Wednesday, 21st February 2018  

Vijayavani

ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಗೂಂಡಾಗಿರಿ ಪ್ರಕರಣ - ಬೌರಿಂಗ್​ ಆಸ್ಪತ್ರೆಯಲ್ಲಿ ಮೆಡಿಕಲ್​ ಟೆಸ್ಟ್​ ಕಂಪ್ಲೀಟ್​​ - ಕೋರ್ಟ್​ಗೆ ಆರೋಪಿಗಳು ಹಾಜರ್​​​        ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಆರಂಭ - ವಾದ ಮಂಡನೆಗೆ ಅವಕಾಶ ಕೋರಿ ಮಧ್ಯಂತರ ಅರ್ಜಿ - ಸರ್ಕಾರದ ಮೇಲೆ ನಂಬಿಕೆಯಿಲ್ಲ ಎಂದು ಆಲಂ ಪಾಷ ಅರ್ಜಿ        ಇಂದಿನಿಂದ ಬಾಹುಬಲಿ ಹೆಲಿ ಟೂರಿಸಂ - ಜಸ್ಟ್​​​ 2,100 ರೂಪಾಯಿಗೆ 8 ನಿಮಿಷ ಹಾರಾಟ - ಫೆಬ್ರವರಿ 25 ಬರ್ತಿದ್ದಾರೆ ಕೇಂದ್ರ ಗೃಹ ಸಚಿವರು        ಮುಗಿಯದ ಭೈರತಿ ಬಸವರಾಜ್ ಬೆಂಬಲಿಗರ ದರ್ಪ - ಪೇದೆ ಮೇಲೆ ಗೂಂಡಾಗಳ ಹಲ್ಲೆ - ಆರೋಪ ತಳ್ಳಿ ಹಾಕಿದ ಕಾಂಗ್ರೆಸ್​​​​​ ಶಾಸಕ        ಹೋಂ ಮಿನಿಸ್ಟರ್‌ ಹೆಸರಲ್ಲಿ ಭಾರಿ ಆಸ್ತಿ ಆರೋಪ - ದಿಗ್ವಿಜಯ ನ್ಯೂಸ್‌ನಲ್ಲಿ ದಾಖಲೆ ಬಯಲು - ಆರೋಪ ನಿರಾಕರಿಸಿದ ರಾಮಲಿಂಗಾರೆಡ್ಡಿ       
Breaking News

17 ತಿಂಗಳ ಮಗುವಿನ ಬೆಸ್ಟ್ ಫ್ರೆಂಡ್

Thursday, 14.09.2017, 3:00 AM       No Comments

ಸಾಕಷ್ಟು ಜನರು ನಾಯಿಗಳನ್ನು ಸಾಕುವುದೇ ತಮ್ಮ ಮನೋಲ್ಲಾಸಕ್ಕಾಗಿ. ಆದರೆ, ಕೆಲ ನಾಯಿಗಳು ಹುಟ್ಟುತ್ತಲೇ ಕಿವುಡು ಅಥವಾ ಕುರುಡಾಗಿ ಜನಿಸುತ್ತವೆ. ಅಂಥವನ್ನು ಇಷ್ಟಪಡುವವರು, ಸಾಕುವವರು ತೀರಾ ವಿರಳ. ನ್ಯೂಯಾರ್ಕ್​ನ ಮರಿಯನ್ ಡೇವರ್ (30) ಇದಕ್ಕೆ ತದ್ವಿರುದ್ಧ. ಕಿವುಡು ಹಾಗೂ ಸ್ವಲ್ಪ ದೃಷ್ಟಿ ದೋಷವಿದ್ದ ಗ್ರೇಟ್ ಡೇನ್ ಜಾತಿಯ ಹೆಣ್ಣು ನಾಯಿಯನ್ನು ಅದರ ಮೊದಲ ಯಜಮಾನ ಮನೆಯಿಂದ ಹೊರಹಾಕಲು ಯೋಚಿಸಿದ್ದಾಗ ಅದನ್ನು ತಂದು ಸಾಕಿದರು.

ಮರಿಯನ್ ಗರ್ಭಿಣಿಯಾಗಿದ್ದಾಗ ಪ್ರೀತಿಯ ನಾಯಿ ‘ಎಕೋ’ ಯಾವಾಗಲೂ ಮರಿಯನ್ ಹೊಟ್ಟೆಯ ಮೇಲೆ ಮಲಗುತ್ತಿತ್ತಂತೆ. ಆಗಲೇ, ಮಗುವಿಗೆ ನಾಯಿ ಒಳ್ಳೆಯ ಸ್ನೇಹಿತನಾಗಿರುತ್ತದೆ ಎಂದು ಮರಿಯನ್​ಅವರಿಗೆ ಅನಿಸಿತಂತೆ. ಈಗ 3 ವರ್ಷದ ಎಕೋ ಮತ್ತು ಮರಿಯನ್​ಳ 17 ತಿಂಗಳ ಮಗು ಜೆನ್ ಒಳ್ಳೆಯ ಸ್ನೇಹಿತರು. ಪ್ರತಿದಿನ ಮಿಸ್ ಮಾಡದೆ ವಾಕಿಂಗ್ ಹೋಗುತ್ತಾರೆ. ಹೊಸಬರು ಯಾರಾದರೂ ಬರುತ್ತಿದ್ದಾರೆ ಎಂದು ತಿಳಿದ ಕೂಡಲೆ ಎಕೋ ಮಗುವಿನ ಮುಂದೆ ಬಂದು ಕೂರುತ್ತದೆ. ಮಗುವಿಗೆ ಯಾವ ತೊಂದರೆ ಆಗದಂತೆ ರಕ್ಷಣೆ ನೀಡುತ್ತದೆ. ಎಕೋಗೆ ಕಿವಿ ಕೇಳದ ಕಾರಣ ಜೆನ್ ಕೂಡ ದೊಡ್ಡವರಂತೆ ಸಂಜ್ಞೆಗಳ ಮೂಲಕ ಎಕೋ ಜತೆ ಮಾತನಾಡುತ್ತಾಳೆ. ಇಬ್ಬರೂ ಉತ್ತಮ ಬಾಂಧವ್ಯ ಹೊಂದಿದ್ದಾರೆ ಎಂದು ನೆರೆಹೊರೆಯವರು ಮಾತನಾಡುತ್ತಾರೆ. -ಏಜೆನ್ಸೀಸ್

 

Leave a Reply

Your email address will not be published. Required fields are marked *

Back To Top