Saturday, 18th November 2017  

Vijayavani

1. ಮುಷ್ಕರ ಬಿಕ್ಕಟ್ಟು ಇತ್ಯರ್ಥಕ್ಕೆ ಸಿಎಂ ಸಭೆ- ವೈದ್ಯಕೀಯ ಸಂಘದ ಜತೆ ಮೀಟಿಂಗ್- ಬಗೆಹರಿಯುತ್ತಾ ಖಾಸಗಿ ವಿಧೇಯಕ ಗೊಂದಲ 2. ಖಾಸಗಿ ವೈದ್ಯರ ಮುಷ್ಕರ ವಿಚಾರ- ಹೈಕೋರ್ಟ್‌ನಲ್ಲಿ ಪಿಐಎಲ್‌ ವಿಚಾರಣೆ- ಖಡಕ್‌ ಸೂಚನೆ ನೀಡುತ್ತಾ ಹೈಕೋರ್ಟ್..? 3. ಐದನೇ ದಿನ, ಬಲಿಯಾದವರು ಹನ್ನೊಂದು ಜನ- ವೈದ್ಯರ ಮುಷ್ಕರಕ್ಕೆ ಅಮಾಯಕರ ಸಾವು- ಪ್ರತಿಷ್ಠೆ ಬಿಡಿ, ಕರ್ತವ್ಯಕ್ಕೆ ಬನ್ನಿ 4. ಕಾವೇರಿ ಬಳಿಕ ತಮಿಳುನಾಡು ಮತ್ತೊಂದು ಕ್ಯಾತೆ- ಮೈಸೂರು ಪಾಕ ತಮ್ಮದೆಂದು ವಾದ- ಸೋಷಿಯಲ್ ಮೀಡಿಯಾದಲ್ಲಿ ಶುರು ಸಿಹಿ ಸಮರ 5. ಪತ್ರಕರ್ತೆ ಮೇಲೆ ಎರಗಿದ ಕಿಡಿಗೇಡಿ- ದೆಹಲಿ ಮೆಟ್ರೋ ಸ್ಟೇಷನ್‌ನಲ್ಲಿ ಲೈಂಗಿಕ ಕಿರುಕುಳ- ಸಿಸಿಟಿವಿ ಆಧರಿಸಿ ಆರೋಪಿ ಸೆರೆ
Breaking News :

16 ಅಮರನಾಥ ಯಾತ್ರಿಕರ ದುರ್ಮರಣ

Monday, 17.07.2017, 3:03 AM       No Comments

ರಾಂಬನ್/ಜಮ್ಮು: ಅಮರನಾಥ ಯಾತ್ರಿಕರ ಮೇಲೆ ನಡೆದ ಉಗ್ರ ದಾಳಿಯ ಕರಾಳ ನೆನಪು ಮಾಸುವ ಮುನ್ನವೇ ಜಮ್ಮು-ಕಾಶ್ಮೀರದಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಭಾನುವಾರ ಅಮರನಾಥ ಯಾತ್ರಿಕರಿದ್ದ ಬಸ್ ಕಂದಕಕ್ಕೆ ಉರುಳಿದ್ದು, 16 ಜನರು ಮೃತಪಟ್ಟು, 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

40-42 ಯಾತ್ರಿಕರು ಜಮ್ಮುವಿನಿಂದ ಶ್ರೀನಗರಕ್ಕೆ ವಾಪಾಸಾಗುತ್ತಿದ್ದರು. ರಾಂಬನ್​ನ ಬನಿಹಾಲ್ ಪ್ರದೇಶದಲ್ಲಿ ಸಾಗುತ್ತಿದ್ದಾಗ ಬಸ್ಸಿನ ಟೈರ್ ಸ್ಪೋಟಗೊಂಡಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಸ್ಸು ಕಂದಕಕ್ಕೆ ಉರುಳಿದೆ. ಪೊಲೀಸರು, ರಾಜ್ಯ ವಿಪತ್ತು ನಿರ್ವಹಣಾ ಪಡೆ ಹಾಗೂ ಭಾರತೀಯ ಸೇನೆ ರಕ್ಷಣಾ ಕಾರ್ಯದಲ್ಲಿ ತೊಡಗಿತ್ತು. ರಕ್ಷಣಾ ಕಾರ್ಯದಲ್ಲಿ ಸ್ಥಳೀಯರು ಕೈಜೋಡಿಸಿದ್ದರು. ಗಾಯಗೊಂಡವರಲ್ಲಿ 19 ಜನರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಏರಿಕೆ ಆಗುವ ಸಾಧ್ಯತೆ ಇದೆ.

