Sunday, 24th June 2018  

Vijayavani

ಆಪ್ತರ ಜತೆ ಮಾಜಿ ಸಿಎಂ ಸಭೆ ಹಿನ್ನೆಲೆ - ಸಿದ್ದರಾಮಯ್ಯ ಭೇಟಿಗೆ ತೆರಳಿದ ಪರಂ - ರಾಜಕೀಯ ವಿಚಾರಗಳ ಬಗ್ಗೆ ನಾಯಕರ ಚರ್ಚೆ ಸಾಧ್ಯತೆ        ಪ್ರಕೃತಿ ಚಿಕಿತ್ಸಾಲಯದಿಂದ ಹೊರ ಬಂದ ಸಿದ್ದು - ಅಭಿಮಾನಿಗಳ ಜತೆ ಮಾಜಿ ಸಿಎಂ ಚರ್ಚೆ - ಕೈ ಕಾರ್ಯಕರ್ತರ ಜತೆ ಸೆಲ್ಫಿಗೆ ಫೋಸ್​​        ಶಿವಮೊಗ್ಗದಲ್ಲಿ ಮತ್ತೆ ಝಳಪಿಸಿದ ಮಾರಕಾಸ್ತ್ರ - ರೌಡಿ ಶೀಟರ್​​​ ಹಬೀಬ್​ ಬರ್ಬರ ಹತ್ಯೆ - ತುಂಗಾನಗರ ಠಾಣೆಯಲ್ಲಿ ಪ್ರಕರಣ        ಖಾತೆ ಹಂಚಿಕೆಯಾಯ್ತು, ಈಗ ಬಂಗಲೆ ಸರದಿ - ಒಂದೊಂದು ಬಂಗಲೆಗೆ ಮೂವರ ಪೈಪೋಟಿ - ಸಿಎಂ ಕುಮಾರಸ್ವಾಮಿಗೆ ಬಂಗಲೆ ಕೊಡೋದೇ ಚಿಂತೆ        ಹಿಟ್​​ಲಿಸ್ಟ್​​ನಲ್ಲಿದ್ದ 20 ಉಗ್ರರ ಪೈಕಿ ಇಬ್ಬರು ಫಿನಿಶ್ - ಕುಲ್ಗಾಮದಲ್ಲಿ ಇಬ್ಬರು ಎಲ್​​ಇಟಿ ಉಗ್ರರು ಉಡೀಸ್​ - ಶಸ್ತ್ರ ಸಹಿತ ಒಬ್ಬ ಟೆರರ್​ ಸರೆಂಡರ್        ಮನೆಗಾಗಿ ಕಣ್ಣೀರಿಟ್ಟ ವೃದ್ಧೆಗೆ ಶಾಸಕರ ಸಹಾಯ - 20 ಸಾವಿರ ಹಣ ನೀಡಿದ ಡಾ.ರಂಗನಾಥ - ದಿಗ್ವಿಜಯ ನ್ಯೂಸ್​ ವರದಿಗೆ ಸ್ಪಂದಿಸಿದ ಕುಣಿಗಲ್​ ಶಾಸಕ       
Breaking News

14 ಪ್ರತಿಭೆಗಳು ರಾಜ್ಯಮಟ್ಟಕ್ಕೆ ಆಯ್ಕೆ

Thursday, 14.06.2018, 5:10 AM       No Comments

ಹುಣಸೂರು: ಮೈಸೂರಿನ ಟೆರೇಷಿಯನ್ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮೈಸೂರು ವಲಯದ ಸ್ಪೋರ್ಟ್ಸ್ ಡಾನ್ಸ್ ಚಾಂಪಿಯನ್​ಶಿಪ್-2018-19ರ ಸ್ಪರ್ಧೆಗಳಲ್ಲಿ ಹುಣಸೂರಿನ ಕಾವೇರಿ ಎಕ್ಸ್​ಪ್ರೆಸ್ ಡಾನ್ಸ್ ಅಕಾಡೆಮಿಯ 14 ಪ್ರತಿಭೆಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸಮಗ್ರ ಪ್ರಶಸ್ತಿ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದಿದೆ ಎಂದು ಅಕಾಡೆಮಿ ಮುಖ್ಯಸ್ಥ ಬನ್ನಿಕುಪ್ಪೆ ಮಹದೇವಸ್ವಾಮಿ ಹೇಳಿದರು.

ಕರ್ನಾಟಕ ಸ್ಪೋಟ್ಸ್ ಡಾನ್ಸ್ ಅಸೋಷಿಯೇಷನ್ ಪ್ರಾಯೋಜಕತ್ವದಡಿ ಆಯೋಜಿಸಿದ್ದ ಸ್ಪರ್ಧೆಗಳಲ್ಲಿ ಹುಣಸೂರಿನ ಪುಟಾಣಿಗಳು ಸಾಧನೆ ಮಾಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜೂನಿಯರ್ ವಿಭಾಗದ ಜಾನಪದ ನೃತ್ಯ ತಂಡ ಪ್ರಥಮ ಸ್ಥಾನಗಳಿಸಿದೆ. ಜಾನಪದ ವಿಭಾಗದ ಇಬ್ಬರು ಸ್ಪರ್ಧಿಗಳು ನಡೆಸುವ ನೃತ್ಯ ವಿಭಾಗದ 14ವರ್ಷ ವಯೋಮಾನದ ಸ್ಪರ್ಧಿಗಳಲ್ಲಿ ಅಕಾಡೆಮಿಯ ಅನಿಲ್ ಮತ್ತು ದೀಕ್ಷಾ ಜೋಡಿ ಚಿನ್ನದ ಪದಕ, 12ವರ್ಷದೊಳಗಿನ ವಿಭಾಗದಲ್ಲಿ ಚೈತನ್ಯ ಮತ್ತು ಸತ್ಯ ಜೋಡಿ ಬೆಳ್ಳಿಪದಕ ಪಡೆದಿದ್ದಾರೆ. ಸೋಲೋ(ಪಾಶ್ಚಾತ್ಯ ನೃತ್ಯ) ಡಾನ್ಸ್ ವಿಭಾಗದಲ್ಲಿ ಅನಿಲ್ ಚಿನ್ನ ಮತ್ತು ದೀಕ್ಷಾ ಬೆಳ್ಳಿ ಪದಕ ಗಳಿಸಿದ್ದರೆ, 19ವರ್ಷ ವಯೋಮಾನದ ವಿಭಾಗದಲ್ಲಿ ಶಂಕರ್ ಬೆಳ್ಳಿಪದಕ ಗಿಟ್ಟಿಸಿಕೊಂಡಿದ್ದಾರೆ. 12ವರ್ಷದ ವಿಭಾಗದಲ್ಲಿ ಚೈತನ್ಯ ಮತ್ತು ಸತ್ಯ ಕಂಚಿನ ಪದಕ ಗಳಿಸಿದ್ದಾರೆ. ಮೈಸೂರು ವಲಯ ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳನ್ನೊಳಗೊಂಡಿದ್ದು, 400ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಮುಂದಿನ ತಿಂಗಳು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಸ್ಪರ್ಧೆಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು. ತರಬೇತುದಾರ ಅಷ್ವಕ್ ಇದ್ದರು.

Leave a Reply

Your email address will not be published. Required fields are marked *

Back To Top