Saturday, 20th October 2018  

Vijayavani

ಚೀಪ್ ಮೆಂಟಾಲಿಟಿ ನನಗಿಲ್ಲ - ಇದರ ಹಿಂದೆ ಕೈವಾಡ ಇರಬಹುದು - ನಟಿ ಶ್ರುತಿ ಹರಿಹರನ್ ಆರೋಪ ತಳ್ಳಿಹಾಕಿದ ಅರ್ಜುನ್ ಸರ್ಜಾ        ಸ್ಯಾಂಡಲ್​ವುಡ್​​ನಲ್ಲಿ ಮೀ ಟೂ - ನಾಳೆ ಸುದ್ದಿಗೋಷ್ಠಿಯಲ್ಲಿ ಶ್ರುತಿ ಹಾಕ್ತಾರಾ ಬಾಂಬ್ - ನಟಿ ವಿರುದ್ಧ ಗುಡುಗಿದ ಅರ್ಜುನ್ ಸರ್ಜಾ ಅತ್ತೆ        ಧರ್ಮ ವಿಚಾರದಲ್ಲಿ ಡಿಕೆಶಿ ಕ್ಷಮೆಯಾಚನೆಗೆ ಸಿದ್ದು ಸಿಟ್ಟು - ಒಂದೇ ವೇದಿಯಲ್ಲಿದ್ರೂ ಮುಖ ಮುಖ ನೋಡಲಿಲ್ಲ - ಜಂಟಿ ಸುದ್ದಿಗೋಷ್ಠಿಯಲ್ಲಿ ನಾಯಕರ ಮಹಾ ಮುನಿಸು        ಜೆಡಿಎಸ್‌, ಕಾಂಗ್ರೆಸ್‌ನ ಸುದ್ದಿಗೋಷ್ಠಿ - ಕಾಂಗ್ರೆಸ್‌, ಜೆಡಿಎಸ್‌ ಜಂಟಿ ಸಮರಕ್ಕೆ ಬಿಜೆಪಿ ವ್ಯಂಗ್ಯ- ಟ್ವೀಟ್‌ ಮೂಲಕ ಟಾಂಗ್‌        ಒಂದೇ ಮನಸ್ಸು ಎರಡು ದೇಹ ಅಂದ್ರು ಸಿಎಂ - ಈ ಜನ್ಮದಲ್ಲಿ ಗೌಡ್ರು-ಸಿದ್ದು ಒಂದಾಗಲ್ಲ ಅಂದ್ರು ಕಾರಜೋಳ - ದೋಸ್ತಿಗಳಿಗೆ ಬಿಜೆಪಿ ನಾಯಕರ ಟಕ್ಕರ್        ಗದಗಿನ ತೋಂಟದಾರ್ಯ ಶ್ರೀಗಳು ಲಿಂಗೈಕ್ಯ - ಹೃದಯಾಘಾತದಿಂದ ಗದಗ್‌ನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶ - ನಾಳೆ ಗದಗದಲ್ಲಿ ಅಂತ್ಯಕ್ರಿಯೆ       
Breaking News

ಟೈಕಾನ್ ಸಮಾವೇಶಕ್ಕೆ ಗಣ್ಯ ಚಿಂತಕರು

Sunday, 14.01.2018, 3:18 AM       No Comments

ಹುಬ್ಬಳ್ಳಿ: ಟೈ ಹುಬ್ಬಳ್ಳಿ ಶಾಖೆಯ ಟೈಕಾನ್ ಸಮಾವೇಶ ಜ. 20 ಹಾಗೂ 21ರಂದು ನಗರದ ಹೊಟೇಲ್ ಡೆನಿಸನ್ಸ್​ನಲ್ಲಿ ಹಮ್ಮಿಕೊಳ್ಳಲಾಗಿದೆ. ದೇಶವನ್ನು ಮುನ್ನಡೆಸುತ್ತಿರುವ ಹೊಸ ರಚನಾತ್ಮಕ ಸುಧಾರಣಾ ಕ್ರಮಗಳ ಹಿನ್ನೆಲೆಯಲ್ಲಿ ಉದ್ಯಮಿಗಳು ತಮ್ಮ ವ್ಯವಹಾರಗಳನ್ನು ಯಾವ ರೀತಿಯಲ್ಲಿ ಮರು ವ್ಯಾಖ್ಯಾನಿಸಿಕೊಳ್ಳಬಹುದು ಎಂಬುದು ಸಮಾವೇಶದ ಉದ್ದೇಶವಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ನವ ಯುಗದ ಉದ್ಯಮಿಗಳು ಎಂಥಾ ಬದಲಾವಣೆಗೆ ಕಾರಣರಾಗುತ್ತಿದ್ದಾರೆ ಎಂಬ ವಿಷಯದ ಕುರಿತು ಚರ್ಚೆ ನಡೆಯಲಿದೆ.