2 ಲಕ್ಷ ರೂ. ಪರಿಹಾರ: ಪ್ರಧಾನಿ ನರೇಂದ್ರ ಮೋದಿ ಅವರು ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ಘೊಷಿಸಿದ್ದಾರೆ.

ಈವರೆಗೆ 40 ಯಾತ್ರಿಕರ ಸಾವು: ಅಮರನಾಥ ಯಾತ್ರೆಯ ಮೊದಲ 18 ದಿನಗಳಲ್ಲಿ ವಿವಿಧ ಕಾರಣಗಳಿಂದ 40 ಯಾತ್ರಿಕರು ಮೃತಪಟ್ಟಿದ್ದಾರೆ. 14 ಮಂದಿ ಹೃದಯಾಘಾತದಿಂದ, ಜುಲೈ 10ರಂದು ನಡೆದ ದಾಳಿಯಲ್ಲಿ 8, ಬಸ್ ಅಪಘಾತದಲ್ಲಿ 16 ಹಾಗೂ ಇತರ ಕೆಲ ಕಾರಣಗಳಿಂದ ಇಬ್ಬರು ಯಾತ್ರಿಕರು ಮೃತಪಟ್ಟಿದ್ದಾರೆ.

ಹೊಸ ತಂಡದಿಂದ ಯಾತ್ರೆ: ಅಮರನಾಥ ಯಾತ್ರೆ ಕೈಗೊಳ್ಳಲು 3,603 ಯಾತ್ರಿಗಳನ್ನೊಳಗೊಂಡ 17ನೇ ತಂಡ ಬಿಗಿ ಭದ್ರತೆ ನಡುವೆ ಭಾನುವಾರ ಜಮ್ಮುವಿಗೆ ಪ್ರಯಾಣ ಆರಂಭಿಸಿದೆ. ಜೂನ್ 28ರಿಂದ ಯಾತ್ರೆ ಆರಂಭಗೊಂಡಿದ್ದು, ಶನಿವಾರ ಸಂಜೆವರೆಗೆ 1,95,491 ಯಾತ್ರಿಕರು ಹಿಮಲಿಂಗದ ದರ್ಶನ ಪಡೆದಿದ್ದಾರೆ. -ಏಜೆನ್ಸೀಸ್

ಉಗ್ರ ದಾಳಿಗೆ ಮೃತರ ಸಂಖ್ಯೆ 8ಕ್ಕೆ ಏರಿಕೆ

ಅಮರನಾಥ ಯಾತ್ರಿಕರ ಮೇಲೆ ಕಳೆದ ಸೋಮವಾರ ನಡೆದ ದಾಳಿಯಲ್ಲಿ ಗಾಯಗೊಂಡಿದ್ದ ಮಹಿಳೆ ಭಾನುವಾರ ಮೃತಪಟ್ಟಿದ್ದು, ಸಾವಿನ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ದಾಳಿ ಸಂದರ್ಭದಲ್ಲಿ 7 ಜನರು ಮೃತಪಟ್ಟು, 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು. ಆಸ್ಪತ್ರೆಗೆ ದಾಖಲಾಗಿದ್ದ ಲಲಿತಾ (37) ಎಂಬುವವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಧಾನಿ ಸಂತಾಪ

ಮೃತರಿಗೆ ಪ್ರಧಾನಿ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ಜಮ್ಮು-ಕಾಶ್ಮೀರದಲ್ಲಿ ಸಂಭವಿಸಿದ ಬಸ್ ಅಪಘಾತದಲ್ಲಿ ಅಮರನಾಥ ಯಾತ್ರಿಕರು ಮೃತಪಟ್ಟಿರುವುದು ತೀವ್ರ ನೋವನ್ನುಂಟು ಮಾಡಿದೆ. ಗಾಯಾಳುಗಳು ಬೇಗ ಗುಣಮುಖರಾಗಲಿ ಎಂದು ದೇವರಬಳಿ ಪ್ರಾರ್ಥಿಸಿಕೊಳ್ಳುತ್ತೇನೆ’ ಎಂದಿದ್ದಾರೆ.

Leave a Reply

Your email address will not be published. Required fields are marked *

Back To Top