ಲಿ ಖಳನಾಯಕ ಪಾತ್ರದಲ್ಲಿ ಅಭಿನಯಿಸಿದ್ದು, ವಿಭಿನ್ನ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ರೋಬೋಟ್​ ಪಾತ್ರದಲ್ಲಿ ನಾಯಕ ರಜನಿಕಾಂತ್ ಮಿಂಚಿದ್ದು, ಎಂದಿನಂತೆ ಈ ಚಿತ್ರದಲ್ಲೂ ತಮ್ಮ ಸ್ಟೈಲ್​​​​ ತೋರಿಸಲಿದ್ದಾರೆ.

ದುಬಾರಿ ಸಿನಿಮಾ ಎಂಬ ಖ್ಯಾತಿಗೆ ‘ಬಾಹುಬಲಿ’ ಚಿತ್ರ ಪಾತ್ರವಾಗಿತ್ತು. ಇದೀಗ ಆ ಸ್ಥಾನಕ್ಕೆ ‘2.0’ ಚಿತ್ರ ಲಗ್ಗೆ ಇಟ್ಟಿದೆ. ಚಿತ್ರತಂಡವೇ ನೀಡಿರುವ ಮಾಹಿತಿ ಪ್ರಕಾರ, ಈ ಸಿನಿಮಾಗೆ ಬರೋಬ್ಬರಿ 543 ಕೋಟಿ ರೂ. ಖರ್ಚಾಗಿದೆ!. ವಿಶ್ವದಾದ್ಯಂತ 3 ಸಾವಿರ ತಂತ್ರಜ್ಞರು ಈ ಚಿತ್ರಕ್ಕಾಗಿ ದುಡಿದಿದ್ದಾರೆ.

ಮೂಲಗಳ ಪ್ರಕಾರ, 15 ಭಾಷೆಗಳಿಗೆ ‘2.0’ ಡಬ್ ಆಗಲಿದೆ. ಚಿತ್ರೀಕರಣೋತ್ತರ ಕೆಲಸಗಳಿಗೆ 100 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. 3ಡಿ ರೂಪದಲ್ಲಿ ಸಿದ್ಧಗೊಂಡಿರುವ ‘2.0’ಗೆ ಎ.ಆರ್. ರೆಹಮಾನ್ ಸಂಗೀತ ನೀಡಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top