ಉದ್ಯಮ ಜಗತ್ತಿನಲ್ಲಿ ಹಾಗೂ ಸಾಮಾಜಿಕವಾಗಿ ಸಾಕಷ್ಟು ಬದಲಾವಣೆಯನ್ನು ತಂದಿರುವ ದಿಗ್ಗಜರು, ಗಣ್ಯರು, ಖ್ಯಾತನಾಮ ಉದ್ಯಮಿಗಳು ಪಾಲ್ಗೊಳ್ಳಲಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಉದ್ಯಮ ಕ್ಷೇತ್ರದಲ್ಲಿ ಗಣನೀಯ ಕೊಡುಗೆಯನ್ನು ನೀಡಿದ ಖ್ಯಾತ ಉದ್ಯಮಿಗಳಿಗೆ ಪ್ರಶಸ್ತಿ ಸಹ ನೀಡಲಾಗುತ್ತಿದೆ. ಜೀವಮಾನ ಸಾಧನೆ, ಉತ್ತಮ ಉದ್ಯಮಿ ಪುರುಷ, ಉದ್ಯಮ ಉದ್ಯಮಿ ಮಹಿಳೆ, ಯುವ ಉದ್ಯಮಿ ಪುರುಷ ಹಾಗೂ ಮಹಿಳೆ ಹೀಗೆ 5 ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುವುದು.

ಪಾಲ್ಗೊಳ್ಳುವ ಗಣ್ಯರ ಪರಿಚಯ

ಟಿ.ವಿ. ಮೋಹನದಾಸ ಪೈ: ಮಣಿಪಾಲ ವಿವಿಯ ಚೇರಮನ್ ಆಗಿರುವ ಇವರು ಐಟಿ ದಿಗ್ಗಜ ಇನ್ಪೋಸಿಸ್​ನ ಮುಖ್ಯ ಹಣಕಾಸು ಅಧಿಕಾರಿಯಾಗಿಯೂ ಕಾರ್ಯನಿರ್ವಹಿಸಿದ್ದರು. ವೃತ್ತಿಯಲ್ಲಿ ಚಾರ್ಟೆಡ್ ಅಕೌಂಟಂಟ್ ಅಗಿರುವ ಇವರು ಹಣಕಾಸು ಕ್ಷೇತ್ರದಲ್ಲಿ ಗಣನೀಯ ಕೊಡುಗೆ ನೀಡಿರುವುದಲ್ಲದೇ ಅಕ್ಷಯ ಪಾತ್ರ ಫೌಂಡೇಶನ್ ಮೂಲಕ ಸಮಾಜಕ್ಕೆ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ಹಲವು ಯಶಸ್ವಿ ನವೋದ್ಯಮ (ಸ್ಟಾರ್ಟ್​ಅಪ್) ಗಳಲ್ಲಿ ಬಂಡವಾಳ ಹೂಡಿ ಉತ್ತೇಜನ ನೀಡುತ್ತಿದ್ದಾರೆ.

ಸಂಜೀವ ಕಪೂರ: ಕಳೆದ 18 ವರ್ಷಗಳಿಂದ ಟೆಲಿವಿಷನ್​ನಲ್ಲಿ ಪಾಕಶಾಸ್ತ್ರ ಶೋ ಮೂಲಕ ಜನಪ್ರಿಯರಾಗಿರುವ ಸಂಜೀವ ಕಪೂರ್ ಪದ್ಮಶ್ತಿ ಪ್ರಶಸ್ತಿ ಪುರಸ್ಕೃತರು. ಸ್ವಂತ ಟಿಲಿವಿಷನ್ ಚಾನಲ್ ಹೊಂದಿರುವ ಬಾಣಸಿಗ ಈತ. ಫೋರ್ಬ್ಸ್ ಮ್ಯಾಗಜೀನ್ ಪ್ರಕಾರ ಭಾರತದ ಖ್ಯಾತ 100 ಸೆಲಿಬ್ರಿಟಿಗಳಲ್ಲಿ ಸ್ಥಾನ ಪಡೆದಿದ್ದಾರೆ.

ಪಿ.ಜಿ. ಕಾಮತ್: ಆರ್ವಿು ವಾರ್ ಕಾಲೇಜ್ ಕಮಾಂಡಂಟ್ ಆಗಿ ಸೇವೆ ಸಲ್ಲಿಸಿದ ಲೆಫ್ಟಿನೆಂಟ್ ಜನರಲ್ ಪಿ.ಜಿ. ಕಾಮತ, 40 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದವರು. ಉತ್ತಮ ಸೇವೆಗೆ ಅವರು 4 ಬಾರಿ ರಾಷ್ಟ್ರಪತಿ ಪ್ರಶಸ್ತಿ ಪಡೆದಿದ್ದಾರೆ. ನಿವೃತ್ತಿಯ ಬಳಿಕ ಯುವ ಜನರನ್ನು ಉತ್ತೇಜಿಸುವ ಕೆಲಸ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *

Back To Top